ಭಾರತದಲ್ಲಿ ಈ ವರ್ಷ ಗೋಧಿ ಬಿತ್ತನೆಯಲ್ಲಿ ಶೇ.25ರಷ್ಟು ಏರಿಕೆ
ಬೆಂಗಳೂರು, ಡಿಸೆಂಬರ್ 11: ಚಳಿಗಾಲದ (ರಾಬಿ) ಹಂಗಾಮಿನ ಪ್ರಮುಖ ಧಾನ್ಯವಾದ ಗೋಧಿ ಬಿತ್ತನೆ ದೇಶದಲ್ಲಿ ಇದುವರೆಗೆ 255.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇ. 25 ರಷ್ಟು ಅಧಿಕ ಬಿತ್ತನೆ ಆಗಿದೆ.
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಗೋಧಿ ಬಿತ್ತುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ರೈತರು ಅತೀ ಹೆಚ್ಚು ಗೋಧಿ ಬಿತ್ತನೆ ಆಗಿದೆ. ಈ ಮೂಲಕ ಕಳೆದ ವರ್ಷದ ರಾಬಿ ಋತವಿನ ಇದೇ ಅವಧಿಯಲ್ಲಿ 203.91 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆ ಕಂಡಿತ್ತು.

ಉತ್ತರ ಪ್ರದೇಶ ರಾಜ್ಯದಲ್ಲಿ ಈವರೆಗೆ 20.09 ಲಕ್ಷ ಹೆಕ್ಟೇರ್, ಮಧ್ಯಪ್ರದೇಶ 13.48 ಲಕ್ಷ ಹೆಕ್ಟೇರ್, ರಾಜಸ್ಥಾನನಲ್ಲಿ 5.32 ಲಕ್ಷ ಹೆಕ್ಟೇರ್, ಗುಜರಾತ್‌ನಲ್ಲಿ 2.61 ಲಕ್ಷ ಹೆಕ್ಟೇರ್, ಮಹಾರಾಷ್ಟ್ರದಲ್ಲಿ 2.43 ಲಕ್ಷ ಹೆಕ್ಟೇರ್, ಬಿಹಾರನಲ್ಲಿ 2.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆ ಆಗಿದೆ. ಇನ್ನು ಪಂಜಾಬ್ ರಾಜ್ಯದಲ್ಲಿ ರೈತರು ಒಟ್ಟು 1.32 ಲಕ್ಷ ಹೆಕ್ಟೇರ್ ಮತ್ತು ಹರಿಯಾಣದಲ್ಲಿ 1.28 ಲಕ್ಷ ಹೆಕ್ಟೇನಲ್ಲಿ ಗೋಧಿ ಉಳಿಮೆ ಮಾಡಿದ್ದಾರೆ.
ದೇಶೀಯ ಉತ್ಪಾದನೆಯು 2021-22 ಸಾಲಿನ ಜುಲೈ ನಿಂದ ಜೂನ್‌ವರೆಗೆ 106.84 ಮಿಲಿಯನ್ ಟನ್‌ಗಳಿಗೆ ಇಳಿಕೆ ಕಂಡಿತ್ತು.
ಈ ವರ್ಷದ ಮೇ ತಿಂಗಳಲ್ಲಿ, ದೇಶೀಯ ಸರಬರಾಜುಗಳನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ಗೋಧಿಯ ರಫ್ತುಗಳನ್ನು ನಿಷೇಧಿಸಿತು. 2022-23 ಮಾರುಕಟ್ಟೆ ವರ್ಷದಲ್ಲಿ 434.44 ಲಕ್ಷ ಟನ್‌ಗಳಿಂದ ಸರ್ಕಾರಿ ಸ್ವಾಮ್ಯದ ಎಫ್‌ಸಿಐನಿಂದ ಗೋಧಿ ಸಂಗ್ರಹಣೆಯು 187.92 ಲಕ್ಷ ಟನ್‌ಗಳಿಗೆ ಕುಸಿದಿದೆ. ಏಕೆಂದರೆ ದೇಶೀಯ ಉತ್ಪಾದನೆಯಲ್ಲಿನ ಕುಸಿತ ಮತ್ತು ಖಾಸಗಿಯ ಭಾರಿ ಖರೀದಿಯಿಂದಾಗಿ ಈ ವರ್ಷ ದಾಸ್ತಾನು ಕುಸಿತ ಕಂಡಿತ್ತು.
ಡಿಸೆಂಬರ್ 9ರವರೆಗಿನ ಮಾಹಿತಿ ಪ್ರಕಾರ, ಭತ್ತದ ವಿಸ್ತೀರ್ಣವು 10.42 ಲಕ್ಷ ಹೆಕ್ಟೇರ್‌ನಿಂದ ಇದುವರೆಗೆ 11.86 ಲಕ್ಷ ಹೆಕ್ಟೇರ್‌ಗೆ ಏರಿಕೆ ಆಗಿದೆ. ದ್ವಿದಳ ಧಾನ್ಯಗಳು ಈವರೆಗೆ 123.77 ಲಕ್ಷ ಹೆಕ್ಟೇರ್ ನಿಂದ 127.07 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಇನ್ನೂ ಒರಟಾದ ಧಾನ್ಯಗಳ ಬಿತ್ತನೆ 36.39 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ಎಣ್ಣೆಕಾಳುಗಳ ಬಿತ್ತನೆ ಏರಿಕೆ
ಅದೇ ರೀತಿ ಎಣ್ಣೆಕಾಳುಗಳ ಬಿತ್ತನೆಯು ಮೊದಲಿನ ಹಂತ ಮತ್ತು ನಂತರ (ಈವರೆಗೆ) ಹೋಲಿಕೆ ಮಾಡಿದರೆ 87.65 ಲಕ್ಷ ಹೆಕ್ಟೇರ್‌ಗಳಿಂದ 95.19 ಲಕ್ಷ ಹೆಕ್ಟೇರ್‌ಗಳಿಗೆ ಏರಿಕೆಯಾಗಿದೆ. ರಾಬಿ ಹಂಗಾಮಿನ ಪ್ರಮುಖ ಎಣ್ಣೆಕಾಳು ಬೆಳೆ ಸಾಸಿವೆಯು 80.78 ಲಕ್ಷ ಹೆಕ್ಟೇರ್‌ನಿಂದ 87.95 ಲಕ್ಷ ಹೆಕ್ಟೇರ್‌ಗೆ ಹೆಚ್ಚು ಬಿತ್ತನೆ ಏರಿಕೆಕಂಡಿದೆ.
ಭಾರತವು ತನ್ನ ಖಾದ್ಯ ತೈಲಗಳ ಅಗತ್ಯವಿರುವ ಶೇ. 60 ರಷ್ಟನ್ನು ಬೇರೆಡೆಯಿಂದ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ, ಸಾಸಿವೆ ಬೀಜಗಳ ವಿಸ್ತೀರ್ಣದಲ್ಲಿ ಹೆಚ್ಚಳವು ಸಾಸಿವೆ ಎಣ್ಣೆಯ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ರಾಬಿ ಬೆಳೆಗಳ ಒಟ್ಟು ಬಿತ್ತನೆ ಪ್ರದೇಶವು ಕಳೆದ ವರ್ಷದ ಇದೇ ಅವಧಿಯಲ್ಲಿ 457.80 ಲಕ್ಷ ಹೆಕ್ಟೇರ್ ಇತ್ತು. ಅದು ಈ ವರ್ಷ ಇದುವರೆಗೆ 526.27 ಲಕ್ಷ ಹೆಕ್ಟೇರ್ ನಷ್ಟು ಏರಿಕೆ ಆಗಿದೆ ಎಂದು ಕೇಂದ್ರ ಸರ್ಕಾರ ಮೂಲಗಳು ತಿಳಿಸಿವೆ.











Click it and Unblock the Notifications