ಮಹದಾಯಿ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಗೋವಾ, ತಕರಾರು ಅಂತ್ಯ

ಪಣಜಿ, ಆಗಸ್ಟ್‌ 14: ಮಹದಾಯಿ ವಿವಾದದಲ್ಲಿ ಕರ್ನಾಟಕದ ಎದುರಾಳಿಯಾಗಿದ್ದ ಗೋವಾ ರಾಜ್ಯ ಸಹ ಇಂದು ಪ್ರಕಟವಾಗಿರುವ ಮಹದಾಯಿ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದೆ.

ತೀರ್ಪಿನ ಬಗ್ಗೆ ಟ್ವೀಟ್ ಮಾಡಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು, ನ್ಯಾಯಾಧಿಕರಣದ ತೀರ್ಪು ಸಂತಸ ತಂದಿದೆ ಎಂದಿದ್ದಾರೆ.

122 ಟಿಎಂಸಿ ಅಡಿ ನೀರಿಗೆ ಬೇಡಿಕೆ ಇಟ್ಟಿದ್ದ ಗೋವಾಕ್ಕೆ ನ್ಯಾಯಾಧಿಕರಣವು 24 ಟಿಎಂಸಿ ಅಡಿ ನೀರು ನೀಡಿದೆ. 6.70 ಟಿಎಂಸಿ ನೀರು ಕೇಳಿದ್ದ ಮಹರಾಷ್ಟ್ರಾಕ್ಕೆ 1.30 ಟಿಎಂಸಿ ಅಡಿ ನೀರು ನೀಡಿದೆ.

Goa CM Manohar Parrikar welcomes Mahadayi verdict

ತೀರ್ಪಿನ ಬಗ್ಗೆ ಗೋವಾ ಸಿಎಂ ಮಾಡಿರುವ ಟ್ವೀಟ್‌ನಲ್ಲಿ, ತೀರ್ಪಿನಿಂದಾಗಿ ಗೋವಾಕ್ಕೆ ನ್ಯಾಯ ದೊರೆತಿದೆ ಎಂದಿದ್ದಾರೆ. ಅಲ್ಲದೆ ಮಹದಾಯಿ ವಿವಾದ ಕುರಿತು ಕಾನೂನು ಹೋರಾಟ ಮಾಡಿದ ಕಾನೂನು ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಗೋವಾ ಸರ್ಕಾರವು ತೀರ್ಪಿನ ವಿರುದ್ಧ ಸುಪ್ರಿಂ ಕೋರ್ಟ್ ಮೆಟ್ಟಿಲೇರುತ್ತದೆ ಎನ್ನಲಾಗಿತ್ತು. ಆದರೆ ಈಗ ಮುಖ್ಯಮಂತ್ರಿಗಳು ತೀರ್ಪಿನಿಂದ ತಮಗೆ ಸಂತಸವಾಗಿರುವುದಾಗಿ ಹೇಳಿದ್ದು, ಗೋವಾ ಸರ್ಕಾರವು ಮೇಲ್ಮನವಿ ಸಲ್ಲಿಸುವುದಿಲ್ಲ ಎನಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+