ಐಟಿ ಅಧಿಕಾರಿಗಳಿಗೆ ಘೆರಾವ್: ರೈತರು, ಕಮಿಷನ್ ಏಜೆಂಟ್ ಸಂಘಟನೆಗಳ ನಿರ್ಧಾರ

ಲೂಧಿಯಾನ, ಡಿಸೆಂಬರ್ 25: ಸೂಕ್ತ ದಾಖಲಾತಿಗಳಿಲ್ಲದೆ ಪರಿಶೀಲನೆ ಅಥವಾ ದಾಳಿಗೆ ಬರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಜತೆಗೂಡಿ ಘೆರಾವ್ ಹಾಕಲು ಪಂಜಾಬ್‌ನ ರೈತರು ಮತ್ತು ಕಮಿಷನ್ ಏಜೆಂಟ್‌ಗಳು ನಿರ್ಧರಿಸಿದ್ದಾರೆ.

ದೆಹಲಿಯ ಸಿಂಘು ಗಡಿಯಲ್ಲಿ ಕಮಿಷನ್ ಏಜೆಂಟ್‌ಗಳ (ಅಹ್ರಿತಿಯಾಸ್) ಐವರು ಸದಸ್ಯರ ನಿಯೋಗ ಮತ್ತು ಪಂಜಾಬ್‌ನ 32 ರೈತ ಒಕ್ಕೂಟಗಳ ಪ್ರತಿಧಿಗಳನ್ನು ಒಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಐಟಿ ಅಧಿಕಾರಿಗಳು ಯಾವುದೇ ರೀತಿಯ ಕಾರ್ಯಾಚರಣೆಗೆ ಬಂದರೂ ಆ ಸ್ಥಳಕ್ಕೆ ತೆರಳಿ ಅಹ್ರಿತಿಯಾಸ್ ಜತೆಗೂಡಲು ರೈತ ಒಕ್ಕೂಟಗಳು ನಿರ್ಧರಿಸಿವೆ. ಐಟಿ ಅಧಿಕಾರಿಗಳು ಮತ್ತು ಅವರ ಮನೆಗಳಿಗೆ ಕೂಡ ಘೆರಾವ್ ಹಾಕಲಾಗುವುದು ಎಂದು ಪಂಜಾಬ್ ಕಿಸಾನ್ ಒಕ್ಕೂಟದ ಅಧ್ಯಕ್ಷ ರುಲ್ಡು ಸಿಂಗ್ ಮನ್ಸಾ ತಮ್ಮ ನಿರ್ಧಾರವನ್ನು ಖಚಿತಪಡಿಸಿದ್ದಾರೆ.

Farmers-Arhtiyas Decide To Gherao IT Officials During Raids

ದೆಹಲಿ ರೈತರ ಪ್ರತಿಭಟನೆ ನಡೆದಿರುವ ಬೆನ್ನಲ್ಲೇ ಇತ್ತೀಚೆಗೆ ಪಂಜಾಬ್‌ನಲ್ಲಿ ಏಳು ಮಂದಿ ಅಹ್ರಿತಿಯಾಸ್ ಮನೆಗಳ ಮೇಲೆ ಆದಾಯ ತೆರಿಗೆ ದಾಳಿಗಳು ನಡೆದಿವೆ. ಈ ಸಂದರ್ಭದಲ್ಲಿ ಮನ್ಸಾದಲ್ಲಿನ ರೈತರು ಆದಾಯ ತೆರಿಗೆ ಇಲಾಖೆ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದರು.

'ನಾವು ರೈತರಿಗೆ ನೀಡಿರುವ ಬೆಂಬಲವನ್ನು ಮುಂದುವರಿಸಲಿದ್ದೇವೆ. ಅವರು ಮತ್ತು ನಮ್ಮ ನಡುವೆ ಸುದೀರ್ಘ ಸಮಯದ ನಂಟಿದೆ. ಕೃಷಿ ಕಾಯ್ದೆಗಳಿಂದ ರೈತರಿಗೆ ತೊಂದರೆಯಾಗುವಂತೆ ನಮ್ಮ ವ್ಯವಹಾರಗಳಿಗೂ ತೊಂದರೆ ಉಂಟುಮಾಡಲಿದೆ. ಕಮಿಷನ್ ಏಜೆಂಟ್ ಆಗಿ ನಮಗೆ ರೈತರೇ ಆದಾಯದ ಮೂಲ. ಸರ್ಕಾರವು ನಮ್ಮ ಜಾಗದಲ್ಲಿ ದೊಡ್ಡ ಮಧ್ಯವರ್ತಿಗಳನ್ನು ತರಲು ಬಯಸಿದೆ' ಎಂದು ಖನ್ನಾ ಅಹ್ರಿತಿಯಾಸ್ ಸಂಸ್ಥೆಯ ಅಧ್ಯಕ್ಷ ಎಚ್‌ಎಸ್ ರೋಶಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+