'ಸಾಲ ಮನ್ನ ವಿಷ್ಯದಲ್ಲಿ ಹುಡುಗಾಟವಾಡಿದ್ರೆ ಸರ್ಕಾರ ಉಳಿಯಲ್ಲ'
ಬೆಂಗಳೂರು, ಮೇ 24: ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಎಚ್. ಡಿ. ಕುಮಾರಸ್ವಾಮಿ ಅವರು ಮಾತು ತಪ್ಪದೇ ರೈತರ ಸಾಲ ಮನ್ನಾ ಮಾಡಬೇಕು, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿವೆ.
ರಾಜ್ಯದ ಎಲ್ಲಾ ರೈತ ವರ್ಗ ಜೆಡಿಎಸ್ ಪಕ್ಷಕ್ಕೆ ಮತದಾನ ಬಹುಮತ ನೀಡದೇ ಇರಬಹುದು. ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡವರು ರಾಜ್ಯದ ರೈತರ ಹಿತದೃಷ್ಟಿಯಿಂದ ಸಾಲ ಮನ್ನಾಕ್ಕೆ ಎಲ್ಲ ಸಹಕಾರ ನೀಡುತ್ತಾರೆ. ಎಲ್ಲರ ಸಹಕಾರ ಪಡೆದು ರೈತರ ಸಾಲ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜೊತೆ ಕೈಜೋಡಿಸಿ ಮಾತು ತಪ್ಪಿದಾಗ, ರಾಜ್ಯದ ಜನತೆ ಏನು ಪಾಠ ಕಲಿಸಿದ್ದಾರೆ. ಈಗ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಈಗ ಉಲ್ಟಾ ಹೊಡೆದರೆ, ಮಾತು ತಪ್ಪಿದ ಕುಮಾರಸ್ವಾಮಿ ಅವರಿಗೆ ತಕ್ಕ ಪಾಠ ಕಲಿಸುವುದು ರೈತರಿಗೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.

ಸಾಲ ಮನ್ನಾ ಸೇರಿದಂತೆ ಉಭಯ ಪಕ್ಷಗಳ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ರೈತರು, ನಾಡಿನ ಹಿತದೃಷ್ಟಿಗೆ ಧಕ್ಕೆ ತರುವಂಥ ನಿರ್ಣಯ ಎಂದಿಗೂ ತೆಗೆದುಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.












Click it and Unblock the Notifications