ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ, 15000 ಅನ್ನದಾತರು ಭಾಗಿ

ನವದೆಹಲಿ, ಸೆಪ್ಟೆಂಬರ್ 21: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ಆರಂಭವಾಗಿದ್ದು ಸುಮಾರು 15000 ರೈತರು ಇದರಲ್ಲಿ ಭಾಗಿಯಾಗಿದ್ದಾರೆ.

ಭಾರತ್ ಕಿಸಾನ್ ಯೂನಿಯನ್(ಬಿಕೆಯು) ನ ಬ್ಯಾನರ್ ಗಳನ್ನು ಹಿಡಿದು ಶನಿವಾರ ಬೆಳಿಗ್ಗೆ ದೆಹಲಿಗೆ ರೈತರ ಬೃಹತ್ ಸಮೂಹವೇ ಆಗಮಿಸಿದ್ದು, ರಾಜಧಾನಿಯಾದ್ಯಂತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

ಪಶ್ಚಿಮ ಉತ್ತರ ಪ್ರದೇಶದ ಸಹರಾನ್ಪುರ ಎಂಬಲ್ಲಿಂದ ಸೆಪ್ಟೆಂಬರ್ 17 ರಂದು ಪ್ರತಿಭಟನೆ ಆರಭವಾಗಿದ್ದು, ಇಂದು ದೆಹಲಿಯಲ್ಲಿ ರೈತರೆಲ್ಲ ಸೇರುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲಿದ್ದಾರೆ.

Farmers protest in New Delhi: Heavy Security deployed

ಕಬ್ಬಿನ ಬೆಳೆಗೆ ಪಾವತಿಸಬೇಕಾದ ಬಾಕಿ, ಬೇಷರತ್ ಸಾಲಮನ್ನಾ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದ ಗಂಗಾ ನದಿಯ ಉಪನದಿಗಳನ್ನು ಸ್ವಚ್ಛಗೊಳಿಸಿ, ರೈತರಿಗೆ ಕೃಷಿಗೆ ನೀರು ದೊರೆಯುವಂತೆ ಮಾಡುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆಯುತ್ತಿದೆ.

ಶುಕ್ರವಾರ ನೋಯ್ಡಾದಲ್ಲಿ ಕೃಷಿ ಇಲಾಖೆ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಉಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+