ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ
ನೇಗಿಲ ಹಿಡಿಯಬೇಕಾದವನು ಇಂದು ಕೈಯಲ್ಲಿ ಕಲ್ಲು ಹಿಡಿದಿದ್ದಾನೆ. ಹೊಲದಲ್ಲಿ ಉಳಿಮೆ ಮಾಡಬೇಕಾದವನು ಕಟ್ಟಡದ ಪಿಠೋಪಕರಣಗಳನ್ನು ಒಡೆಯುತ್ತಿದ್ದಾನೆ. ಬೆಳೆ ಬೆಳೆಯಬೇಕಾದವನು ಇಂದು ವಾಹನ ಮತ್ತು ಟೈರುಗಳಿಗೆ ಬೆಂಕಿ ಹಚ್ಚುತ್ತಿದ್ದಾನೆ; ಇದನ್ನೆಲ್ಲ ಮಾಡುತ್ತಿರುವವನು ದೇಶದ ಬೆನ್ನೆಲಬು ಅಂತ ಕರೆಸಿಕೊಳ್ಳುವ ರೈತ ಅಂತ ಹೇಳೊಕೆ ರೈತಾಪಿ ಕುಟುಂಬದಿಂದ ಬಂದ ನನಗೇನೆ ನಾಚಿಕೆಯಾಗುತ್ತೆ!
ನಿಮಗೆಲ್ಲ ತಿಳಿದಿರುವಂತೆ ಕಳೆದ ಹಲವು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಮಹಾದಾಯಿ ನದಿ ಜೋಡಣೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಕಳಸಾ, ಬಂಡೂರಿ ಹೋರಾಟ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಹೋರಾಟದ ಸ್ವರೂಪ ತ್ರೀವವಾಗುತ್ತ ಸಾಗುತ್ತಿದೆ. ಇವರ ಹೋರಾಟಕ್ಕೆ ಕ್ಯಾರೆ ಅನ್ನದ ಜನಪ್ರತಿನಿದಿಗಳ ಮನೆಗೆ ರೈತ ಕಲ್ಲು ಎಸೆಯುತ್ತಿದ್ದಾನೆ. ಈ ಹೋರಾಟದ ಉಗ್ರ ಸ್ವರೂಪವನ್ನು ನೋಡಿದ ಜನಪ್ರತಿನಿದಿಗಳು ಅಂತ ಕರೆಸಿಕೊಳ್ಳುವವರಿಗೆ ಈಗ ದಿಕ್ಕು ತೋಚದಂತಾಗಿದೆ.
ಕಳಸಾ ಬಂಡೂರಿ, ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ದಶಕದಿಂದಲೂ ಹೋರಾಟ ನಡೆಯುತ್ತಲಿದೆ. ನದಿ ಜೋಡಣೆ ಕಾರ್ಯ ಕೈಗೆತ್ತಿಕೊಂಡಾಗಳೆಲ್ಲ ನೆರೆಯ ರಾಜ್ಯ ಗೋವಾ ಮೂರು ಬಾರಿ ಅಡ್ಡಗಲ್ಲು ಹಾಕಿದೆ. ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡು ತನ್ನ ಅರ್ಜಿಯನ್ನು ವಜಾಮಾಡಿಸಿಕೊಂಡರೂ "ಮದ್ಯ ರಾಜ್ಯ"ಕ್ಕೆ ನಾಚಿಕೆಯಾಗುತ್ತಿಲ್ಲ.

ಮಹದಾಯಿ ನದಿ:ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟದ ಸಾಲಿನಲ್ಲಿ ಹುಟ್ಟುವ ಮಹದಾಯಿ ನದಿಯು ಕರ್ನಾಟಕದಲ್ಲಿ 35 ಕಿ.ಮೀ ಹರಿಯುತ್ತದೆ. ಮುಂದೆ ಗೋವಾ ಪುಟ್ಟ ರಾಜ್ಯದಲ್ಲಿ 45 ಕಿ.ಮೀ ಹರಿಯುವ ಮಹದಾಯಿ (ಮಾಂಡೋವಿ) ನದಿ, ಕೊನೆಗೆ ಅರಬ್ಬಿ ಸಮುದ್ರವನ್ನು ಸೇರುತ್ತದೆ. 52.60ಟಿಎಂಸಿ ಅಡಿ ನೀರು ಮಹಾದಾಯಿ ಇಂದ ಕರ್ನಾಟಕಕ್ಕೆ ಸಿಗುತ್ತಿದೆ. ಗೋವಾ ರಾಜ್ಯದ ಮೂಲಕ 159.07 ಟಿಎಂಸಿ ಅಡಿ ನೀರು ಅರೇಬಿಯನ್ ಸಮುದ್ರಕ್ಕೆ ಸೇರಿಕೊಳ್ಳುತ್ತದೆ.
ಹೀಗೆ ರಾಜ್ಯದ ಮೂಲಕ ಅರೇಬಿಯನ್ ಸಮುದ್ರಕ್ಕೆ ಸೇರಿ ಪೋಲಾಗುವ ನೀರನ್ನು ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಉಪಯೋಗವಾಗಲೆಂದು ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್, ಎಸ್ ಆರ್ ಬೊಮ್ಮಾಯಿ ನೇತೃತ್ವದಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಂಡರು.
ರೈತನ ತಾಳ್ಮೆಯ ಕಟ್ಟೆ ಒಡೆದಿದೆ: 1960 ರಿಂದ ಪ್ರಾರಂಭವಾದ ಈ ನದಿ ಜೋಡಣೆ ಈ ವರೆಗೂ ಪೂರ್ಣಗೊಳ್ಳದೇ ಸ್ಥಗಿತಗೊಂಡಿದೆ. ಈ 50 ವರ್ಷದ ಅವಧಿಯಲ್ಲಿ ಮಹದಾಯಿ ನದಿ ಜೋಡಣೆ ಆಗುತ್ತದೆಂಬ ಆಶಾಭಾವದೊಂದಿಗೆ ಒಣ ಬೇಸಾಯ ಮಾಡುತ್ತಾ ಬಂದಿದ್ದ ಉತ್ತರ ಕರ್ನಾಟಕದ ರೈತನ ತಾಳ್ಮೆಯ ಕಟ್ಟೆ ಇಂದು ಒಡೆದಿದೆ.

ಅವರು ಹಾಗೆ-ನಾವು ಹೀಗೆ : ಕಾವೇರಿ ನದಿ ಹಂಚಿಕೆ ಸಂಭಂದಪಟ್ಟಂತೆ ತಮಿಳುನಾಡು ರಾಜ್ಯ, ಕೃಷ್ಣ ನದಿಗೆ ಸಂಬಂಧಪಟ್ಟಂತೆ ಆಂಧ್ರಪ್ರದೇಶ ರಾಜ್ಯ ಮತ್ತು ಮಹದಾಯಿ ನದಿ ಜೋಡಣೆ ಸಂಬಂಧಪಟ್ಟಂತೆ ಗೋವಾ ರಾಜ್ಯವು ಪಕ್ಷಾತೀತವಾಗಿ ರಾಜ್ಯದ ಪ್ರತಿಯೊಬ್ಬರು ಬೀದಿಗಿಳಿದು ಹೋರಾಟ ನಡೆಸಿ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಸರಿಯೋ-ತಪ್ಪೋ ಒಟ್ಟಲ್ಲಿ ನಮ್ಮ ರಾಜ್ಯ ಸೋಲಬಾರದೆಂಬ ಮನಸ್ಥಿತಿ ಅಲ್ಲಿನ ಜನರದು.
ಆದರೆ ಅದೇ ಒಗ್ಗಟ್ಟು ನಮ್ಮಲ್ಲಿ ಇದೇ ಏನೋ ಅಂತ ನೋಡಿದ್ರೆ, ಅದು ಕೇವಲ ಕಾವೇರಿ ನದಿಗೆ ಮಾತ್ರ ಸೀಮಿತವಾಗಿದೆ. ಉತ್ತರ ಕರ್ನಾಟಕವನ್ನು ಕರ್ನಾಟಕ ರಾಜ್ಯ ಸ್ಥಾಪಣೆಯಾಂದಾಗಿನಿಂದಲೂ ನಿರ್ಲಕ್ಷಿಸಲಾಗಿದೆ. ಗೋವಾ ಮತ್ತು ಆಂಧ್ರ ರಾಜ್ಯದೊಂದಿಗೆ ನೀರಿನ ವಿಚಾರವಾಗಿ ಜಗಳವಾದಾಗಲೆಲ್ಲಾ ನಮ್ಮಗೆ ನಾವು ಸೋಲುತಿದ್ದೇವೆ.
ಉತ್ತರ ಕರ್ನಾಟಕದ ಬಹುತೇಕ ಪಕ್ಷದ ರಾಜಕಾರಣಿಗಳು ಕಳಸಾ ಬಂಡೂರಿ, ಮಹಾದಾಯಿ ಯೋಜನೆ ಹೆಸರಿನಲ್ಲಿ ಓಟು ಗಿಟ್ಟಿಸಿಕೊಂಡು ತಮ್ಮ ಅಧಿಕಾರ ಚುಕ್ಕಾಣಿ ಹಿಡಿದ್ದಾರೆ ಹೊರತು ಯಾವುದೇ ರೀತಿಯ ನದಿ ಜೋಡಣೆ ಕಾರ್ಯಕ್ಕೆ ಮುಂದಾಗಿಲ್ಲ. ಇದರ ಪ್ರತಿಫಲವಾಗಿಯೇ ರಾಜಕಾರಣಿಗಳ ಮನೆಗೆ ಕಲ್ಲುಗಳು ಬೀಳುವಂತಾಗಿದೆ.
ಇದು ನಮ್ಮ-ನಮ್ಮಲ್ಲಿ ಒಗಟ್ಟು ಇಲ್ಲವೆಂಬುದು ತೋರಿಸುತ್ತದೆ. ಈಗಾಗಲೇ ಮಹಾದಾಯಿ ನದಿ ಜೋಡಣೆ ಗಾಗಿ ರೈತರು ಹಿಂಸಾಚಾರದ ಹೋರಾಟಕ್ಕೆ ಇಳಿದಿದ್ದಾರೆ. ತಮ್ಮ ಬಹುದಿನದ ಬೇಡಿಕೆ ಈಡೇರಿಸದಿದ್ದರೇ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ನಮ್ಮ-ನಮ್ಮಲ್ಲಿ ಏಕತೆ ಅನ್ನುವುದು ಕಾಣುತ್ತಿಲ್ಲ. ಈಗಲಾದ್ರೂ ಉತ್ತರ ಕರ್ನಾಟಕದ ಬಗ್ಗೆ ತಾತ್ಸಾರ ಮನೋಭಾವನೆ ಬಿಟ್ಟು ಒಗಟ್ಟು ಪ್ರದರ್ಶಿಸಬೇಕಾಗಿದೆ. ಅದಷ್ಟು ಬೇಗ ಮಹದಾಯಿ ನದಿ ಜೋಡಣೆಗೆ ಚಾಲನೆ ಸಿಗಲಿ ಹಾಗೂ ರೈತರ ಬಾಳು ಹಸನಾಗಲಿ...
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications