ನಿಮ್ಮ ಕೈತೋಟದಲ್ಲಿ ಸುಗಂಧ ಸಸ್ಯಗಳ ಬೆಳೆಸಿ
ಬೆಂಗಳೂರು, ಜ. 29: ತೋಟಗಾರಿಕೆ ಇಲಾಖೆಯ ಬಯೋಟೆಕ್ನಾಲಜಿ ಕೇಂದ್ರದಲ್ಲಿ ಫೆಬ್ರವರಿ 6 ಮತ್ತು 7 ರಂದು 'ಮನೆಯ ಮದ್ದಿಗಾಗಿ ಔಷಧಿ ಮತ್ತು ಸುಗಂಧ ಸಸ್ಯಗಳನ್ನು ಬೆಳೆಸುವ (Medicinal And Aromatic Plants For Home Remedies) ಬಗ್ಗೆ 2 ದಿನಗಳ ತರಬೇತಿ ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಔಷಧಿ ಮತ್ತು ಸುಗಂಧ ಸಸ್ಯಗಳ ಪ್ರಾಮುಖ್ಯತೆ, ಉಪಯುಕ್ತತೆ ಮತ್ತು ಬೇಸಾಯದ ಬಗ್ಗೆ ತರಬೇತಿಯನ್ನು ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ರೂ 300 ಗಳನ್ನು ಪಾವತಿಸಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಸಮನ್ವಯಾಧಿಕಾರಿ) ಹುಳಿಮಾವು, ಬೆಂಗಳೂರು ರವರ ಕಚೇರಿಯಲ್ಲಿ ನೊಂದಣೆಯನ್ನು ತರಬೇತಿ ದಿನಾಂಕಕ್ಕೆ ಎರಡು ದಿನ ಮುಂಚಿತವಾಗಿ ಮಾಡಿಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ :
ದೂರವಾಣಿ ಸಂಖ್ಯೆ : (080)2658 4906/2658 2775,
ಮೊಬೈಲ್ : 99164 33061/99724 92000,
ಇ-ಮೇಲ್ : [email protected] ಸಂಪರ್ಕಿಸಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications