Live:ಬೆಂಗಳೂರಿನಲ್ಲಿ ಮಹದಾಯಿ ಕಿಚ್ಚು: HDDಗೆ ಮನವಿ ಸಲ್ಲಿಸಿದ ರೈತರು
ಬೆಂಗಳೂರು, ಡಿಸೆಂಬರ್ 27: ಮಹದಾಯಿ ನದಿ ನೀರು ಇತ್ಯರ್ಥಕ್ಕಾಗಿ ಅತ್ತ ಉತ್ತರ ಕರ್ನಾಟಕ ಹೊತ್ತಿ ಉರಿಯುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ಅವರ ನೇತೃತ್ವದ ರೈತರು ಬಿಜೆಪಿ ಕಚೇರಿಯಿಂದ ರಾಜಭವನ, ಚುನಾವಣಾ ಆಯೋಗ ಕಚೇರಿ, ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸದತ್ತ ಪಾದಯಾತ್ರೆ ಹೊರಟಿದ್ದಾರೆ.
ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಹದಾಯಿ ರೈತರ ಜಾಥಾ ಮೊದಲು ಮಲ್ಲೇಶ್ವರಂನಿಂದ ಚಾಲುಕ್ಯ ಸರ್ಕಲ್ ಮೂಲಕ ರಾಜಭವನಕ್ಕೆ ಹೊರಟಿದೆ. ಜಾಥಾದಲ್ಲಿ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ.
ಜಾತಾದಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತದೆ ಎಂದು ವಾಹನದ ಮೂಲಕ ತೆರಳುವಂತೆ ರೈತರಿಗೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು. ಆದರೆ, ಇದಕ್ಕೆ ಕ್ಯಾರೆ ಎನ್ನದ ರೈತರು ಪಾದಯಾತ್ರೆ ಮೂಲಕ ರಾಜಭವನದತ್ತ ಹೆಜ್ಜೆ ಹಾಕಿದರು. ಇನ್ನು ಈ ಬಗ್ಗೆ ಕ್ಷಣ-ಕ್ಷಣದ ಮಾಹಿತಿಗೆ ಕೆಳಗೆ ಓದಿ.

* ಮಹದಾಯಿ ಹೋರಾಟಗಾರರು ಸಿಎಂ ನಿವಾಸದಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ನಿವಾಸಕ್ಕೆ ತೆರಳಿದರು. ಆದರೆ, ದೇವೇಗೌಡ್ರು ದೆಹಲಿಯಲ್ಲಿರುವುದರಿಂದ ಅವರ ಬದಲಾಗಿ ವಿಧಾನಪರಿಷತ್ ಸದಸ್ಯ ಶರವಣ ಮನವಿಯನ್ನು ಸ್ವೀಕರಿಸಿದರು.
* ಮುಂದಿನ ಜನವರಿಯೊಳಗೆ ಮಹದಾಯಿ ವಿವಾದವನ್ನು ಬಗೆಹರಿಸಿ, ಸರ್ವಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಗೆಹರಿಸಿ. ಇಲ್ಲವಾದರೆ ಪ್ರಧಾನಿ ಬಳಿ ನಮ್ಮನ್ನು ಕರೆದೊಯ್ಯುವಂತೆ ಸಿಎಂಗೆ ಮನವಿ ಮಾಡಿದ ಮಹದಾಯಿ ಹೋರಾಟಗಾರರು.
* ಪಾದಯಾತ್ರೆ ಮೂಲಕ ಮಹದಾಯಿ ರೈತರ ಜಾತಾ ಚಾಲುಕ್ಯ ವೃತ್ತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದತ್ತ ಸಾಗಿದೆ. ಆದರೆ, ಸಿದ್ದರಾಮಯ್ಯ ಅವರು ಚಿತ್ರದುರ್ಗ ಕಾರ್ಯಕ್ರಮದಲ್ಲಿದ್ದಾರೆ. ಅವರ ಬದಲಿಗೆ ಬೇರೆ ಅಧಿಕಾರಿ ರೈತರ ಮನವಿ ಸ್ವೀಕರಿಸಲಿದ್ದಾರೆ.
* ಮಹದಾಯಿ ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಭರವಸೆ ನೀಡಿದ್ದವು, ಆದರೆ ಕೊಟ್ಟ ಭರವಸೆ ಈಡೇರಿಸದ ಕಾರಣ ಮೂರು ಪಕ್ಷಗಳ ಮಾನ್ಯತೆ ರದ್ಧತಿಗೆ ರೈತರು ಮನವಿ ನೀಡಿದರು.
* ರಾಜಭವನದಿದ ರೈತರ ಜಾಥಾ ರಾಜ್ಯ ಚುನಾವನಾ ಆಯೋಗ ಕಚೇರಿ ತಲುಪಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಮಾನ್ಯತೆ ರದ್ದು ಮಾಡುವಂತೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಗೆ ರೈತರು ಮನವಿ ಸಲ್ಲಿಸಿದರು.
* ರಾಜ್ಯಪಾಲ ವಾಜುಬಾಯಿ ವಾಲಾ ಅವರು ಕಚೇರಿಯಲ್ಲಿ ಇದ್ದರೂ ಸಹ ಅಪಾಯಿಂಟ್ ಮೆಂಟ್ ಇಲ್ಲವೆಂದು ತಮ್ಮ ನೋವಿನ ಮನವಿಯನ್ನು ಸ್ವೀಕರಿಸಲು ಅವರು ಬಂದಿಲ್ಲವೆಂದು ವೀರೇಶ್ ಸೊಬರದಮಠ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಚುನಾವಣಾ ಆಯೋಗಕ್ಕೆ ತೆರಳಿದ್ದೇವೆ ಎಂದು ಇದೇ ವೇಳೆ ವೀರೇಶ್ ಅವರು ತಿಳಿಸಿದರು.
* ರಾಜಭವನದಲ್ಲಿ ಟೀ ಕೊಟ್ಟರೂ ಕುಡಿಯದೇ ಬಂದೆವು. ರಾಜ್ಯಪಾಲರು ನಮ್ಮ ಮನವಿ ಸ್ವೀಕರಿಸಲು ಬರಲಿಲ್ಲ. ಇದು ನಮ್ಮ ರಾಜ್ಯದ ರೈತರ ದೌರ್ಭಾಗ್ಯ ಎಂದು ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವಿರೇಶ್ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದರು.

* ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿ ರಮೇಶ್ ಅವರು ಮನವಿ ಸ್ವೀಕರಿಸಿದರು. ಆದರೆ, ರಾಜ್ಯಪಾಲರೇ ಮನವಿ ಸ್ವೀಕರಿಸುವಂತೆ ರೈತರು ಪಟ್ಟು ಹಿಡಿದರು.
* ನಾಲ್ವರು ಪ್ರಮುಖರನ್ನು ಪೊಲೀಸರು ತಮ್ಮ ರಾಜಭವನದಲ್ಲಿ ಟೀ ಕೊಟ್ಟರೂ ಕುಡಿಯದೇ ಬಂದೆವು. ರಾಜ್ಯಪಾಲರು ನಮ್ಮ ಮನವಿ ಸ್ವೀಕರಿಸಲು ಬರಲಿಲ್ಲ. ಇದು ನಮ್ಮ ರಾಜ್ಯದ ರೈತರ ದೌರ್ಭಾಗ್ಯ ಎಂದು ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವಿರೇಶ್ ಸೊಬರದಮಠ ಅಸಮಾಧಾನ ವ್ಯಕ್ತಪಿಡಿಸಿದರು.ವಾಹನದಲ್ಲಿ ರಾಜ್ಯಪಾಲರ ಭೇಟಿಗೆ ಕರೆದುಕೊಂಡು ರಾಜಭವನಕ್ಕೆ ತೆರಳಿದರು.
* ಮಹದಾಯಿ ರೈತರ ಪಾದಯಾತ್ರೆ ಚಾಲುಕ್ಯ ವೃತ್ತದ ತಲುಪಿದ್ದು, ಪೊಲೀಸರು ತಡೆದರು.

* ರೈತರ ಪಾದಯಾತ್ರೆಯಲ್ಲಿ ಆನಂದ್ ಗುರೂಜಿ ಭಾಗಿ.
* ರಾಜಪಾಲರನ್ನು ಭೇಟಿ ಮಾಡಲು ಕೇವಲ ನಾಲ್ಕು ಜನರಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಉಳಿದವರನ್ನು ಚಾಲುಕ್ಯ ಸರ್ಕಲ್ ನಲ್ಲಿ ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿ ಸಿದ್ಧತೆ ಮಾಡಿಕೊಂಡಿದ್ದಾರೆ.
* ರಾಜಭವನದತ್ತ ರೈತರ ಜಾಥಾವನ್ನು ಚಾಲುಕ್ಯ ಸರ್ಕಲ್ ಡಲುನಲ್ಲಿ ತಡೆಯಲು ಬ್ಯಾರಿಕೇಡ್ ಹಾಕಿದ ಪೋಲಿಸರು.











Click it and Unblock the Notifications