Arecanut And Copra Price: ಅಡಿಕೆ ಬೆಲೆ ಅಲ್ಪ ಕುಸಿತ: ಕೊಬ್ಬರಿ ಧಾರಣೆ ಮಾಹಿತಿ
ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಧಾರಣೆ ಅಲ್ಪ ಕುಸಿತ ಕಂಡಿದೆ. 55 ಸಾವಿರ ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದ ಅಡಿಕೆ ಕೆಲವು ಮಾರುಕಟ್ಟೆಗಳಲ್ಲಿ 51 ಸಾವಿರಕ್ಕೆ ಕುಸಿತ ಕಂಡಿದೆ, ಕೆಲವು ಮಾರುಕಟ್ಟೆಗಳಲ್ಲಿ 54 ಸಾವಿರದವರೆಗೆ ಮಾರಾಟವಾಗಿದೆ.
ಮಂಗಳವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಕನಿಷ್ಠ ₹ 39,599 ಇದ್ದರೆ ಗರಿಷ್ಠ ಧಾರಣೆ ₹54,699 ಕ್ಕೆ ಮಾರಾಟವಾಗಿದೆ. ಬುಧವಾರ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ ₹54,809 ಮುಟ್ಟಿತ್ತು.

ಸಾಗರ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಕ್ವಿಂಟಾಲ್‌ಗೆ ₹22,515 ಗೆ ಮಾರಾಟವಾಗಿದೆ. ಸಿದ್ದಾಪುರದಲ್ಲಿ ರಾಶಿ ಕೆಂಪಡಕೆ ದರ ಕನಿಷ್ಠ ₹44,609 ಇದ್ದರೆ ಗರಿಷ್ಠ ದರ ₹50,199 ಗೆ ಮಾರಾಟವಾಗಿದೆ.
ಭೂತಾನ್‌ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದಿಗೆ ಕೇಂದ್ರ ಅನುಮತಿ ನೀಡಿದ ನಂತರ ಬೆಲೆ ಅಲ್ಪ ಕುಸಿತ ಕಂಡಿದೆ ಎಂದು ಹೇಳಲಾಗಿದೆ. ಭೂತಾನ್ ಅಡಿಕೆ ಆಮದು ಮಾರುಕಟ್ಟೆ ಮೇಲೆ ಹೆಚ್ಚಿನ ಪರಿಣಾಮ ಬೀರಲ್ಲ ಎಂದು ಕ್ಯಾಂಪ್ಕೋ ವಿಶ್ವಾಸ ವ್ಯಕ್ತಪಡಿಸಿದೆ.
ಸ್ಥಿರತೆ ಕಾಯ್ದುಕೊಂಡ ಕೊಬ್ಬರಿ ಧಾರಣೆಕೊಬ್ಬರಿ ದರ ಕೂಡ
ರಾಜ್ಯದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ, ಬೆಲೆಯಲ್ಲಿ ಅಲ್ಪ ಏರಿಳಿಕೆ ಕಾಣುತ್ತಿದ್ದು, 9 ರಿಂದ 10 ಸಾವಿರ ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ದರ ಗರಿಷ್ಠ 9421 ರೂಪಾಯಿಗೆ ಮಾರಾಟವಾಗಿದೆ.
ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 8,500 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 9,550 ಇತ್ತು. ಗುಬ್ಬಿ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ 8000 ರೂಪಾಯಿ ಆಗಿತ್ತು.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹8,500 | ₹9,550 | ₹8,895 |
| 2 | ತಿಪಟೂರು | ಕೊಬ್ಬರಿ | ₹8,000 | ₹9,421 | ₹9,000 |
| 3 | ಬೆಂಗಳೂರು | ಕೊಬ್ಬರಿ | ₹11,000 | ₹12,500 | ₹11,750 |
| 4 | ಕೆ.ಆರ್.ಪೇಟೆ | ಬೇರೆ | ₹7,900 | ₹7,900 | ₹7,900 |
| 5 | ತುಮಕೂರು | ಬೇರೆ | ₹3,600 | ₹4,800 | ₹4,050 |
| 6 | ತುಮಕೂರು | ಬಾಲ್ | ₹8,050 | ₹8,780 | ₹8,220 |
| 7 | ತುರುವೇಕೆರೆ | ಕೊಬ್ಬರಿ | ₹9,500 | ₹9,500 | ₹9,500 |
ಆಗಸ್ಟ್ 9 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಮಡಿಕೇರಿ | ಕಚ್ಚಾ | ₹42,252 | ₹42,252 | ₹42,252 |
| 2 | ಸಾಗರ | ಸಿಪ್ಪೆಗೋಟು | ₹22,515 | ₹22,515 | ₹22,515 |
| 3 | ಸಿದ್ದಾಪುರ | ಬಿಳೆ ಗೊಟು | ₹31,669 | ₹35,689 | ₹34,699 |
| 4 | ಸಿದ್ದಾಪುರ | ಕೆಂಪು ಗೋಟು | ₹34,819 | ₹35,289 | ₹35,019 |
| 5 | ಸಿದ್ದಾಪುರ | ರಾಶಿ | ₹44,609 | ₹50,199 | ₹49,899 |
| 6 | ಬಂಟ್ವಾಳ | ಕೋಕಾ | ₹12,500 | ₹25,000 | ₹22,500 |
| 7 | ಚನ್ನಗಿರಿ | ರಾಶಿ | ₹51,000 | ₹54,809 | ₹52,404 |
| 8 | ಗುಬ್ಬಿ | ಬೆಟ್ಟೆ | ₹40,000 | ₹40,000 | ₹40,000 |
| 9 | ಗುಬ್ಬಿ | ರಾಶಿ | ₹53,500 | ₹53,500 | ₹53,500 |
| 10 | ಪುತ್ತೂರು | ಹೊಸ ವೆರೈಟಿ | ₹34,000 | ₹45,000 | ₹39,500 |
| 11 | ಸಾಗರ | ಕೆಂಪು ಗೋಟು | ₹37,399 | ₹37,899 | ₹37,399 |
| 12 | ಸಾಗರ | ರಾಶಿ | ₹48,599 | ₹51,649 | ₹50,499 |
| 13 | ಶಿವಮೊಗ್ಗ | ಬೆಟ್ಟೆ | ₹49,000 | ₹54,300 | ₹52,010 |
| 14 | ಶಿವಮೊಗ್ಗ | ಸರಕು | ₹50,030 | ₹81,986 | ₹73,660 |
| 15 | ಶಿವಮೊಗ್ಗ | ರಾಶಿ | ₹39,599 | ₹54,699 | ₹51,559 |
| 16 | ಸಿದ್ದಾಪುರ | ಬಿಳೆ ಗೊಟು | ₹32,208 | ₹36,899 | ₹34,699 |
| 17 | ಸಿದ್ದಾಪುರ | ರಾಶಿ | ₹45,109 | ₹50,899 | ₹50,899 |












Click it and Unblock the Notifications