ಯಾವ ಬೆಳೆಗಳ ಬೆಂಬಲ ಬೆಲೆ ಎಷ್ಟು ಏರಿಕೆ ಮಾಡಿದೆ ಕೇಂದ್ರ ಸರ್ಕಾರ
ನವದೆಹಲಿ, ಜುಲೈ 04: ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಗಿಫ್ಟ್ ನಿಡಿದ್ದು, ಒಟ್ಟು 14 ಮುಂಗಾರಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿದೆ. ಭತ್ತಕ್ಕೆ ನೀಡುವ ಬೆಂಬಲ ಬೆಲೆ 200 ರೂಪಾಯಿ ಏರಿಕೆಯಾಗಿದೆ.
ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದ್ದು, 200 ರೂಪಾಯಿ ಪ್ರತಿ ಕ್ವಿಂಟಾಲ್‌ಗೆ ಬೆಂಬಲ ಬೆಲೆ ಏರಿಸಲಾಗಿದೆ. ಯಾವ ಬೆಳೆಯ ದರ ಈಗ ಎಷ್ಟಿದೆ ಇಲ್ಲಿದೆ ನೋಡಿ ಮಾಹಿತಿ.

| ಬೆಳೆ | ಈಗಿನ ದರ/ಕ್ವಿಂಟಾಲ್‌ಗೆ | ಹಿಂದಿನ ದರ/ಕ್ವಿಂಟಾಲ್‌ಗೆ | ಶೇಕಡಾವಾರು ಹೆಚ್ಚಳ (%) |
| ಎ ಗ್ರೇಡ್ ಭತ್ತ | 1770 | 1590 | 11 |
| ಭತ್ತ | 1750 | 1550 | 12.9 |
| ಜೋಳ | 1700 | 1425 | 19.3 |
| ಬೇಳೆ | 5675 | 5450 | 4.1 |
| ಉದ್ದಿನ ಬೇಳೆ | 5600 | 5400 | 3.7 |
| ಮೆಕ್ಕೆಜೋಳ | 2430 | 1725 | 42.5 |
| ಸಜ್ಜೆ | 1950 | 1425 | 36.8 |
| ರಾಗಿ | 2897 | 1900 | 52.5 |
| ಹೆಸರು ಬೇಳೆ | 6975 | 5575 | 25.1 |
| ಸೋಯಾಬೀನ್ | 3399 | 3050 | 11.4 |
| ಎಳ್ಳು | 6249 | 5300 | 17.9 |
| ಸೂರ್ಯಕಾಂತಿ ಬೀಜ | 5388 | 4100 | 31.4 |
| ಕಡಲೇ ಬೀಜ | 4890 | 4450 | 9.9 |
| ಹತ್ತಿ (ಮಧ್ಯಮ) | 5150 | 4020 | 28.1 |
| ಹತ್ತಿ (ಧೀರ್ಘ) | 5450 | 4320 | 26.1 |











Click it and Unblock the Notifications