ಲಾಕ್ ಡೌನ್; ತೋಟದ ಕೆಲಸಕ್ಕೆ ಕೈಹಾಕಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಕೋಲಾರ, ಏಪ್ರಿಲ್ 18: ಲಾಕ್ ಡೌನ್ ನಿಂದಾಗಿ ಎಲ್ಲಾ ಕೆಲಸಗಳಿಗೂ ಬ್ರೇಕ್ ಬಿದ್ದಿದೆ. ಆದರೆ ಈ ಸಮಯದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಊರಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ರಮೇಶ್ ಕುಮಾರ್ ಅವರು ಕೋಲಾರದಲ್ಲಿನ ತಮ್ಮ ತೋಟದಲ್ಲಿ ಕೆಲಸ ಮಾಡುವ ಮೂಲಕ ಲಾಕ್ ಡೌನ್ ಕಾಲ ಕಳೆಯುತ್ತಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿರುವ ತಮ್ಮ ಮಾವಿನ ತೋಟದಲ್ಲಿ ಸಸಿಗಳಿಗೆ ನೀರು ಹಾಯಿಸಲು ವ್ಯವಸ್ಥೆ ನಡೆಸುತ್ತಿದ್ದಾರೆ. ಇದಕ್ಕೆ ತಾವೇ ಹೆಗಲ ಮೇಲೆ ಪೈಪ್ ಗಳನ್ನು ಹೊತ್ತುಕೊಂಡು ಸಾಗಿದ್ದಾರೆ.

ಈ ಸಮಯದಲ್ಲಿ ಕೂಲಿ ಕೆಲಸದವರೂ ಸಿಗಲಿಲ್ಲವಾದ ಕಾರಣ ತಮ್ಮ ಕಾರು ಚಾಲಕ ಬಂಗಾರು, ಆಪ್ತ ಸಹಾಯಕ ಶ್ರೀನಿವಾಸ್ ಜೊತೆಗೂಡಿ ತೋಟದ ಕೆಲಸದಲ್ಲಿ ಕೆಲಸ ಮಾಡುತ್ತಿದ್ದಾರೆ. ರಮೇಶ್ ಕುಮಾರ್ ಅವರು ತಮ್ಮ ತೋಟಕ್ಕೆ ಹನಿ ನೀರಾವರಿಗೆ ಪೈಪ್ ಅಳವಡಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications