ಅರ್ಧ ಶತಕದ ಗಡಿ ದಾಟಿದ ತರಕಾರಿಗಳ ಬೆಲೆ!
ಬೆಂಗಳೂರು, ನವೆಂಬರ್ 22 : ಕಳೆದ ವಾರ ಈರುಳ್ಳಿ, ಟೊಮೆಟೋ ದರ ಹೆಚ್ಚಳವಾಗಿತ್ತು. ಈಗ ಬ್ಯಾಗು ಹಿಡಿದು ಅಂಗಡಿಗೆ ಹೋದವರು ಎಲ್ಲಾ ತರಕಾರಿಗಳ ಬೆಲೆ ಕೇಳಿ ಕಂಗಾಲಾಗಿದ್ದಾರೆ.
ಬೆಂಗಳೂರು ನಗರದ ಮಾರುಕಟ್ಟೆ, ಹಾಪ್ ಕಾಮ್ಸ್‌ಗಳಲ್ಲಿ ತರಕಾರಿಗಳ ಬೆಲೆಗಳಲ್ಲಿ ಹೆಚ್ಚಳವಾಗಿದೆ. ಕೆಲವು ತರಕಾರಿಗಳನ್ನು ಹೊರತುಪಡಿಸಿದರೆ ಉಳಿದವುಗಳ ಬೆಲೆ 50 ರೂ. ದಾಟಿದೆ.

ಹಾಪ್ ಕಾಮ್ಸ್ ಇಂದಿನ ದರ ಪಟ್ಟಿ ಪ್ರಕಾರ ಬೀನ್ಸ್ 36, ಬೀಟ್ ರೋಟ್ 57, ಬದನೆಕಾಯಿ (ಬಿಳಿ) 50, ಕ್ಯಾಪ್ಸಿಕಂ 54, ಕ್ಯಾರೆಟ್ (ನಾಟಿ) 92, ಕ್ಯಾರೆಟ್ (ಊಟಿ) 96, ಹೂ ಕೋಸು 50, ಈರುಳ್ಳಿ 57, ಆಲೂಗೆಡ್ಡೆ 23, ಟೊಮೆಟೋ 49 ರೂ. ದರವಿದೆ.
'ಆಗಸ್ಟ್ ತಿಂಗಳ ಬಳಿಕ ಬೆಂಗಳೂರು ಸುತ್ತ-ಮುತ್ತ ಸುರಿದ ಮಳೆಯಿಂದಾಗಿ ತರಕಾರಿ ಉತ್ಪಾದನೆ ಕುಸಿತಗೊಂಡಿದೆ. ಇದರಿಂದಾಗಿ ಪೂರೈಕೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ' ಎನ್ನುತ್ತಾರೆ ಹನುಮಂತನಗರ ಹಾಪ್‌ಕಾಮ್ಸ್‌ನ ರವೀಂದ್ರ.
ಸತತವಾಗಿ ಸುರಿದ ಮಳೆಯಿಂದಾಗಿ ತರಕಾರಿ ಉತ್ಪಾದನೆ ಕಡಿಮೆಯಾಗಿದೆ. ಒಂದು ವಾರದಲ್ಲಿ ಅಗತ್ಯದಷ್ಟು ಪೂರೈಕೆಯಾಗಲಿದೆ. ನಂತರ ಬೆಲೆಗಳು ಕಡಿಮೆಯಾಗಲಿವೆ ಎನ್ನುತ್ತಾರೆ ವ್ಯಾಪಾರಿಗಳು.











Click it and Unblock the Notifications