ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಸುರಿದ ಮಳೆಯಿಂದ ರೈತರಿಗಾದ ಅನುಕೂಲ ಅನಾನುಕೂಲಗಳು ಏನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ಕರ್ನಾಟಕ ರಾಜ್ಯದಲ್ಲಿ ಹಿಂದಿನ ಕೆಲವು ವರ್ಷಗಳಂತೆ ಈ ವರ್ಷವು ಉತ್ತಮ ಮಳೆಯಾಗಿದೆ. ವಾಡಿಕೆಗಿಂತ ಕನಿಷ್ಠ 400 ಮಿ.ಮೀ. ಅಧಿಕ ಮಳೆ ಬಿದ್ದಿದೆ. ಆದರೆ ಆಗಾಗ ಬಂದ ಅಕಾಲಿಕ ಮಳೆ ಹಲವು ಕಡೆಗಳಲ್ಲಿ ಬೆಳೆ ನಾಶ ಮತ್ತು ನಷ್ಟಕ್ಕೆ ಕಾರಣವು ಆಯಿತು.

ಸಕಾಲಕ್ಕೆ ಉತ್ತಮ ಮಳೆಯಾಗದ 22 ವರ್ಷಗಳ ಪೈಕಿ ಕರ್ನಾಟಕ 15 ವರ್ಷ ಬರಗಾಲ ಎದುರಿಸಿದೆ. ಕಳೆದ ಎರಡು ವರ್ಷಗಳಲ್ಲಿ ಉತ್ತಮ ಮಳೆ ಆಗಿ ರೈತರಲ್ಲಿ ಹರ್ಷ ಮೂಡಿಸಿದರೆ, ಮತ್ತೊಂದೆಡೆ ನೆರೆ, ಪ್ರವಾಹ ಸೃಷ್ಟಿಯಾಗಿ ಸಾಕಷ್ಟು ಆರ್ಥಿಕ ನಷ್ಟವೂ ಆಯಿತು. ಮಳೆ ಕಾರಣಕ್ಕೆ ಅಲ್ಪಾವಧಿಯ ಬೆಳೆ ಬಿತ್ತನೆಗೆ ಆಸಕ್ತಿ ತೋರಿದ್ದ ರೈತರು ಇಳುವರಿಯನ್ನು ಉತ್ತಮವಾಗಿ ಪಡೆದರು.

Bengaluru Rains : ಬಂಗಾಳಕೊಲ್ಲಿಯ ವಾಯುಭಾರ ಕುಸಿತ: ಬೆಂಗಳೂರಲ್ಲಿ 2 ದಿನ ಮಳೆ ನಂತರ ಚಳಿ ವಾತಾವರಣ ಸೃಷ್ಟಿBengaluru Rains : ಬಂಗಾಳಕೊಲ್ಲಿಯ ವಾಯುಭಾರ ಕುಸಿತ: ಬೆಂಗಳೂರಲ್ಲಿ 2 ದಿನ ಮಳೆ ನಂತರ ಚಳಿ ವಾತಾವರಣ ಸೃಷ್ಟಿ

ಪ್ರಸಕ್ತ ವರ್ಷದಲ್ಲಿ ಈವರೆಗೆ ರಾಜ್ಯದಲ್ಲಿ 839 ಮಿ.ಮೀ. ವಾಡಿಕೆಗಿಂತ 1,009 ಮಿ.ಮೀ. ಮಳೆಯಾಗಿದೆ. ಅತಿವೃಷ್ಟಿಯಿಂದ ಸುಮಾರು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಈ ಸಮಸ್ಯೆಗಳಿಗೆ ಪರಿಹಾರವನ್ನು ಸರ್ಕಾರ ಪ್ರತಿ ಹೆಕ್ಟೇರ್‌ಗೆ 6,800 ರೂ.ನಿಂದ 13,600 ರೂ.ಗೆ, ನೀರಾವರಿ ಬೆಳೆಗಳಿಗೆ 13,500 ರೂ.ನಿಂದ 25,000 ರೂ.ಗೆ ಮತ್ತು ಬಹುವಾರ್ಷಿಕ ಬೆಳೆಗಳಿಗೆ 18,000 ರೂ.ನಿಂದ 28,000 ರೂ.ಗೆ ಹೆಚ್ಚಿಸಿದೆ.ಆದರೆ ಸರ್ಕಾರ ದ ಈ ನಿರ್ಧಾರ ರೈತರಲ್ಲಿ ಅಷ್ಟಾಗಿ ಸಮಾಧಾನ ತಂದಿಲ್ಲ ಎನ್ನಲಾಗಿದೆ.

ಪ್ರವಾಹದಿಂದ ರೈತರಿಗೆ ಹಲವೆಡೆ ನಿರೀಕ್ಷಿತ ಇಳುವರಿ ಸಿಕಿಲ್ಲ. ಜೊತೆಗೆ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಳೆ ಸಿಗದೇ ರೈತರು ಸಂಕಷ್ಷ ಎದುರಿಸಿದ್ದಾರೆ. ಉತ್ತಮ ಬೆಲೆ ದೊರೆಕುವವರೆಗೆ ಕಾಯಲು ರೈತರ ಬಳಿ ಉತ್ಪನ್ನ ದಾಸ್ತಾನಿಗೆ ಕೊಲ್ಡ ಸ್ಟೋರೇಟ್ ಸಹ ಇಲ್ಲದಾಗಿ ಪರದಾಡಿದರು. ಈ ಬಗ್ಗೆ ಸರ್ಕಾರ ಮಗನಹರಿಸಿಲ್ಲ. ಹೀಗಾಗಿ ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆ ಸಿಗುವ ಹೊರ ರಾಜ್ಯದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲು ರೈತರು ಒತ್ತಾಯಿಸಿದರು.

ರೈತರ ಉತ್ಪನ್ನಗಳಿಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲ

ರೈತರ ಉತ್ಪನ್ನಗಳಿಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲ

ದ್ರಾಕ್ಷಿ ಉತ್ಪಾದನೆಗೆ ಹೆಚ್ಚು ಬೆಳೆಯುವ ಉತ್ತರ ಕರ್ನಾಟಕದಲ್ಲಿ ಯಾವುದೇ ಕೊಲ್ಡ್ ಸ್ಟೋರೆಜ್ ಸೌಲಭ್ಯಗಳು ಲಭ್ಯವಿಲ್ಲದ ಕಾರಣ ರೈತರು ಅದನ್ನು ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಮುಂದಾಗುತ್ತಾರೆ. ಕಬ್ಬು ಬೆಳೆಗಾರರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಸಮಸ್ಯೆಯು ವಾರಗಳಿಂದ ಪ್ರತಿಭಟನೆ ನಡೆಸುತ್ತಿದೆ. ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಮೂಲಕ ಗಳಿಸುವ ಲಾಭದಿಂದ ಪ್ರತಿ ಟನ್‌ಗೆ ರೂ.50 ಹೆಚ್ಚುವರಿ ಪಾವತಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಇದರಿಂದ ಸಮಸ್ಯೆ ಮಾತ್ರ ಪರಿಹಾರವಾದಂತಿಲ್ಲ.

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಕರ್ನಾಟಕ ರಾಜ್ಯದ ಕೃಷಿ ಇಲಾಖೆಯು ಶೇ. 50ಕ್ಕಿಂತ ಹೆಚ್ಚು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಕ್ಷೇತ್ರ ಮಟ್ಟದ ಹುದ್ದೆಗಳು ಖಾಲಿ ಇವೆ. ಈ ಕಾರಣದಿಂದ ಸರ್ಕಾರದ ಯೋಜನೆಗಳು ರೈತರಿಗೆ ಸೂಕ್ತವಾಗಿ ತಲುಪುತ್ತಿಲ್ಲ ಎನ್ನಲಾಗಿದೆ. ಮಲೆನಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗದ ಸೋಂಕಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತ್ತ ಮಾಂಡೌಸ್ ಚಂಡಮಾರುತದಂತಹ ವೈಪರಿತ್ಯಗಳಿಂದ ದಕ್ಷಿಣ ಕರ್ನಾಟಕದ ಕೋಲಾರ, ತುಮಕೂರು ಮತ್ತು ಇತರ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ.

ಕೃಷಿ, ನೀರಾವರಿಗೆ 33,700 ಕೋಟಿ ಮೀಸಲು

ಕೃಷಿ, ನೀರಾವರಿಗೆ 33,700 ಕೋಟಿ ಮೀಸಲು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ ಕೃಷಿ ಮತ್ತು ನೀರಾವರಿ ಕ್ಷೇತ್ರಗಳಿಗೆ 33,700 ಕೋಟಿ ರೂ. ಮೀಸಲಿರಿಸಿದ್ದಾರೆ. ಬೆಂಗಳೂರು, ಧಾರವಾಡ, ರಾಯಚೂರು ಮತ್ತು ಶಿವಮೊಗ್ಗದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಯೋಗಿಕ ಅಧ್ಯಯನ ಪ್ರಾರಂಭಿಸುವ ಮೂಲಕ ಸರ್ಕಾರವು ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ನೀಡುತ್ತಿದೆ.

ರೈತರ ಲಾಭ ಹೆಚ್ಚಿಸಲು ತಮ್ಮ ಬೆಳೆಗಳನ್ನು ಬೆಳೆಯುವ, ಸಂಸ್ಕರಿಸುವ, ಪ್ಯಾಕ್ ಮಾಡುವ, ಬ್ರಾಂಡ್ ಮಾಡುವ ಮತ್ತು ಮಾರುಕಟ್ಟೆ ಮಾಡುವ ಕೃಷಿಕರ ಸಾಮೂಹಿಕ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‌ಪಿಒ) ರಚಿಸಲು ಸರ್ಕಾರವು ಪ್ರೋತ್ಸಾಹಿಸುತ್ತಿದೆ. ಜೊತೆಗೆ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಕಾರ್ಯಕ್ರಮ ಆರಂಭಿಸಿದೆ.

ಉತ್ತಮ ಮಳೆಯಿಂದ ಅನುಕೂಲ-ಅನಾನುಕೂಲ

ಉತ್ತಮ ಮಳೆಯಿಂದ ಅನುಕೂಲ-ಅನಾನುಕೂಲ

ಗುಣಮಟ್ಟವಿಲ್ಲದ ಬೀಜಗಳು ಮತ್ತು ರಸಗೊಬ್ಬರಗಳ ಮಾರಾಟವು ರೈತರಿಗೆ ದೊಡ್ಡ ಸಮಸ್ಯೆಯಾಗಿದ್ದರಿಂದ ವಿಜಿಲೆನ್ಸ್ ವಿಂಗ್ ಘಟಕಗಳನ್ನು ಹೆಚ್ಚಿಸಲಾಗಿದೆ. ಮುಂಗಾರಿನ ಆರಂಭದಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ರೈತರು ರಸಗೊಬ್ಬರಗಳ ಕೊರತೆ ಎದುರಿಸಿದರು. ಪಟ್ಟಭದ್ರ ಹಿತಾಸಕ್ತಿಗಳ ಕೃತಕ ಅಭಾವ ಸೃಷ್ಟಿಯಿಂದ ಈ ರೀತಿ ಸಮಸ್ಯೆ ಎದರಾಗಿತ್ತು ಎಂದು ರೈತ ಸಂಘಗಳು ಅನುಮಾನ ವ್ಯಕ್ತಪಡಿಸಿದ್ದವು. ಒಟ್ಟಾರೆ ನೋಡುವುದಾದರೆ ಸುರಿದ ಉತ್ತಮ ಮಳೆಯಿಂದ ಅನುಕೂಲ ಮತ್ತು ಅನಾನುಕೂಲ ಎರಡು ಆಗಿರುವುದು ಗೊತ್ತಾಗುತ್ತದೆ.

English summary
Karnataka 1009 mm rain received more than normal this year, what is advantages and disadvantages for farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X