ಕಳಸಾ-ಬಂಡೂರಿ ವಿವಾದ: ಮೋದಿಯನ್ನು ಭೇಟಿಯಾಗಲಿರುವ ರಾಜ್ಯ ರೈತರು
Recommended Video

ಬೆಂಗಳೂರು, ಜೂನ್ 13: ಕಳಸಾ-ಬಂಡೂರಿ ವಿವಾದದ ಬಗ್ಗೆ ಪ್ರಧಾನಿ ಮೋದಿ ಅವರ ಮೇಲೆ ನೇರವಾಗಿ ಒತ್ತಡ ಹೇರಲು ಮುಂದಾಗಿರುವ ರಾಜ್ಯ ರೈತರು ಮೋದಿ ಭೇಟಿಗೆಂದು ದೆಹಲಿಗೆ ಹಾರಿದ್ದಾರೆ.
ಜೂnf 14 ಅಥವಾ ಜೂನ್ 15ರಂದು ರಾಜ್ಯದ ರೈತರಿಗೆ ಪ್ರಧಾನಿ ಮೋದಿ ಅವರೊಂದಿಗೆ ಭೇಟಿಗೆ ಅವಕಾಶ ದೊರಕಲಿದೆ. ಹುಬ್ಬಳ್ಳಿ-ಧಾರವಾಡ, ನರಗುಂದ, ರಾಮದುರ್ಗ ಸೇರಿ ಕಳಸಾ-ಬಂಡೂರಿ ಭಾಗದ 23 ರೈತರು ದೆಹಲಿಗೆ ವಿಮಾನ ಹತ್ತಿದ್ದಾರೆ.
ರೈತರ ನಿಯೋಗದ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ವಹಿಸಿದ್ದು, ಕಳಸಾ-ಬಂಡೂರಿ ವಿವಾದ ಕುರಿತು ಪ್ರಧಾನಿಗಳ ಮೇಲೆ ಒತ್ತಡ ಹೇರಲು ನಿಯೋಗವು ತಯಾರಾಗಿದೆ.

ಕಳಸಾ-ಬಂಡೋರಿಯ ಮಹತ್ವ, ಗೋವಾ ತಗಾದೆ, ಭಾಗದ ರೈತರ ಕಷ್ಟಗಳು, ನೀರಿನ ಲಭ್ಯತೆ, ಅವಶ್ಯಕತೆ, ನ್ಯಾಯಾಲಯದ ಈ ವರೆಗಿನ ಪ್ರಕ್ರಿಯೆ, ಕೇಂದ್ರದ ಮಧ್ಯಸ್ಥಿಕೆಯ ಮಹತ್ವ ಇನ್ನೂ ಹತ್ತು ವಿಷಯಗಳ ಬಗ್ಗೆ ರೈತರ ನಿಯೋಗ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದೆ.
ನಿನ್ನೆಯೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದ ರೈತರ ನಿಯೋಗ ಇಂದು ದೆಹಲಿಗೆ ವಿಮಾನ ಹತ್ತಿವೆ. ನಾಳೆ ಅಥವಾ ನಾಡಿದ್ದು ರೈತರ ನಿಯೋಗ ಪ್ರಧಾನಿ ಅವರೊಂದಿಗೆ ಮಾತುಕತೆ ನಡೆಸಲಿವೆ.











Click it and Unblock the Notifications