ಮಹಾರಾಷ್ಟ್ರದಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಮುಂಬೈ, ಜೂನ್ 22 : ಮಹಾರಾಷ್ಟ್ರದಲ್ಲಿ ಮತ್ತೆ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನೌಕಾಸೇನೆಯ ಭೂಸ್ವಾಧೀನಕ್ಕೆ ಆಕ್ರೋಶ ವ್ಯಕ್ತಪಡಿಸಿ ರೈತರು ಮುಂಬೈನ ಥಾಣೆ-ಬದ್ಲಾಪುರ ಹೆದ್ದಾರಿಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ನೌಕಾಪಡೆ ಸುಮಾರು 17 ಗ್ರಾಮಗಳ ರೈತರ ನೂರಾರು ಎಕರೆ ಕೃಷಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿ ನೂರಾರು ರೈತರು ಹೆದ್ದಾರಿ ತಡೆ ನಡೆಸಿದ್ದಾರೆ. ಈ ವೇಳೆ ಕೆಲ ಆಕ್ರೋಶಿತ ಕೆಲ ರೈತರು ಹೆದ್ದಾರಿಯಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿದರು. ಈ ಘಟನೆಯಲ್ಲಿ ಕೆಲ ಪೊಲೀಸರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಈ ಹಿನ್ನೆಯಲ್ಲಿ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗಲಭೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
#Visuals from Thane-Badlapur highway where farmers protest turned violent, farmers say their land is being acquired by MoD. #Maharashtra pic.twitter.com/X5TgogeoMU
— ANI (@ANI_news) June 22, 2017
ಇನ್ನು ರೈತರ ಗಲಭೆ ನಿಯಂತ್ರಣಕ್ಕಾಗಿ ತುರ್ತು ಪ್ರಹಾರ ದಳ ಹಾಗೂ ಕೇಂದ್ರೀಯ ಪಡೆಗಳಿಗೆ ಬುಲಾವ್ ನೀಡಲಾಗಿದ್ದು, ಶೀಘ್ರದಲ್ಲೇ ತುರ್ತು ಪ್ರಹಾರ ದಳ ಹಾಗೂ ಕೇಂದ್ರೀಯ ಪಡೆಗಳು ರಕ್ಷಣೆ ನಿಯೋಜನೆಯಾಗಲಿವೆ ಎಂದು ತಿಳಿದುಬಂದಿದೆ.












Click it and Unblock the Notifications