ಬಳ್ಳಾರಿಯ ಕೊಟ್ಟೂರಿನಲ್ಲಿ ಸಾಲ ಬಾಧೆಗೆ ಗ್ರಾಪಂ ಸದಸ್ಯ ಆತ್ಮಹತ್ಯೆ

ಕೊಟ್ಟೂರು, ಮೇ 26 : ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣಕ್ಕೆ ಸಮೀಪದ ಚಿರಬಿ ಗ್ರಾಮಪಂಚಾಯಿತಿ ಸದಸ್ಯರಾದ ಮೂವತ್ಮೂರು ವರ್ಷದ ಚಾಪಿ ಸಿದ್ದಪ್ಪ ಎಂಬುವವರು ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಸಿದ್ದಪ್ಪ ಕೃಷಿಕರಾಗಿದ್ದು, ಎಂಟು ಎಕರೆ ಜಮೀನು ಹೊಂದಿದ್ದರು.

ಜಮೀನಿನಲ್ಲಿ ಆರು ಕೊಳೆಬಾವಿಗಳನ್ನು ಕೊರೆಸಿದ್ದರೂ ನೀರು ಸಿಕ್ಕಿರಲಿಲ್ಲ. ಆ ಕಾರಣಕ್ಕೆ ವೀಳ್ಯದೆಲೆ ಬೆಳೆ ನಷ್ಟವಾಗಿತ್ತು. ವಿಪರೀತ ಸಾಲ ಮಾಡಿಕೊಂಡಿದ್ದರು. ಬ್ಯಾಂಕ್ ನಲ್ಲಿ ಹನ್ನೊಂದು ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸುವಂತೆ ಈಚೆಗಷ್ಟೇ ಬ್ಯಾಂಕ್ ನಿಂದ ನೋಟಿಸ್ ಕೂಡ ಬಂದಿತ್ತು.

GP member commits suicide in Kottur

ಸಾಲ ಬಾಧೆಯಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಮೃತ ಚಾಪಿ ಸಿದ್ದಪ್ಪನವರಿಗೆ ಪತ್ನ್ನಿ, ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ಇನ್ನು ಘಟನೆ ನಡೆದ ಸ್ಥಳಕ್ಕೆ ತಹಶೀಲ್ದಾರ್ ಎಲ್ ಕೃಷ್ಣಮೂರ್ತಿ, ವೈದ್ಯಾಧಿಕಾರಿ ಪೃಥ್ವಿ, ಸಬ್ ಇನ್ ಸ್ಪೆಕ್ಟರ್ ಪುಲ್ಲಯ್ಯ ರಾಥೋಡ್ ಭೇಟಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+