ಹೆಸರು ಕಾಳು ಮಾರಾಟ ನೋಂದಣಿ; ದಿನಾಂಕ ವಿಸ್ತರಣೆಗೆ ಸಿಎಂ, ಸಚಿವರಿಗೆ ಪತ್ರ
ಧಾರವಾಡ, ಅಕ್ಟೋಬರ್ 06: ಹೆಸರು ಕಾಳು ಬೆಳೆದಿರುವ ರೈತರಿಗೆ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ನೋಂದಣಿ ಅವಧಿ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಈ ಕುರಿತು ಎನ್. ಹೆಚ್. ಕೋನರಡ್ಡಿ ಶಾಸಕರು, ನವಲಗುಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಪತ್ರವನ್ನು ಬರೆದಿದ್ದು, ನೋಂದಣಿ ಅವಧಿ ವಿಸ್ತರಣೆ ಮಾಡಬೇಕ ಮತ್ತು ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಖರೀದಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಪೋಸ್ಟ್ ಹಾಕಿರುವ ಶಾಸಕರು, ಧಾರವಾಡ ಜಿಲ್ಲೆಯ ನನ್ನ ನವಲಗುಂದ ವಿಧಾನಸಭಾ ಮತಕ್ಷೇತ್ರ ಹಾಗೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೆಸರು ಕಾಳು ಬೆಳೆದಿದ್ದು ಇನ್ನೂ ಸಾಕಷ್ಟು ರೈತರು ಹೆಸರು ಕಾಳು ಮಾರಾಟ ಮಾಡಲು ನೋಂದಣಿ ಮಾಡುವುದು ಬಾಕಿ ಉಳಿದಿರುತ್ತಾರೆ. ಸರ್ಕಾರ ದಿನಾಂಕ 07/10/2024 ನೋಂದಣಿ ಮಾಡಲು ಕೊನೆಯ ದಿನಾಂಕ ಎಂದು ಆದೇಶ ಹೊರಡಿಸಿತ್ತು ಎಂದು ಹೇಳಿದ್ದಾರೆ.

ಆದರೆ, ಈಗಾಗಲೇ ಕೇಂದ್ರ ಸರ್ಕಾರದ ಅಧೀನದಲ್ಲಿರುವ ನಾಫೇಡ್ ಸಂಸ್ಥೆಯವರು ಸರ್ಕಾರಕ್ಕೆ ನಿಗದಿ ಪಡೆಸಿದ ಗುರಿ 22,215 ಮೆಟ್ರಿಕ್ ಟನ್ ನಷ್ಟು ಗುರಿ ತಲುಪಿದೆ ಎಂದು ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರಿಂದ ಬಾಕಿ ಉಳಿದಂತಹ ರೈತರಿಗೆ ತೊಂದರೆಯಾಗಿದ್ದು ಕಾರಣ, ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಖರೀದಿಸಲು ಅನುಮತಿ ನೀಡಿ ದಿನಾಂಕ 15/10/2024ರ ತನಕ ನೋಂದಣಿ ಪ್ರಕ್ರಿಯೆ ಮುಂದುವರೆಸಿ ಎಂದು ತಿಳಿಸಿದ್ದಾರೆ.
ಈಗಾಗಲೇ ಮಳೆ ಹಾಗೂ ಹವಾಮಾನ ಬದಲಾವಣೆ ಕಾರಣ ಬಿಸಿಲಿನಲ್ಲಿ ಒಣಗಿಸಲು ರೈತರಿಗೆ ತೊಂದರೆಯಾಗುತ್ತಿದ್ದು, ತೇವಾಂಶವನ್ನು ಶೇ. 12ರ ಬದಲಾಗಿ ಶೇ.15 ರವರೆಗೆ ಹೆಚ್ಚಿಸಿ ರೈತರಿಂದ ಕೂಡಲೇ ಹೆಸರು ಕಾಳು ಖರೀದಿಸುವಂತೆ ಕ್ರಮ ತೆಗೆದುಕೊಳ್ಳಲು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಪೋಸ್ಟ್ ಹಾಕಿದ್ದಾರೆ.
ಪತ್ರದ ವಿವರ: ರಾಜ್ಯದಲ್ಲಿ ಹೆಸರು ಖರೀದಿ ಕೇಂದ್ರಗಳ ನೋಂದಣಿ ಪ್ರಕ್ರಿಯೆಯನ್ನು ಮುಂದುವರೆಸು ಕುರಿತು ಎಂಬ ವಿಷಯವನ್ನು ಪತ್ರ ಒಳಗೊಂಡಿದೆ. ಅಲ್ಲದೇ ಕೇಂದ್ರ ಸರ್ಕಾರದ ಪತ್ರ 22/08/2024 ಮತ್ತು ಸರ್ಕಾರದ ಆದೇಶ 24/08/2024 ಉಲ್ಲೇಖ ಮಾಡಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಮಾಡಿದ್ದು ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ರೂ. 8,682 ರಂತೆ ಗರಿಷ್ಠ 22,215 ಮೆಟ್ರಿಕ್ ಟನ್ ಗುಣಮಟ್ಟದ ಹೆಸರು ಕಾಳುಗಳನ್ನು ಖರೀದಿಸಲು ಮಾರ್ಗಸೂಚಿಗಳನ್ವಯ ಆದೇಶ ಹೊರಡಿಸಲಾಗಿದೆ.
ಧಾರವಾಡ ಜಿಲ್ಲೆಯ ನನ್ನ ನವಲಗುಂದ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೆಸರು ಕಾಳು ಬೆಳೆದಿದ್ದು ಇನ್ನೂ ಸಾಕಷ್ಟು ರೈತರು ಹೆಸರು ಕಾಳು ಮಾರಾಟ ಮಾಡಲು ನೋಂದಣಿ ಮಾಡವುದು ಬಾಕಿ ಉಳಿದಿರುತ್ತಾರೆ. ಸರ್ಕಾರ ದಿನಾಂಕ 07/10/2024 ನೋಂದಣಿ ಮಾಡಲು ಕೊನೆಯ ದಿನಾಂಕ ಎಂದು ಆದೇಶ ಹೊರಡಿಸಿತ್ತು.
ಆದರೆ, ಈಗಾಗಲೇ ಕೇಂದ್ರ ಸರ್ಕಾರದ ಅಧೀನದಲ್ಲಿರುವ ನಾಫೇಡ್ ಸಂಸ್ಥೆಯವರು ಸರ್ಕಾರ ನಿಗದಿ ಪಡೆಸಿದ ಗುರಿ ತಲುಪಿದೆ ಎಂದು ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರಿಂದ ಬಾಕಿ ಉಳಿದಂತಹ ರೈತರಿಗೆ ತೊಂದರೆಯಾಗಿದ್ದು ಕಾರಣ, ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಖರೀದಿಸಲು ಅನುಮತಿ ಪಡೆದು ದಿನಾಂಕ 15/10/2024ರ ವರೆಗೆ ನೋಂದಣಿ ಪಕ್ರಿಯೆ ಮುಂದುವರೆಸಿ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಮಳೆ ಹಾಗೂ ಹವಾಮಾನ ಬದಲಾವಣೆ ಕಾರಣ ಬಿಸಿಲಿನಲ್ಲಿ ಕಾಳು ಒಣಗಿಸಲು ರೈತರಿಗೆ ತೊಂದರೆಯಾಗುತ್ತಿದ್ದು, ತೇವಾಂಶವನ್ನು ಶೇ. 12ರ ಬದಲಾಗಿ ಶೇ.15ರವರೆಗೆ ಹೆಚ್ಚಿಸಿ ರೈತರಿಂದ ಕೂಡಲೇ ಹೆಸರು ಕಾಳು ಖರೀದಿಸಲು ಅನುಕೂಲ ಮಾಡಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ ಎಂದು ಪತ್ರದಲ್ಲಿ ಹೇಳಿದ್ದಾರೆ.












Click it and Unblock the Notifications