ಬೆಂಗಳೂರಿನಲ್ಲಿ ಮತ್ತೆ ಬಂದಿದೆ ಮಾವು ಮೇಳ

Mango Mela Back in Bangalore
ಬೆಂಗಳೂರು ಜೂ 1: ಬೇಸಿಗೆ ಕಳೆದು ಮುಂಗಾರು ಹಿಡಿಯುವುದರೊಳಗೆ ಅಂತೂ ಹಣ್ಣುಗಳ ರಾಜ ಮಾವು ಮಾರುಕಟ್ಟೆ ಪ್ರವೇಶ ಪಡೆದಿದೆ. ಪ್ರತಿವರ್ಷದಂತೆ ಈ ವರ್ಷ ಹಾಪ್ ಕಾಮ್ಸ್ ಗಳಲ್ಲಿ ಜೂ 2 ರಿಂದ ಮಾವು ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಶೇ. 10ರ ರಿಯಾಯಿತಿ ದರದಲ್ಲಿ ನಗರದ ಸುಮಾರು 248 ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮಾವು ಖರೀದಿಸಬಹುದು ಎಂದು ಹಾಪ್ ಕಾಮ್ಸ್ ಅಧ್ಯಕ್ಷ ಬಿ ವಿ ಚಿಕ್ಕಣ್ಣ ಹೇಳಿದ್ದಾರೆ.

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮೂರು ಹಾಗೂ ಐದು ಕೆಜಿ ಪ್ಯಾಕಿಂಗ್ ಗಳಲ್ಲಿ ಬಾದಾಮಿ, ಮಲಗೋವಾ, ಮಲ್ಲಿಕಾ, ರತ್ನಗಿರಿ, ಆಲ್ಫೋನ್ಸಾ, ನೀಲಮ್, ರಸಪುರಿ, ಸಿಂಧೂರ, ದಶೇರಿ, ತೋತಾಪುರಿ ಮುಂತಾದ ವಿವಿಧ ತಳಿಗಳ ಮಾವುಗಳನ್ನು ಒಂದೇ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ.

ರೈತರಿಂದ ನೇರವಾಗಿ ಮಾವುಗಳನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಸುಮಾರು 1 ಸಾವಿರ ಟನ್ ಮಾವು ಮಾರಾಟವಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಸುಮಾರು 605 ಟನ್ ಮಾರಾಟ ಮಾಡಲಾಗಿದ್ದು, 60 ಕೋಟಿ ರು ವಹಿವಾಟು ನಡೆಸಲಾಗಿದೆ ಎಂದು ಚಿಕ್ಕಣ್ಣ ಹೇಳಿದರು. ಜೂ.2ರಂದು ಹಾಪ್ ಕಾಮ್ಸ್ ವೆಬ್ ಸೈಟ್ ಹಾಗೂ ಎಸ್ ಎಂಎಸ್ ಸೇವೆಯನ್ನು ಕಾರ್ಮಿಕ ಸಚಿವ ಬಿನ್ ಬಚ್ಚೇಗೌಡ ಆರಂಭಿಸಲಿದ್ದಾರೆ.

ರಂಗಶಂಕರದಲ್ಲಿ ಮಾವು ಪಾರ್ಟಿ: ಪ್ರತಿವರ್ಷದಂತೆ ಈ ವರ್ಷ ಕೂಡಾ ಮ್ಯಾಂಗೋ ಪಾರ್ಟಿಯನ್ನು ರಂಗಶಂಕರದಲ್ಲಿ ಜೂ 12ರಂದು ಹಮ್ಮಿಕೊಳ್ಳಲಾಗಿದೆ. ನಾಟಕ, ಮನರಂಜನೆಯ ಜೊತೆಗೆ ಬಗೆಬಗೆ ಮಾವುಗಳನ್ನು ಸವಿಯುವ ಅವಕಾಶ ಸಿಗುತ್ತದೆ. ಚಿಣ್ಣರಿಗೆ ವಿಶೇಷ ಕೊಡುಗೆಗಳಿವೆ. ಸಮಯ ಮಧ್ಯಾಹ್ನ 3 ರಿಂದ 6 ಗಂಟೆವರೆಗೂ ಮಾತ್ರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+