ಸರಕಾರದ ಮೂಗು ಹಿಡಿದು ರೈತರ ಸಾಲ ಮನ್ನಾ, ಬಿಎಸ್ ವೈಗೆ ಇದೆಲ್ಲಿಯ ವಿಶ್ವಾಸ?
ಬಿಜೆಪಿ ರಾಜ್ಯಾಧ್ಯಕ್ಷ ಮತ್ತೊಮ್ಮೆ ರೈತರ ಸಾಲ ಮನ್ನಾ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ್ದಾರೆ. ಸರಕಾರದ ಮೂಗು ಹಿಡಿದು ಮನ್ನಾ ಮಾಡಿಸುವುದಾಗಿ ಹೇಳಿದ್ದಾರೆ. ಅವರಿಗೆ ಇಷ್ಟು ವಿಶ್ವಾಸ ಮೂಡಲು ಸಾಧ್ಯವಾಗಿದ್ದು ಹೇಗೆ?
ಶಿಗ್ಗಾಂವಿ, ಮೇ 24: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮಾತುಗಳನ್ನು ಕೇಳಿದರೆ, ತುಂಬ ಲೆಕ್ಕಾಚಾರ ಹಾಕಿಕೊಂಡೇ ಈ ಹೇಳುತ್ತಿರುವಂತಿದೆ. ಅದೇನು ಮಾತು ಅಂತೀರಾ? ನಾಲ್ಕೈದು ಲಕ್ಷ ರೈತರನ್ನು ಬೆಂಗಳೂರಿನಲ್ಲಿ ಸೇರಿಸಿ, ಸರಕಾರದ ಮೂಗು ಹಿಡಿದು ರೈತರ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಹೇಳಿದ್ದಾರೆ.
ಇದೇ ಮಾತನ್ನು ಅದೆಷ್ಟನೇ ಬಾರಿಗೋ ಬಿಎಸ್ ವೈ ಹೇಳುತ್ತಿದ್ದಾರೆ. ಶಿಗ್ಗಾಂವಿ ತಾಲೂಕಿನ ದಲಿತ ಕಾಲೋನಿ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಹಲವು ಹಗರಣಗಳನ್ನು ಮಾಡಿದೆ. ಅವೆಲ್ಲವನ್ನೂ ಬಯಲು ಮಾಡುತ್ತೇನೆ ಎಂದು ಗುಟುರು ಹಾಕಿದ್ದಾರೆ.[ಮಹದಾಯಿ ಸಮಸ್ಯೆ ಎತ್ತಿದ ರೈತನ ಮೇಲೆ 'ಕೈ'ಎತ್ತಿದ ಬಿಜೆಪಿ ಮುಖಂಡ!]

ಬಿಎಸ್ ವೈ ಪದೇಪದೇ ಹೀಗೆ ಹೇಳುತ್ತಿರುವುದರಲ್ಲೂ ಲೆಕ್ಕಾಚಾರ ಇರುವಂತೆ ಕಾಣುತ್ತಿದೆ. ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಇರುವ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದರೆ, ಅದರ ಶ್ರೇಯ ಕಾಂಗ್ರೆಸ್ ಗೆ ಸಿಗಬಾರದು ಎಂಬ ಆಲೋಚನೆ ಯಡಿಯೂರಪ್ಪನವರದು.[ನರಗುಂದದಲ್ಲಿ ಬಿಎಸ್ ವೈ ಸಭೆ, ಮಹಾದಾಯಿ ಹೋರಾಟಗಾರರ ಎಚ್ಚರಿಕೆ!]
ಚುನಾವಣೆ ಸಂದರ್ಭದಲ್ಲಿ, ಸಿದ್ದರಾಮಯ್ಯ ನನ್ನ್ ಮಾತಿಗೆ ಬೆದರಿ ಸಾಲ ಮನ್ನಾ ಮಾಡಿದರು ಎಂದು ಬಿಎಸ್ ವೈ ಸಾಧಿಸಬಹುದು. ಇತ್ತ, ಸಿದ್ದರಾಮಯ್ಯ ಅವರಿಗೆ ಸಂದಿಗ್ಧ. ರೈತರ ಸಾಲ ಮನ್ನಾ ಮಾಡಿದರೆ ವಿಪಕ್ಷಗಳಿಗೆ ಮಣಿದಿದ್ದಾರೆ ಎಂದು ಹುಯಿಲೆಬ್ಬಿಸಬಹುದು ಎಂಬ ಆತಂಕ ಅವರಿಗಿರಬಹುದು.












Click it and Unblock the Notifications