ನ.19 ರಂದು ಜಿಕೆವಿಕೆಯಲ್ಲಿ ಕೃಷಿ ಮೇಳಕ್ಕೆ ಚಾಲನೆ
ಬೆಂಗಳೂರು, ನ. : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೃಷಿ ಮೇಳವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ) ಆವರಣದಲ್ಲಿ 2015ರ ನವೆಂಬರ್ 19 ರಿಂದ 22ರವರೆಗೆ ಆಯೋಜಿಸಿದೆ. ರೈತರು, ಸಾರ್ವಜನಿಕರು ಕೃಷಿ ಮೇಳದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿ.ಸಿ ಫಾರಂನ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮದ ಸಂಯೋಜಕರು ಮನವಿ ಮಾಡಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೃಷಿ ಮೇಳವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ) ಆವರಣದಲ್ಲಿ 2015ರ ನವೆಂಬರ್ 19 ರಿಂದ 22ರವರೆಗೆ ಬೆಳೆಗ್ಗೆ 9-00 ಗಂಟೆಯಿಂದ ಸಾಯಂಕಾಲ 6.00 ಘಂಟೆಯವರೆಗೆ ಏರ್ಪಡಿಸಲಾಗಿದೆ.
ಈ ಕೃಷಿ ಮಾಹಿತಿ ಉತ್ಸವದಲ್ಲಿ ರಾಜ್ಯದ ಎಲ್ಲಾ ಕೃಷಿ, ತೋಟಗಾರಿಕೆ, ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾನಿಲಯಗಳು ತಮ್ಮ ಸಂಶೋಧನೆಗಳನ್ನು ರೈತರೊಂದಿಗೆ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಕರ್ನಾಟಕ ಸರ್ಕಾರದ ಅಭಿವೃದ್ಧಿ ಇಲಾಖೆಗಳು ರೈತರಿಗೆ ದೊರೆಯುವ ಸೌಲಭ್ಯಗಳು ಹಾಗೂ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಿಷಯಗಳ ಕುರಿತಾದ ಸಮಗ್ರ ಮಾಹಿತಿಯನ್ನು ವಸ್ತು ಪ್ರದರ್ಶನ ಹಾಗೂ ಚರ್ಚೆಗಳ ಮೂಲಕ ನೀಡಲಾಗುತ್ತದೆ.
ಇತ್ತೀಚೆಗೆ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ, ಖುಷ್ಕಿ ಬೇಸಾಯದಲ್ಲಿ ಸಮಗ್ರ ಬೆಳೆ ನಿರ್ವಹಣೆ, ಮತ್ಯ್ಸ ಮೇಳ - ಮೀನು ಸಾಕಣೆಯ ವಿವಿಧ ಪದ್ಧತಿಗಳು, ಗ್ರಾಮೀಣ ಸೊಗಡು ಬಿಂಬಿಸುವ ಹಳ್ಳಿ ಸಂತೆ, ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಕೃಷಿ ಯಾಂತ್ರೀಕರಣ,
ಮಳೆ ಅಸ್ಥಿರತ್ವಕ್ಕೆ ಸೂಕ್ತ ಬೆಳೆ ಯೋಜನೆಗಳು, ಕಡಿಮೆ ನೀರಿನ ಬಳಕೆಯಿಂದ ಭ ತ್ತದ ಬೇಸಾಯ, ಸುಧಾರಿತ ತೋಟಗಾರಿಕಾ ಪದ್ಧತಿಗಳು ಹಾಗೂ ನಿಖರ ಕೃಷಿ, ಔಷಧ ಮತ್ತು ಸುಗಂಧ ದ್ರವ್ಯ ಸಸ್ಯಗಳು, ನಗರ ತೋಟಗಾರಿಕೆ, ಸಾವಯವ ಕೃಷಿ, ಜೈವಿಕ ಇಂಧನ, ಕೊಯ್ಲಿನೋತ್ತರ ತಾಂತ್ರಿಕತೆ ಮತ್ತು ಮೌಲ್ಯವರ್ಧನೆ, ಪಶು ಸಂಗೋಪನೆ, ಕೋಳಿ ಸಾಕಣೆ ಹಾಗೂ ಹೈನುಗಾರಿಕೆಯ ಸುಧಾರಿತ ಪದ್ಧತಿಗಳು, ವಿವಿಧ ಕೃಷಿ ತಾಂತ್ರಿಕತೆಗಳನ್ನು ಬಿಂಬಿಸುವ ಮಳಿಗೆಗಳ ಕೃಷಿ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ.












Click it and Unblock the Notifications