ಗೋಬ್ಯಾಕ್ ಟು ಇಟಲಿ: ಅಮೇಥಿಯಲ್ಲಿ ರಾಹುಲ್ ವಿರುದ್ಧ ರೈತರ ಭಾರೀ ಪ್ರತಿಭಟನೆ

ಅಮೇಥಿ, ಜ 24: ಸಹೋದರಿ ಪ್ರಿಯಾಂಕ ಗಾಂಧಿಯನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ, ವಿರೋಧಿಗಳಿಗೆ ಬಿಸಿಮುಟ್ಟಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತಮ್ಮ ಸ್ವಕ್ಷೇತ್ರ ಅಮೇಥಿಯಲ್ಲಿ ರೈತರಿಂದ ಪ್ರತಿಭಟನೆಯ ಕಾವು ಎದುರಿಸಬೇಕಾಗಿ ಬಂದಿದೆ.

ಹೊಸ ಉದ್ಯೋಗ ಸೃಷ್ಟಿ ಮತ್ತು ನಿರುದ್ಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ದ ಕಿಡಿಕಾರುತ್ತಿರುವ ರಾಹುಲ್ ಗಾಂಧಿ ಈಗ ಉದ್ಯೋಗದ ವಿಚಾರದಲ್ಲೇ ರೈತರಿಂದ ಮುಜುಗರ ಎದುರಿಸಿದ್ದಾರೆ. ರೈತರು ' ಇಟೆಲಿ ಕೋ ವಾಪಸ್ ಜಾವೋ (ಗೋ ಬ್ಯಾಕ್ ಟು ಇಟೆಲಿ) ಎಂದು ರಾಹುಲ್ ವಿರುದ್ದ ಘೋಷಣೆ ಕೂಗಿದ್ದಾರೆ.

ಬುಧವಾರ (ಜ 23) ಅಮೇಥಿಯ ಗೌರೀಗಂಜ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಒಂದೋ ನಾವು ರಾಜೀವ್ ಗಾಂಧಿ ಫೌಂಡೇಶನ್ ಗೆ ನೀಡಿದ ಜಮೀನನ್ನು ವಾಪಸ್ ಕೊಡಿ, ಇಲ್ಲಾಂದರೆ ಕೊಟ್ಟ ಮಾತಿನಂತೆ ಉದ್ಯೋಗ ಒದಗಿಸಿ ಎಂದು ಪ್ರತಿಭಟನೆ ನಡೆಸಿದ್ದಾರೆ.

Go back to Italy: Farmers protest as Rahul Gandhi visits Amethi

ಪಕ್ಷದ ಪರವಾಗಿ ಅಮೇಥಿಗೆ ಪ್ರಚಾರಕ್ಕೆ ಬಂದಿದ್ದ ರಾಹುಲ್ ವಿರುದ್ದ ಪ್ರತಿಭಟನೆ ನಡೆಸಿದ ರೈತರು, ಕೊಟ್ಟ ಮಾತಿನಂತೆ ನಡೆದುಕೊಳ್ಳಿ,, ಇಲ್ಲಾಂದರೆ ಇಟೆಲಿಗೆ ವಾಪಸ್ ಹೋಗಿ ಎಂದು ಘೋಷಣೆಯನ್ನು ಕೂಗಿದ್ದಾರೆ.

ಗೌರೀಗಂಜ್ ನ ಸಾಮ್ರಾಟ್ ಸೈಕಲ್ ಫ್ಯಾಕ್ಟರಿಯ ಬಳಿ ಧರಣಿ ಕೂತಿದ್ದ ರೈತರು, 'ರಾಹುಲ್ ವಿರುದ್ದ ನಮಗೆ ಸಿಟ್ಟಿದೆ. ಗಾಂಧಿ ಕುಟುಂಬ ನಮ್ಮ ಜಮೀನನ್ನು ಕಬಳಿಸಿದೆ, ಅವರು ಇಲ್ಲಿಯ ಸಂಸದರಾಗಲು ಯೋಗ್ಯರಲ್ಲ' ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಜೀವ್ ಗಾಂಧಿ ಫೌಂಡೇಶನ್ ಮೂಲಕ ರಾಜೀವ್ ಗಾಂಧಿ ಕುಟುಂಬ ರೈತರ ಜಮೀನನ್ನು ಕಬಳಿಸಿದೆ ಎಂದು ಬಿಜೆಪಿಯ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಹುಲ್ ವಿರುದ್ದ ಕಿಡಿಕಾರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+