ಹುಬ್ಬಳ್ಳಿಗೆ ಕಾಳಿನದಿ ನೀರು ಹರಿಸಲು ರೈತಸಂಘ ಒತ್ತಾಯ

ಹುಬ್ಬಳ್ಳಿ, ಅಕ್ಟೋಬರ್, 07 : ಕಳಸಾ-ಬಂಡೂರಿ ನಾಲಾ ಯೋಜನಾ ಪ್ರತಿಭಟನಾ ಕಾವು ಇದೀಗ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಗೂ ತಟ್ಟಿದೆ. ಕಾಳಿ ನದಿ ನೀರನ್ನು ನಾಲಾ ಮೂಲಕ ಹರಿಸಬೇಕು. ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕೆಂದು ಆಗ್ರಹಿಸಿದ ರೈತ ಸಂಘ ಅಕ್ಟೋಬರ್ 7ರ ಬುಧವಾರದಂದು ಪುಣೆ-ಬೆಂಗಳೂರು ಮತ್ತು ಧಾರವಾಡ-ದಾಂಡೇಲಿ ರಸ್ತೆ ತಡೆ ನಡೆಸಿದೆ.

ಉತ್ತರ ಕನ್ನಡದ ಜೀವನದಿಯಾದ ಕಾಳಿನದಿ ನೀರನ್ನು ನಾಲಾ ಮೂಲಕ ಕಲಘಟಗಿ, ಹಳಿಯಾಳ, ಮುಂಡಗೋಡ ಹಾಗೂ ಹುಬ್ಬಳ್ಳಿ-ಧಾರವಾಡ ತಾಲೂಕಿನಲ್ಲಿ ಹರಿಸಬೇಕು. ಪರರಾಜ್ಯಗಳ ನೀರಿನ ಕಡೆ ಗಮನ ಹರಿಸದೆ ನಮ್ಮ ರಾಜ್ಯದ ನೀರನ್ನೇ ಬಳಸಿಕೊಂಡು ಜನರ ನೀರಿನ ಸಮಸ್ಯೆ ಕಡಿಮೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.[ಕಾಳಿ ಕಣಿವೆ ರಹಸ್ಯ:ಸಂಶೋಧಕರೊಮ್ಮೆ ಇತ್ತ ಬನ್ನಿ]

Hubballi Farmers association has take protest to leave kali river water for other taluk

ರಾಜ್ಯದ ನದಿಗಳನ್ನು ಜೋಡಣೆ ಮಾಡಿದರೆ ರೈತರ ಆತ್ಮಹತ್ಯೆಗಳು ಕಡಿಮೆಯಾಗಲಿದೆ. ಈಗಾಗಲೇ ಕಾಳಿನದಿ ಹಳಿಯಾಳ ತಾಲೂಕಿನವರೆಗೂ ಹರಿಯುತ್ತಿದೆ. ಇದರ ಹರಿಯುವಿಕೆಯನ್ನು ಇನ್ನಷ್ಟು ವಿಸ್ತರಿಸಬೇಕೆಂದು ಕೋರಿದ್ದಾರೆ.

ಕಾಳಿನದಿ ನೀರು ರೈತರ ಹೊಲಗಳಿಗೆ, ನಾಗರಿಕರಿಗೆ ಕುಡಿಯಲು, ವಿದ್ಯುತ್ ಉತ್ಪಾದಿಸಲು ನೆರವಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವರಿಕೆ ಮಾಡಿಕೊಟ್ಟರೂ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+