ಮುಖ್ಯಮಂತ್ರಿಗಳೆ ಸುಳ್ಳು ಹೇಳಿ : ಎಚ್ಡಿಕೆ

ಜೆ ಡಿ ಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಯಡಿಯೂರಪ್ಪಗೆ ಚೀನಾಕ್ಕೆ ಹೋದ ಮೇಲೆ ರಾಜ್ಯದ ಅಭಿವೃದ್ದಿ ಕುರಿತು ಜ್ಞಾನೋದಯವಾಗಿದೆ. ಇವರಿಗೆ ಆಪರೇಷನ್ ಕಮಲಕ್ಕೇ ಸಮಯವಿಲ್ಲ. ನಿತ್ಯ ಆಪರೇಷನ್, ಅಗಾಗ ಚುನಾವಣೆ ನಡೆಯುವುದೆಂದರೆ ಅವರಿಗೆ ಖುಷಿಯೋ ಖುಷಿ. ಇದು ಅನಾಗರಿಕ ಸರಕಾರ ಮತ್ತು ಆಡಳಿತ. ಯಾವ ಪುರುಷಾರ್ಥಕ್ಕೆ ನೀವು ಮೂವತ್ತು ವರ್ಷ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದು ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.
ಯಡಿಯೂರಪ್ಪ ಅವರಿಗೆ ವಿದೇಶಿ ವಿವಿಯೊಂದು ಗೌರವ ಡಾಕ್ಟರೇಟ್ ನೀಡಿದೆ. ಜತೆಗೆ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಮೂರೂ ತಿಂಗಳಿಗೊಮ್ಮೆ ವಿದೇಶ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರು ಕಾಯಂ ಆಗಿ ವಿದೇಶದಲ್ಲೇ ನೆಲೆಗೊಂಡರೂ ರಾಜ್ಯಕ್ಕೆ ನಯಾಪೈಸೆ ಬಂಡವಾಳವನ್ನು ಆಕರ್ಷಣೆ ಮಾಡುವುದಿಲ್ಲ. ಬೇಕಿದ್ರೆ ನಾನು ಸವಾಲು ಹಾಕುತ್ತೇನೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications