ಸುವರ್ಣಸೌಧ ಮುತ್ತಲು ಹೊರಟ ಬಿಜೆಪಿ ನಾಯಕರ ಬಂಧನ

ಬೆಳಗಾವಿ, ಜೂ.28: ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಮುಂದಾಗಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿಟಿ ರವಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವಾರು ನಾಯಕರನ್ನು ಬಂಧಿಸಲಾಗಿದೆ.

ಭಾನುವಾರ ಬಡಾಲ ಅಂಕಲಗಿಯಿಂದ ಸುವರ್ಣ ಸೌಧದವರೆಗೆ ಪಾದಯಾತ್ರೆ ನಡೆಸುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡ ರೈತ ಗುರುನಾಥ ಚಾಪಗಾವಿ ಮನೆಯಿಂದ ಪಾದಾಯಾತ್ರೆ ಆರಂಭಿಸಲಾಗಿತ್ತು. ಕುಟುಂಬಕ್ಕೆ ಸಾಂತ್ವನ ಹೇಳಿದ ನಾಯಕರು 2 ಲಕ್ಷ ರೂಪಾಯಿ ಪರಿಹಾರ ಧನ ನೀಡಿದರು.[ಕಬ್ಬು ಬೆಳೆಗಾರರ ಆತ್ಮಹತ್ಯೆ : ಯಾರು, ಏನು ಹೇಳಿದರು?]

bjp

ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷಗಳ ಹೋರಾಟವನ್ನು ತಡೆಯುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ರೈತ ಪರ ಹೋರಾಟವನ್ನು ಎಂದಿಗೂ ನಿಲ್ಲಿಸಲ್ಲ. ಅಧಿಕಾರದಲ್ಲಿ ಮುಂದುವರಿಯಲು ಸರ್ಕಾರ ಅಯೋಗ್ಯ ಎಂದು ವಾಗ್ದಾಳಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ವಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದ ಸುರೇಶ ಅಂಗಡಿ ,ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ ರವಿ ಸೇರಿದಂತೆ ಹಲವಾರು ಮುಖಂಡರು ಪಾದಯಾತ್ರೆಯಲ್ಲಿ ತೆರಳಿದರು.[ಹೋರಾಟಕ್ಕೆ ಸಜ್ಜಾದ ಕಬ್ಬು ಬೆಳೆಗಾರರು]

bjp

ಪಾದಯಾತ್ರೆಯಲ್ಲಿ ಭಿನ್ನಮತ
ಬಿಜೆಪು ನಾಯಕರು ಮೊದಲಿಗೆ ಮೈರು ಗುಂಪುಗಳಲ್ಲಿ ಪಾದಯಾತ್ರೆ ಹೊರಟಿದ್ದರು. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಒಂದು ಗುಂಪು, ಶೆಟ್ಟರ್, ಜೋಷಿ ಇನ್ನೊಂದು ಗುಂಪು ಮತ್ತು ಸಿಟಿ ರವಿ , ಗಣೇಶದ ಕಾರ್ಣಿಕ್ ಮತ್ತೊಂದು ಗುಂಪಾಗಿ ತೆರಳಿದ್ದರು. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾದ ನಂತರ ಒಟ್ಟಾಗಿ ಮುಂದಕ್ಕೆ ಸಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+