ಅನ್ನದಾತರ ಮೇಲೆಯೇ ಎಫ್‌ಐಆರ್ ಹಾಕಿದ ಸರ್ಕಾರ

ರಾಜ್ಯ ರೈತ ಸಂಘ, ಹಸಿರು ಸೇನೆ, ಕೃಷ್ಣಾ ರೈತ ಹಿತರಕ್ಷಣಾ ಸಮಿತಿಯ ಐನೂರಕ್ಕೂ ಹೆಚ್ಚು ರೈತರು, ಸುರಪುರದ ಹಸನಾಪೂರ್ ಕ್ರಾಸ್‌ನಲ್ಲಿ ಹಾಗೂ ದೇವಾಪೂರ್ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯ ರೈತ ಸಂಘದ ಮಲ್ಲಿಕಾರ್ಜುನ್ ಸತ್ಯಂಪೇಟ್, ಕೃಷ್ಣ ರಥ ಹಿತರಕ್ಷಣಾ ಸಮಿತಿಯ ಚಂದ್ರಶೇಖರ್ ಮಾಗನೂರ್ ಹಾಗೂ ಸಚಿವ ರಾಜೂಗೌಡರ ಸಹೋದರ ಬಬ್ಲೂಗೌಡ ನೇತೃತ್ವದಲ್ಲಿ ಸುಮಾರು ಮೂರು ಗಂಟೆಗಳ ಕಾಲ ರಸ್ತೆತಡೆ ನಡೆಸಲಾಗಿತ್ತು. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡು, ಪ್ರಯಾಣಿಕರು ಪರದಾಡುವಂತಾಗಿತ್ತು.
ರೈತರ ಹೆಸರ‍್ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ಇದೀಗ ಅದೇ ರೈತರ ವಿರುದ್ಧವೇ ಕತ್ತಿ ಝಳಪಿಸುತ್ತಿದೆ. ಪ್ರತಿಭಟನೆ ವ್ಯಕ್ತಪಡಿಸಿದ್ದಕ್ಕೆ ಸುಮಾರು 450 ರೈತರ ಮೇಲೆ ಕೇಸ್ ಜಡಿಯಲಾಗಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದು, ಕೃಷ್ಣ ರೈತ ಹಿತರಕ್ಷಣಾ ಸಮಿತಿ, ಸುರಪುರ ಶಾಖೆಯ 200 ರೈತರು ಹಾಗೂ ರಾಜ್ಯ ರೈತ ಸಂಘದ 250 ರೈತರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.












Click it and Unblock the Notifications