ಈರುಳ್ಳಿ: ದೆಲ್ಲಿಯಲ್ಲಿ ಕೆಜಿಗೆ 80, ಬೆಂಗ್ಳೂರಲ್ಲಿ 67 ರು. !
ನವದೆಹಲಿ, ಆಗಸ್ಟ್. 18: ಈರುಳ್ಳಿ ಸರ ಸದ್ಯಕ್ಕೆ ಇಳಿಯುವ ಯಾಲ ಲಕ್ಷಣಗಳು ಕಾಣುತ್ತಿಲ್ಲ. ಬೆಂಗಳೂರಿನಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಕೆಜಿಗೆ 67 ರು. ತಲುಪಿದ್ದರೆ ನವದೆಹಲಿಯಲ್ಲಿ ಕೆಜಿಗೆ 80 ರು. ನೀಡಬೇಕಾಗಿದೆ.
ದೊಡ್ಡ ಪ್ರಮಾಣ ದಲ್ಲಿ ಈರುಳ್ಳಿ ಆಮದು ಮಾಡಿಕೊಳ್ಳುವ ಕೇಂದ್ರದ ಕ್ರಮ ವಿಫಲವಾಗಿರುವುದು ದರ ಏರಿಕೆಗೆ ಮುಖ್ಯ ಕಾರಣವಾಗಿ ಪರಿಣಮಿಸಿದೆ. ದೇಶದಲ್ಲಿನ ದಾಸ್ತಾನು ಅಂದಾಜು 30 ಲಕ್ಷ ಟನ್‌ಗಳಿಗಿಂತಲೂ ಕಡಿಮೆ ಇದೆ. ಅಲ್ಲದೇ, ವಿವಿಧ ದೇಶಗಳಿಂದ 10 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳುವ ಪ್ರಯತ್ನವೂ ಕೈಗೂಡಿಲ್ಲ. ಇದೀಗ ಹಬ್ಬದ ಸರಣಿ ಆರಂಭವಾಗಲಿದ್ದು ನಾಗರಿಕರು ಪರಿತಪಿಸುವಂತಾಗಿದೆ.[ಈರುಳ್ಳಿ ದರ ದಿಢೀರ್ ಏರಿಕೆಗೆ ಕಾರಣವೇನು?]

ಮತ್ತೆ ಟೆಂಡರ್:
ರಾಷ್ಟ್ರೀಯ ಕೃಷಿ ಸಹಕಾರಿ ಮತ್ತು ಮಾರಾಟ ಮಹಾ ಒಕ್ಕೂಟ (ನಫೆಡ್) 10 ಸಾವಿರ ಟನ್ ಈರುಳ್ಳಿ ಆಮದು ಸಲುವಾಗಿ ಈಗ ಮತ್ತೊಮ್ಮೆ ಟೆಂಡರ್ ಕರೆದಿದೆ. ಈ ಮೊದಲು ಪ್ರಕಟಿಸಿದ್ದ ಟೆಂಡರ್‌ಗೆ ಪಾಕಿಸ್ತಾನ, ಚೀನಾ, ಈಜಿಪ್ಟ್ ಸೇರಿದಂತೆ ಯಾವ ದೇಶದಿಂದಲೂ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ಮರು ಟೆಂಡರ್ ಕರೆಯುವುದು ನಫೆಡ್‌ಗೆ ಅನಿವಾರ್ಯವಾಗಿದೆ.
ಈರುಳ್ಳಿಯ ಅತಿದೊಡ್ಡ ಮಾರುಕಟ್ಟೆಯಾದ ಮಹಾ ರಾಷ್ಟ್ರದಲ್ಲಿಯೇ ಕೆಜಿಗೆ 43 ರು. ನೀಡಬೇಕಿದೆ. ಅಲ್ಲದೇ ಮಾರುಕಟ್ಟೆಯ ಮೇಲೆ ಮಧ್ಯವರ್ತಿಗಳು ಹಿಡಿತ ಸಾಧಿಸಿದ್ದು ಹೊಸ ಈರುಳ್ಳಿ ಪ್ರವೇಶ ಮಾಡುವವರೆಗೂ ಬೆಲೆ ಇರಿಕೆ ಮುಂದುವರಿಯಲಿದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್ ಗೂ ಬೆಲೆ ಏರಿಕೆ ಬಿಸಿ ತಟ್ಟಿದೆ.
ಉದ್ದು ಮತ್ತು ತೊಗರಿ ದುಬಾರಿ
ಉದ್ದು ಮತಯ್ತು ತೊಗರಿ ಬೆಲೇ ಸಹ ಕೆಜಿಗೆ 110ರ ಗಡಿ ದಾಟಿವೆ. ತೊಗರಿ ದರ ಮೊದಲಿನಿಂದಲೂ ಏರಿಕೆ ಕಾಣುತ್ತಲೇ ಇತ್ತು. ಆದರೆ ಉದ್ದು ಒಮ್ಮೆಲೇ ಕೆಜಿಗೆ 20 ರು. ಹೆಚ್ಚಾಗಿದೆ.












Click it and Unblock the Notifications