ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರನ್ನು ಉತ್ತೇಜಿಸಲು ಮಹೀಂದ್ರಾದಿಂದ ಕೃಷ್-ಇ ಚಾಂಪಿಯನ್ ಪ್ರಶಸ್ತಿ

|
Google Oneindia Kannada News

ಮುಂಬೈ, ಫೆಬ್ರವರಿ 5: ಭಾರತದ ಅಗ್ರಗಣ್ಯ ಟ್ರಾಕ್ಟರ್ ಉತ್ಪಾದನಾ ಕಂಪನಿ ಮತ್ತು 19.4 ಶತಕೋಟಿ ಡಾಲರ್ ಮೌಲ್ಯದ ಮಹೀಂದ್ರಾ ಸಮೂಹದ ಭಾಗವಾಗಿರುವ ಮಹೀಂದ್ರಾ & ಮಹೀಂದ್ರಾ ಫಾರ್ಮ್ ಇಕ್ವಿಪ್‍ಮೆಂಟ್ ವಲಯವು ಆರಂಭಿಕ ವರ್ಷದ ಕೃಷ್-ಇ ಚಾಂಪಿಯನ್ ಪ್ರಶಸ್ತಿಯ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ.

ಈ ಪ್ರಶಸ್ತಿಗಳು 2011ರಲ್ಲಿ ಆರಂಭಿಸಲಾದ ಮಹೀಂದ್ರಾ ಸಮೃದ್ಧಿ ಇಂಡಿಯಾ ಅಗ್ರಿ ಅವಾರ್ಡ್ಸ್ (ಎಂಎಸ್‍ಐಎಎ) ಪ್ರಶಸ್ತಿಯ ಸ್ಫೂರ್ತಿಯ ಮುಂದುವರಿದ ಭಾಗವಾಗಿದೆ. ಮೊದಲ ವರ್ಷದ ಕೃಷ್-ಇ ಚಾಂಪಿಯನ್ ಪ್ರಶಸ್ತಿಯಡಿ 10 ರಾಷ್ಟ್ರ ಪ್ರಶಸ್ತಿಗಳನ್ನು 4 ವರ್ಗಗಳ ವಿಜೇತರಿಗೆ ನೀಡಲಾಗಿದೆ.

ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಜತೆ ಜೋಡಿಸಿರುವ ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತದೆ. ಕೃಷ್-ಇ ಪ್ರಶಸ್ತಿಯ ಮೂಲಕ ಮಹೀಂದ್ರಾ, ಲಕ್ಷಾಂತರ ರೈತರಿಗೆ ಮತ್ತು ಕೃಷಿ ಉದ್ಯಮಿಗಳಿಗೆ ಸ್ಫೂರ್ತಿ ತುಂಬುವ ಮೂಲಕ ಭವಿಷ್ಯದ ಭರವಸೆಯ ಭಾರತವನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ.

Mahindra launches Krish-e Champion Awards

ಭಾರತದ 29 ಕೃಷ್-ಇ ಕೇಂದ್ರಗಳಿಂದ ಕೃಷಿಕರು ಪ್ರಾದೇಶಿಕ ಮಟ್ಟದ ಕೃಷ್-ಇ ಚಾಂಪಿಯನ್ ಪ್ರಶಸ್ತಿಯಲ್ಲಿ ಭಾಗವಹಿಸಿದ್ದರು. ಪ್ರಾದೇಶಿಕ ಮಟ್ಟದಲ್ಲಿ ಪ್ರಶಸ್ತಿ ವಿಜೇತರಾದವರನ್ನು ರಾಷ್ಟ್ರಮಟ್ಟದ ಸ್ಪರ್ಧೆಗೆ ನಾಮನಿರ್ದೇಶನ ಮಾಡಲಾಗಿತ್ತು. ಟೆಕ್ನಿಕ್ ಚಾಂಪಿಯನ್, ಮಹಿಳಾ ಕಿಸಾನ್ ಚಾಂಪಿಯನ್, ಯುವ ಕಿಸಾನ್ ಚಾಂಪಿಯನ್ನು ಮತ್ತು ರೆಂಟಲ್ ಪಾರ್ಟ್ನರ್ ಚಾಂಪಿಯನ್ ಹೀಗೆ ನಾಲ್ಕು ವರ್ಗಗಳಲ್ಲಿ ಆಯ್ಕೆ ಮಾಡಲಾಗಿದೆ.

1. ಮಹಿಳಾ ಕಿಸಾನ್ ಪ್ರಶಸ್ತಿ: ಸಲೋಮಿ ಲಾಕ್ರಾ, ರಾಂಚಿ
ಕೃಷ್-ಇ ಪದ್ಧತಿಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ತಮ್ಮ ಎಕರೆವಾರು ಆದಾಯದಲ್ಲಿ ಗಣನೀಯ ಹೆಚ್ಚಳ ಕಂಡ ಪ್ರಗತಿಪರ ಮಹಿಳಾ ಚಾಂಪಿಯನ್ ರೈತರಿಗೆ ನೀಡಲಾಗುತ್ತದೆ.
2. ಯುವ ಕಿಸಾನ್ ಪ್ರಶಸ್ತಿ: ಹರ್ಷಲಾಲ್ ಸಾಹೇಬ್‍ರಾವ್ ಲಾಂಬಾಟ್, ವಾಧ್ರಾ
3. ಟಕ್ನೀಕ್ ಚಾಂಪಿಯನ್ ಕಿಸಾನ್ ಪ್ರಶಸ್ತಿ: ಮೊಹ್ಮದ್ ಮಿನಾಜ್ ಅಲಾಂ, ಬಿಹಾರ್ ಶರೀಫ್, 1st
4. ಟಕ್ನೀಕ್ ಚಾಂಪಿಯನ್ ಕಿಸಾನ್ ಪ್ರಶಸ್ತಿ: ಬುಕ್ಕಾ ಆನಂದ್,
ಮೆಹಬೂಬ್‍ನಗರ 2nd
5. ಟಕ್ನೀಕ್ ಚಾಂಪಿಯನ್ ಕಿಸಾನ್ ಪ್ರಶಸ್ತಿ: ಅಜಯ್ ಸಿಂಗ್ , ಬೆರಿ, 3rd.
6. ಬಾಡಿಗೆ ಪಾಲುದಾರ ಚಾಂಪಿಯನ್ ಪ್ರಶಸ್ತಿ:ಸಚಿನ್ ರಘುವಂಶಿ, ವಿದಿಶಾ, 1st
7. ಅಜಯ್ ಯಾದವ್, ಶಿವರಾಜ್‍ಪುರ, 2nd
8. ಸುರೇಂದ್ರ ಯಾದವ್, ಬರ್ಹ್, 3rd
9. ಬಾಡಿಗೆ ಬಿ2ಬಿ ಪಾಲುದಾರ ಚಾಂಪಿಯನ್ ಪ್ರಶಸ್ತಿ (ವಿಶೇಷ ಗೌರವ): ವಿಪುಲ್ ಪಟೇಲ್, ಗಾಂಧಿನಗರ
10. ಕಲದೀಪ್ ಸಿಂಗ್, ಪಂಜಾಬ್

Mahindra launches Krish-e Champion Awards

ಈ ಸಂದರ್ಭದಲ್ಲಿ ಮಾತನಾಡಿದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‍ನ ಕೃಷಿ ಸಲಕರಣೆಗಳ ವಿಭಾಗದ ಅಧ್ಯಕ್ಷ ಹಿಮ್ಮತ್ ಸಿಕ್ಕಾ, "ಬದಲಾವಣೆ ಸೃಷ್ಟಿಸುವವರನ್ನು ಗುರುತಿಸಿ ಗೌರವಿಸುವ ಪ್ರಬಲ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಮತ್ತು ಹಿಂದಿನ ಸಮೃದ್ಧಿ ಪ್ರಶಸ್ತಿಯ ಅದ್ಭುತ ಯಶಸ್ಸನ್ನು ಉಳಿಸಿಕೊಂಡು ಹೋಗುವ ಸಲುವಾಗಿ ದೀಗ ನಾವು ಕೃಷ್-ಇ ಚಾಂಪಿಯನ್ ಪ್ರಶಸ್ತಿಯನ್ನು ಆರಂಭಿಸಲು ಸಂತಸವೆನಿಸುತ್ತಿದೆ. ರೈತರನ್ನು ಗುರುತಿಸಿ ಗೌರವಿಸುವ ಸುಮಾರು ಒಂದು ದಶಕದ ಪರಂಪರೆಯನ್ನು ಮತ್ತಷ್ಟು ಬಲಪಡಿಸಲಿದೆ ಮತ್ತು ಈ ಪ್ರಶಸ್ತಿಯು ನಾಳೆಯ ಕೃಷಿ ಚಾಂಪಿಯನ್ನರಿಗೆ ಸ್ಫೂರ್ತಿಯಾಗಲಿದೆ ಮತ್ತು ಭಾರತದ ಕೃಷಿ ವಲಯದ ಬದಲಾವಣೆಯ ವೇಗವರ್ಧನೆಗೆ ಕಾರಣವಾಗಲಿದೆ ಎಂಬ ವಿಶ್ವಾಸ ನಮ್ಮದು" ಎಂದು ಹೇಳಿದರು.

English summary
Krish-e Champion Award by Mahindra recognizes and honors individuals & institutions for their exemplary contribution towards farming and related services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X