ಮದ್ದೂರಿನಲ್ಲಿ ಪ್ರವಾಹ ನೋಡಲು ಮುಗಿಬಿದ್ದ ಜನ!

ಮಂಡ್ಯ, ನವೆಂಬರ್, 06: ಹಿಂಗಾರು ಮಳೆ ಮಂಡ್ಯ ಜಿಲ್ಲೆಯಾದ್ಯಂತ ಅಬ್ಬರಿಸಿದ ಪರಿಣಾಮ ನದಿ, ಕೆರೆ, ಕಟ್ಟೆಗಳು ತುಂಬಿಹರಿದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೃಷಿ ಭೂಮಿ ಜಲಾವೃತಗೊಂಡಿದೆ. ಹಲವಾರು ಮನೆಗಳು ಕುಸಿದು ಜನರು ಸೂರಿಗಾಗಿ ಹೆಣಗಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಮದ್ದೂರು ಪಟ್ಟಣದ ತಗ್ಗು ಪ್ರದೇಶಗಳಿಗೆ ಯಥೇಚ್ಚವಾಗಿ ನೀರು ಹರಿದಿದ್ದರಿಂದ ಮನೆಗಳು, ಸಮುದಾಯ ಭವನ, ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿವೆ. ಶಿವಪುರದ ಸೋಮೇಶ್ವರ ಸಮುದಾಯ ಭವನದ ಪೀಠೋಪಕರಣಗಳು ಹಾಗೂ ಮಹದೇಶ್ವರ ಅಕ್ಕಿ ಗಿರಣಿಯಲ್ಲಿದ್ದ 1 ಸಾವಿರ ಕ್ವಿಂಟಾಲ್ ಅಕ್ಕಿ, 500 ಕ್ವಿಂಟಾಲ್ ಭತ್ತ ನೀರು ಪಾಲಾಗಿದೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮದ್ದೂರಿನ ಕೊಲ್ಲಿ ವೃತ್ತದ ಬಳಿ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುತ್ತಿದೆ. ಅಲ್ಲದೇ ಈ ಸೇತುವೆ ದುಸ್ಥಿತಿಯಲ್ಲಿರುವ ಕಾರಣ ಅಪಾಯ ಎದುರಾಗುವ ಸಂಭವ ಹೆಚ್ಚಾಗಿದೆ. ಶಿಂಷಾ ನದಿ ಕೂಡ ಉಕ್ಕಿ ಹರಿಯುತ್ತಿದ್ದು, ನೀರಿನ ಹರಿಯುವಿಕೆಯ ಅಬ್ಬರತೆ ನೋಡಲು ಜನರು ಮುಗಿಬೀಳುತ್ತಿದ್ದಾರೆ.[ಹಿಂಗಾರು ಆರ್ಭಟಕ್ಕೆ ಮಲೆನಾಡು ತತ್ತರ, ಇನ್ನೆರಡು ದಿನ ಮಳೆ]

ಬಹಳ ವರ್ಷಗಳ ನಂತರ ಬಂದ ಪ್ರವಾಹವನ್ನು ನೋಡಲು ಜನ ಕುತೂಹಲದಿಂದ ಬಂದ ಪರಿಣಾಮ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಪೊಲೀಸರು ಹೆಣಗಾಡಬೇಕಾಯಿತು. ಬಳಿಕ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಲಾಯಿತು. ಮಹದೇಶ್ವರ ಸರ್ವಿಸ್ ಸ್ಟೇಷನ್‍ನಲ್ಲಿದ್ದ ಜನರೇಟರ್ ಎಲೆಕ್ಟ್ರಾನಿಕ್ ಉಪಕರಣಗಳು ನಾಶವಾಗಿವೆ.

ಕೆ.ಆರ್.ಪೇಟೆ ಮತ್ತು ಶ್ರೀರಂಗಪಟ್ಟಣದಲ್ಲಿ ಧಾರಾಕಾರ ಮಳೆಗೆ ಭಾರೀ ಹಾನಿಯಾಗಿದೆ. ಪಾಂಡವಪುರ ತಾಲೂಕಿನ ಹರಿಹರಪುರ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಸುಮಾರು ಐದಾರು ಮನೆಗಳ ಗೋಡೆಗಳು ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯಕೊಪ್ಪಲಿನಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯೊಳಗೆ ಸೇರಿದ ನೀರನ್ನು ಹೊರ ಹಾಕಲು ಜನ ಹರಸಾಹಸ ಪಡುತ್ತಿದ್ದರು.

ನೀರು ತುಂಬಿದ ರಸ್ತೆಯಲ್ಲಿ ಜನರ ಓಡಾಟ

ನೀರು ತುಂಬಿದ ರಸ್ತೆಯಲ್ಲಿ ಜನರ ಓಡಾಟ

ರಸ್ತೆಗಳು ಜಲಾವೃತಗೊಂಡ ಪರಿಣಾಮ ಜನರು ನೀರಿನ ರಸ್ತೆಯಲ್ಲಿ ನಡೆದು ತಮ್ಮ ಕೆಲಸ ಕಾರ್ಯಗಳಿಗೆ ತೆರೆಳಬೇಕಾಯಿತು. ಒಟ್ಟಿನಲ್ಲಿ ಈ ಮಳೆ ಖುಷಿತಂದಿರಿಉವುದಕ್ಕಿಮತ ನೋವು ತಂದಿರುವುದೇ ಹೆಚ್ಚು.

ಬೀದಿಪಾಲಾಯಿತು ಕುಟುಂಬ

ಬೀದಿಪಾಲಾಯಿತು ಕುಟುಂಬ

ಕೆ. ಆರ್ ಪೇಟೆ ತಾಲೂಕಿನ ಹರಿಹರಪುರ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಶೇಖರ ಹಾಗೂ ಗೀತ ದಂಪತಿಗಳ ಮನೆ ಗೋಡೆ ಕುಸಿದು ಬಿದ್ದಿದ್ದು, ಕುಟುಂಬ ಬೀದಿಗೆ ಬಿದ್ದಿದೆ.

ಕಟ್ಟಡಗಳು, ಅಂಗಡಿಮುಂಗಟ್ಟುಗಳು ಜಲಾವೃತ

ಕಟ್ಟಡಗಳು, ಅಂಗಡಿಮುಂಗಟ್ಟುಗಳು ಜಲಾವೃತ

ಕಟ್ಟಡಗಳು ಅಂಗಡಿ ಮುಂಗಟ್ಟುಗಳು ಜಲಾಮಯವಾಗಿದ್ದು, ದಿಕ್ಕುತೋಚದೆ ಜನರು ಪರದಾಡುವಂತಾಗಿದೆ. ರಸ್ತೆ ಮತ್ತು ನದಿಯ ವ್ಯತ್ಯಾಸವೇ ಜನರಿಗೆ ಕಾಣುತ್ತಿಲ್ಲ.

ಮನೆಕುಸಿತಕ್ಕೆ ಕಂಗಾಲಾದ ಮಹಿಳೆ

ಮನೆಕುಸಿತಕ್ಕೆ ಕಂಗಾಲಾದ ಮಹಿಳೆ

ಶ್ರೀರಂಗಪಟ್ಟಣ, ಕೆ.ಆರ್ ಪೇಟೆಯಲೆಲಿ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದಿದೆ. ಮನೆಯ ಎಲ್ಲಾ ಉಪಕರಣಗಳು ನಾಶ ಹೊಂದಿವೆ. ಜೀವನಕ್ಕೆ ಸೂರಿಲ್ಲದೆ ಕಂಗಲಾಗಿ ನಿಂತ ಮಹಿಳೆ

ಮನೆಗಳ ಬಳಿಗೂ ನುಗ್ಗಿದ ನೀರು

ಮನೆಗಳ ಬಳಿಗೂ ನುಗ್ಗಿದ ನೀರು

ಮನೆಗಳ ಬಳಿ ನೀರು ನುಗ್ಗಿದ ಪರಿಣಾಮ ಗಾಡಿಗಳು ನೀರಿನಲ್ಲಿ ಮುಳುಗಿ ನಿಂತಿವೆ. ದಾರಿಕಾಣದೆ, ಹರಿದು ಬಂದ ಮಳೆ ನೀರು ಯಾವಾಗ ಕಡಿಮೆಯಾಗುವುದೋ ಎಂದು ಮನೆಜನ ಕಾಯುತ್ತಾ ಕುಳಿತ್ತಿದ್ದಾರೆ.

ಫುಲ್ ಟ್ರಾಫಿಕ್ ಜಾಮ್

ಫುಲ್ ಟ್ರಾಫಿಕ್ ಜಾಮ್

ಬಹಳ ವರ್ಷಗಳ ನಂತರ ಬಂದ ಪ್ರವಾಹವನ್ನು ನೋಡಲು ಜನ ಕುತೂಹಲದಿಂದ ಬಂದ ಪರಿಣಾಮ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಪೊಲೀಸರು ಹೆಣಗಾಡಬೇಕಾಯಿತು. ಬಳಿಕ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+