ತುಳುನಾಡಿನ ದಿರಿಸಿನಲ್ಲಿ ಕ್ಯಾಟ್ ವಾಕ್ ಮಾಡಿದ ಮುಡಿಪು ಗ್ರಾಮದ ರೈತರು!
ಮಂಗಳೂರು, ಮಾರ್ಚ್ 15: ಶೀರ್ಷಿಕೆ ನೋಡಿ ರೈತರೇಕೆ ಕೃಷಿ ಕೆಲಸ ಮಾಡುವುದು ಬಿಟ್ಟು, ಕ್ಯಾಟ್ ವಾಕ್ ಮಾಡಿದರು ಎಂದು ಆಶ್ಚರ್ಯವಾಗಬಹುದು. ಆದರೆ ಅವರು ಹಾಗೆ ಮಾಡೆಲ್ ಗಳ ರೀತಿ ಪೋಸ್ ಕೊಡಲು ಕಾರಣವಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಮಿಫ್ಟ್ ಕಾಲೇಜಿನ ಸಹಯೋಗದೊಂದಿಗೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಕೃಷಿಕರ ಫ್ಯಾಶನ್ ಶೋ ಜರುಗಿತು. ಈ ಹಿನ್ನೆಲೆಯಲ್ಲಿ ಮುಡಿಪು ಗ್ರಾಮದ 20 ಜನ ರೈತರು ವೃತ್ತಿಪರ ಮಾಡೆಲ್ ಗಳಂತೆ ತುಳು ಸಂಪ್ರದಾಯದ ಉಡುಗೆ-ತೊಡುಗೆಗಳೊಂದಿಗೆ ಕ್ಯಾಟ್ ವಾಕ್ ಮಾಡಿ ಜನ ಮನ್ನಣೆ ಗಳಿಸಿದರು.
ಅಷ್ಟೇ ಅಲ್ಲ, ಮಿಫ್ಟ್ ವಿದ್ಯಾರ್ಥಿಗಳೇ ತಯಾರಿಸಿದ 50 ಕ್ಕೂ ಮಿಕ್ಕಿದ ಗಾರ್ಮೆಂಟ್ ಗಳನ್ನು ಧರಿಸಿ ಫ್ಯಾಶನ್ ಶೋ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ತುಳು ಕೃಷಿ ಸಂಪ್ರದಾಯವನ್ನು ರಾಂಪ್ ಮೇಲೆ ತರುವ ಮೂಲಕ ಆಧುನಿಕ ಜನತೆಗೆ ಭಾರತದ ಕೃಷಿ ಜೀವನದ ಪರಿಚಯ ಮಾಡಿಕೊಡಲು ಸಾಧ್ಯವಾಗುತ್ತದೆ ಮತ್ತು ಕೃಷಿ ಜೀವನ ಉದಾತ್ತತೆಗೆ ಜನ ಗೌರವ ಸಿಗುವಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧಕರಾದ ಅಡ್ಯಾರು ಪ್ರದೀಪ್ ಕುಮಾರ್ ಶೆಟ್ಟಿ, ಬಿ.ಎಸ್. ಗಾಂಭೀರ, ಸತ್ಯನಾರಾಯಣ ಶೆಟ್ಟಿ ಬೆಳ್ಳಾರೆ, ದೇವಪ್ಪ ಶೇಖ, ಪೀಳ್ಯಡ್ಕ, ಶಿವ ಎಲ್. ಪೂಜಾರಿ ದೆಂಗಾರು ಇವರುಗಳನ್ನು ಸನ್ಮಾನಿಸಲಾಯಿತು.












Click it and Unblock the Notifications