Get Updates
Get notified of breaking news, exclusive insights, and must-see stories!

Arecanut & Copra Price: ಕೊಬ್ಬರಿ ಬೆಲೆ ₹18,000; ಅಡಿಕೆ ಬೆಲೆ ಕೂಡ ಏರಿಕೆ

ಹಲವು ತಿಂಗಳ ಕಾಯುವಿಕೆ ನಂತರ ಕೊಬ್ಬರಿ ಬೆಳೆಗಾರರಲ್ಲಿ ಸಂತಸ ಮೂಡಿದೆ. ಅಕ್ಟೋಬರ್ ತಿಂಗಳ ಆರಂಭದಲ್ಲೇ ಕೊಬ್ಬರಿ ಬೆಲೆಯಲ್ಲಿ ವರ್ಷದ ಹೊಸ ದಾಖಲೆ ಬರೆದಿದೆ. 16000-17000 ದಲ್ಲಿ ಮಾರಾಟವಾಗುತ್ತಿದ್ದ ಕೊಬ್ಬರಿ ಬೆಲೆ ಗುರುವಾರ 18,000 ರೂಪಾಯಿಗೆ ಏರಿಕೆಯಾಗಿದ್ದು, ತೆಂಗು ಬೆಳೆಗಾರರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.

ತೆಂಗು ಬೆಳೆಗೆ ಹಲವು ರೋಗಗಳು, ನೀರಾವರಿ ಕೊರತೆ ನಡುವೆಯೂ ರೈತರು ತೆಂಗಿನ ತೋಟಗಳನ್ನು ಕಾಪಾಡಿಕೊಂಡಿದ್ದರು. ಆದರೆ ಕೊಬ್ಬರಿಗೆ ಸೂಕ್ತ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುವ ಆತಂಕವಿತ್ತು. ಆದರೆ ಕೆಲವು ದಿನಗಳಿಂದ ಕೊಬ್ಬರಿ ಬೆಲೆ ಏಕಾಏಕಿ ಏರಿಕೆಯಾಗುತ್ತಿದೆ.

Kobri price surpasses Rs 18000 per quintal discover the arecanut price

ಗುರುವಾರ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಕನಿಷ್ಠ 16,500 ರೂಪಾಯಿ ಇದ್ದರೆ, ಗರಿಷ್ಠ 18,000 ರೂಪಾಯಿಗೆ ಮಾರಾಟವಾಗಿದ್ದು ಈ ವರ್ಷದಲ್ಲಿ ಮತ್ತೊಂದು ದಾಖಲೆ ಮಾಡಿದೆ. ಹುಳಿಯಾರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕನಿಷ್ಠ 15,950 ರೂಪಾಯಿ ಇದ್ದರೆ ಗರಿಷ್ಠ 16,200 ರೂಪಾಯಿಗೆ ಏರಿಕೆಯಾಗಿದೆ.

ಕೊಬ್ಬರಿ ಮಾತ್ರವಲ್ಲದೆ ಎಳನೀರು ಮತ್ತು ತೆಂಗಿನ ಕಾಯಿಗೂ ಬಂಪರ್ ಬೆಲೆ ಬಂದಿದೆ. ಸದ್ಯ ಎಳನೀರು ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ 45-55 ರೂಪಾಯಿಗಳಷ್ಟಿದೆ. ತೆಂಗಿನ ಕಾಯಿ ಬೆಲೆ ಕೂಡ ದಿನೇ ದಿನೇ ಏರಿಕೆಯಾಗುತ್ತಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ 25-30 ರೂಪಾಯಿಯಂತೆ ಮಾರಾಟವಾಗುತ್ತಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಕೋಕಾ ₹19,000 ₹28,500 ₹25,000
2 ಬಂಟ್ವಾಳ ಹೊಸ ವೆರೈಟಿ ₹30,500 ₹31,500 ₹31,000
3 ಚಿತ್ರದುರ್ಗ ಅಪಿ ₹48,619 ₹49,059 ₹48,849
4 ಚಿತ್ರದುರ್ಗ ಬೆಟ್ಟೆ ₹32,629 ₹33,079 ₹32,899
5 ಚಿತ್ರದುರ್ಗ ರಾಶಿ ₹48,139 ₹48,569 ₹48,389
6 ಕುಮಟಾ ಚಿಪ್ಪು ₹18,209 ₹26,969 ₹24,629
7 ಕುಮಟಾ ಕೋಕಾ ₹5,500 ₹24,769 ₹21,869
8 ಮಡಿಕೇರಿ ಕಚ್ಚಾ ₹38,006 ₹38,773 ₹38,281
9 ಸಾಗರ ಚಾಲಿ ₹29,509 ₹32,900 ₹31,899
10 ಸಾಗರ ರಾಶಿ ₹35,299 ₹48,509 ₹47,199
11 ಸಾಗರ ಸಿಪ್ಪೆಗೋಟು ₹15,509 ₹16,725 ₹15,509
12 ಸಾಗರ ಬಿಳೆ ಗೊಟು ₹21,589 ₹24,700 ₹21,589
13 ಶಿವಮೊಗ್ಗ ಬೆಟ್ಟೆ ₹41,599 ₹54,699 ₹53,199
14 ಶಿವಮೊಗ್ಗ ರಾಶಿ ₹30,009 ₹49,009 ₹48,169
15 ಶಿವಮೊಗ್ಗ ಸರಕು ₹52,069 ₹74,550 ₹62,129
16 ಸಿದ್ದಾಪುರ ಬಿಳೆ ಗೊಟು ₹24,899 ₹28,599 ₹26,899
17 ಸಿದ್ದಾಪುರ ಕೋಕಾ ₹20,099 ₹25,699 ₹23,699
18 ಸಿದ್ದಾಪುರ ಕೆಂಪು ಗೋಟು ₹22,489 ₹22,489 ₹22,489
19 ಸಿದ್ದಾಪುರ ರಾಶಿ ₹41,099 ₹45,899 ₹45,399
20 ಶಿರಸಿ ರಾಶಿ ₹40,299 ₹44,249 ₹41,833
21 ಯಲ್ಲಾಪುರ ರಾಶಿ ₹39,169 ₹54,699 ₹47,699

ಅಡಿಕೆ ಬೆಲೆ ಎಷ್ಟಿದೆ?

ಅಡಿಕೆ ಬೆಲೆ ಸದ್ಯ ಏರಿಳಿತ ಕಾಣುತ್ತಿದೆ, ಕೆಲವು ದಿನಗಳ ಹಿಂದೆ ಕುಸಿತ ಕಂಡಿದ್ದ ಅಡಿಕೆ ಬೆಲೆ ಸದ್ಯ ನಿಧಾನವಾಗಿ ಹೆಚ್ಚಾಗುತ್ತಿದೆ. ಅಡಿಕೆ ಬೆಲೆ ತೀವ್ರವಾಗಿ ಕುಸಿತ ಕಾಣುತ್ತದೆ ಎಂದು ಕಂಗಾಲಾಗಿದ್ದ ರೈತರಿಗೆ ಸದ್ಯ ಬೆಲೆ ಹೆಚ್ಚಳವಾಗುತ್ತಿರುವುದು ಅಲ್ಪ ಸಮಾಧಾನ ಕೊಟ್ಟಿದೆ.

ಗುರುವಾರ ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಅಡಿಕೆ ಬೆಲೆ ಕನಿಷ್ಠ 48,139 ರೂಪಾಯಿ ಇದ್ದರೆ ಗರಿಷ್ಠ ಬೆಲೆ 49,059 ರೂಪಾಯಿ ಆಗಿದ್ದು 50,000 ರೂಪಾಯಿ ದಾಟುವ ನಿರೀಕ್ಷೆಯಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 35,299 ರೂಪಾಯಿ ಇದ್ದರೆ ಗರಿಷ್ಠ 48,509 ರೂಪಾಯಿಗೆ ಮಾರಾಟವಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ದಾವಣಗೆರೆ ಕೊಬ್ಬರಿ ₹9,450 ₹9,450 ₹9,450
2 ತಿಪಟೂರು ಕೊಬ್ಬರಿ ₹16,500 ₹18,000 ₹16,500
3 ತುರುವೇಕೆರೆ ಕೊಬ್ಬರಿ ₹16,000 ₹16,500 ₹16,000
4 ಚನ್ನರಾಯಪಟ್ಟಣ ಸಣ್ಣ ₹9,000 ₹9,000 ₹9,000
5 ನಾಗಮಂಗಲ ಸಣ್ಣ ₹12,000 ₹14,000 ₹12,000
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+