ಕೆಆರ್ಎಸ್ ನಿಂದ ಸುಮ್ಮನೆ ನೀರು ಬಿಟ್ಟಿರೋ ಜೋಕೆ!

ಇನ್ನೊಂದೆಡೆ ಕಬಿನಿ, ಹಾರಂಗಿ ಭರ್ತಿಯಾಗಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ. ಕಳೆದ ಮೂರು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೆಆರ್‌ಎಸ್ ಒಳಹರಿವಿನಲ್ಲಿ ಹೆಚ್ಚಳವಾಗಿದೆ.
ರೈತರಿಗೆ ಆದರೆ, ಜಲಾಶಯದಿಂದ ತಮಿಳುನಾಡಿಗೆ ಯಥೇಚ್ಛವಾಗಿ ಕಳ್ಳತನದಿಂದ ನೀರು ಹರಿಯಬಿಡಲಾಗುತ್ತಿದೆ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ.
ಜಲಾಶಯ ಗರಿಷ್ಠ ಪ್ರಮಾಣ 124.80 ಅಡಿಗಳಿದ್ದು, ಪ್ರಸ್ತುತ 106.42 ಅಡಿಗಳಷ್ಟು ನೀರಿದೆ. ಜಲಾಶಯ ಭರ್ತಿಯಾಗಬೇಕಾದರೆ ಇನ್ನೂ ಸುಮಾರು 18 ಅಡಿ ನೀರು ಬೇಕು. ಜಲಾನಯನ ಪ್ರದೇಶದಲ್ಲಿ ಒಂದು ವಾರವಾದರೂ ಮಳೆರಾಯನ ಆರ್ಭಟ ಮುಂದುವರಿದರೆ ಜಲಾಶಯ ಭರ್ತಿಯಾಗುತ್ತದೆ.
ಜಲಾಶಯಕ್ಕೆ 25,174 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಹೊರಹರಿವು (ನಾಲೆಗಳಿಗೆ ಬಿಡುಗಡೆ) 4,117 ಕ್ಯೂಸೆಕ್ಸ್ ಇದೆ. ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚುತ್ತಿರುವುದು ಶುಭ ಸೂಚಕ.
ಆದರೆ, ಜಲಾಶಯದ ಕೆಳಭಾಗದ ನದಿ ನೀರಿನ ಹರಿವಿನ ಪ್ರಮಾಣ ಹೆಚ್ಚಿರುವುದು ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳು ಮಾತ್ರ ನೀರು ಬಿಟ್ಟಿಲ್ಲ ಎನ್ನುತ್ತಿದ್ದಾರೆ.












Click it and Unblock the Notifications