ಹೆದ್ದಾರಿಗಳಲ್ಲಿ ಹಾಪ್ ಕಾಮ್ಸ್‌ನಿಂದ ಸಸ್ಯಹಾರಿ ಹೋಟೆಲ್ ನಿರ್ಮಾಣ
ಬೆಂಗಳೂರು, ಸೆಪ್ಟೆಂಬರ್ 10 : ನೈಸರ್ಗಿಕವಾಗಿ ಬೆಳೆದ ತರಕಾರಿಗಳನ್ನು ನೇರವಾಗಿ ರೈತರಿಂದ ಖರೀದಿ ಮಾಡಿ ಮಾರಾಟ ಮಾಡುವ ಹಾಪ್ ಕಾಮ್ಸ್ ಹೋಟೆಲ್ ಉದ್ಯಮಕ್ಕೆ ಕಾಲಿಡಲಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹೈಟೆಕ್ ಹೋಟೆಲ್ ನಿರ್ಮಾಣವಾಗಲಿದೆ.
ಮನೆ ಬಾಗಿಲಿಗೆ ಹಾಪ್ ಕಾಮ್ಸ್ ಉತ್ಪನ್ನಗಳನ್ನು ತಲುಪಿಸಲು 24 ಮೊಬೈಲ್ ವ್ಯಾನ್ ಮತ್ತು ಜನರಿಗೆ ಗುಣಮಟ್ಟದ ತರಕಾರಿ ಒದಗಿಸಲು 24 ಹೊಸ ಮಳಿಗೆಗಳನ್ನು ಶೀಘ್ರದಲ್ಲಿಯೇ ಹಾಪ್ ಕಾಮ್ಸ್ ಆರಂಭಿಸಲಿದೆ. ರಾಜ್ಯಾದ್ಯಂತ 490 ಮಳಿಗೆಗಳು ಸದ್ಯ ಕಾರ್ಯ ನಿರ್ವಹಿಸುತ್ತಿವೆ.
ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಹೋಟೆಲ್ ನಿರ್ಮಿಸಲು ಹಾಪ್ ಕಾಮ್ಸ್ ಮುಂದಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಮಾನಿಯಂತ್ರಿತ ಹೋಟೆಲ್ ನಿರ್ಮಾಣವಾಗಲಿದೆ.

ಮಂಡ್ಯ ಸಮೀಪ ಸುಮಾರು 3 ಕೋಟಿ ವೆಚ್ಚದಲ್ಲಿ ಹೈಟೆಕ್ ಹೋಟೆಲ್ ನಿರ್ಮಾಣವಾಗಲಿದೆ. ತೋಟಗಾರಿಕಾ ಇಲಾಖೆಗೆ ಸೇರಿದ ಜಾಗದಲ್ಲಿ ಸಸ್ಯಹಾರಿ ಹೋಟೆಲ್ ಆರಂಭವಾಗಲಿದೆ. ಹೋಟೆಲ್ ಪಕ್ಕದಲ್ಲಿಯೇ ಹಾಪ್ ಕಾಮ್ಸ್ ಮಳಿಗೆ ಸಹ ಇರಲಿದೆ.
ಹೆದ್ದಾರಿಯಲ್ಲಿ ಬಸ್ ನಿಲ್ದಾಣ, ಆಸ್ಪತ್ರೆ, ಪ್ರಮುಖ ಜಂಕ್ಷನ್‌ಗಳ ಸಮೀಪ ಹೈಟೆಕ್ ಹೋಟೆಲ್ ನಿರ್ಮಿಸಲು ಹಾಪ್ ಕಾಮ್ಸ್ ಮುಂದಾಗಿದೆ. ಸುಮಾರು 300 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿಗಳನ್ನು ಹಾಪ್ ಕಾಮ್ಸ್ ಪ್ರತಿದಿನ ಮಾರಾಟ ಮಾಡುತ್ತಿದೆ.











Click it and Unblock the Notifications