ರೈತನನ್ನು ಅಮಾನವೀಯವಾಗಿ ಥಳಿಸಿದ ಮಹಾರಾಷ್ಟ್ರ ಶಾಸಕ
ಔರಂಗಾಬಾದ(ಮಹಾರಾಷ್ಟ್ರ), ಜೂನ್ 15: ಮಧ್ಯಪ್ರದೇಶದಂತೇ ಮಹಾರಾಷ್ಟ್ರದಲ್ಲೂ ಭುಗಿಲೆದ್ದಿದ್ದ ರೈತರ ಹೋರಾಟ, ಸಾಲಮನ್ನಾ ಮಾಡುವುದಾಗಿ ಇಲ್ಲಿನ ರಾಜ್ಯ ಸರ್ಕಾರ ನೀಡಿದ ಭರವಸೆಯಿಂದಾಗಿ ಕೊಂಚ ತಣ್ಣಗಾಗಿದೆ. ಹೀಗಿರುವಾಗ ಇಲ್ಲಿನ ಔರಂಗಾಬಾದ ನ ಸಿಲ್ಲೋಡ್ ಎಂಬ ಪ್ರದೇಶದ ಕಾಂಗ್ರೆಸ್ ಶಾಸಕನೊಬ್ಬ ತನ್ನ ಪಕ್ಕದ ಮನೆಯ ರೈತನೊಬ್ಬನಿಗೆ ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದೆ.
ಶಾಸಕ ಅಬ್ದುಲ್ ಸತ್ತರ್ ಅಬ್ದುಲ್ ನಬಿ, ನೆರೆಮನೆಯ ರೈತನೊಬ್ಬನೊಂದಿಗೆ ಜಮೀನಿಗೆ ಸಂಬಂಧಿಸಿದ ವಿವಾದದಿಂದಾಗಿ ಜಗಳ ಆರಂಭಿಸಿದ್ದಾರೆ. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ರೈತನನ್ನು ಅಮಾನವೀಯವಾಗಿ ಥಳಿಸಿದ ವಿಡಿಯೋ ಸಹ ಎಲ್ಲೆಡೆ ಹರಿದಾಡಿ, ವೈರಲ್ ಆಗಿದೆ.

ಆ ಜಮೀನು ದಲಿತ ಸಹೋದರರಿಬ್ಬರಿಗೆ ಸೇರಿದ್ದು, ಅದಕ್ಕೂ ನನಗೂ ಸಂಬಂಧವಿಲ್ಲ, ಜಗಳಕ್ಕೆ ಕಾರಣ ಬೇರೆಯೇ ಇದೆ. ಆ ಸಂದರ್ಭದಲ್ಲಿ ನಾನು ಹಾಗೆ ವರ್ತಿಸುವುದು ಅನಿವಾರ್ಯವಾಗಿತ್ತು ಎಂದು ಶಾಸಕ ಸಮಜಾಯಿಷಿ ನೀಡಿದ್ದಾರೆ.












Click it and Unblock the Notifications