• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

|

ನವದೆಹಲಿ, ಆಗಸ್ಟ್ 28 : ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಕಬ್ಬು ಬೆಳೆಯುವ ರೈತರಿಗೆ ಸಬ್ಸಿಡಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಕಬ್ಬು ಬೆಳೆಗಾರರಿಗೆ ಸಬ್ಸಿಡಿ ನೀಡಲು 6268 ಕೋಟಿ ರೂ.ಗಳನ್ನು ಖರ್ಚು ಮಾಡಲು ಅನುಮೋದನೆ ನೀಡಲಾಗಿದೆ.

ಪ್ರಧಾನಿ ಹೇಳಿದಂತೆ ಕೋರ್ಸ್ ಮಾಡಿದ್ರೂ ಸಾಲ ತೀರಿಸಲು ಕಿಡ್ನಿ ಮಾರಾಟ

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕಬ್ಬು ಬೆಳೆಯುವ ರಾಜ್ಯಗಳ ರೈತರಿಗೆ ಇದರಿಂದಾಗಿ ಸಿಹಿಸುದ್ದಿ ನೀಡಿದಂತಾಗಿದೆ. ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಸಚಿವ ಸಂಪುಟ ಸಮಿತಿಯು (ಸಿಸಿಇಎ) ಸಹ ಇದಕ್ಕೆ ಸಮ್ಮಿತಿ ನೀಡಿದೆ.

ಬಂಪರ್ ಬೆಲೆಯ ನಿರೀಕ್ಷೆಯಲ್ಲಿ ಚಿತ್ರದುರ್ಗದ ಈರುಳ್ಳಿ

ಸಕ್ಕರೆ ಕಬ್ಬಿನ ರಫ್ತಿಗಾಗಿ ಬೆಳೆಗಾರರಿಗೆ ಸಬ್ಸಿಡಿ ನೀಡಲಾಗುತ್ತದೆ. ಪ್ರತಿ ಮೆಟ್ರಿಕ್ ಟನ್‌ಗೆ 10,448 ರೂ. ಸಬ್ಸಿಡಿ ದೊರೆಯಲಿದ್ದು, ಇದು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾವಣೆಯಾಗಲಿದೆ.

ಹರಿದು ಬಂದ ತುಂಗಭದ್ರೆ ನೀರಿನಲ್ಲಿ ಕೊಚ್ಚಿಹೋದ ಭತ್ತ

ಸಕ್ಕೆರೆ ಕಾರ್ಖನೆಗಳು ರೈತರಿಂದ ಖರೀದಿ ಮಾಡುವ ಕಬ್ಬಿಗೆ ಕನಿಷ್ಠ ದರವನ್ನು 2019-20ನೇ ಸಾಲಿನಲ್ಲಿ ಯಥಾಸ್ಥಿತಿಯಲ್ಲಿ ಮುಂದುವರೆಸಲು ಸಹ ಒಪ್ಪಿಗೆ ಕೊಡಲಾಗಿದೆ. ಅಕ್ಟೋಬರ್‌ನಿಂದ ಆರಂಭವಾಗಲಿರುವ ಮಾರುಕಟ್ಟೆ ವರ್ಷಕ್ಕೆ ಪ್ರತಿ ಕ್ವಿಂಟಾಲ್ ಕಬ್ಬಿನ ಎಫ್‌ಆರ್‌ಪಿ ದರವನ್ನು 275ಕ್ಕೆ ನಿಗದಿ ಮಾಡಲಾಗಿದೆ.

ಕೃಷಿ ವೆಚ್ಚ ಮತ್ತು ದರ (ಸಿಎಸಿಪಿ) ಆಯೋಗದ ಶಿಫಾರಸಿ ಅನ್ವಯ ದರವನ್ನು ನಿಗದಿ ಮಾಡಲಾಗಿದೆ. "ಎಫ್‌ಆರ್‌ಪಿ ದರದ ಪರಿಣಾಮ ರೈತರಿಗೆ ಆದಾಯದ ಖಾತರಿ ಸಿಗಲಿದೆ. ಎಫ್‌ಆರ್‌ಪಿಗಿಂತ ಕಡಿಮೆ ದರಕ್ಕೆ ಕಾರ್ಖನೆಗಳು ಕಬ್ಬು ಖರೀದಿ ಮಾಡುವಂತಿಲ್ಲ" ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

English summary
Cabinet Committee on Economic Affairs (CCEA) approved the sugar export policy for clearing surplus stocks. Sugar cane farmers will get subsidy by this move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X