ಮೆರವಣಿಗೆ ವೇಳೆ ರೈತ ಆತ್ಮಹತ್ಯೆ: ಕೇಜ್ರಿವಾಲ್ ಗೆ ಛೀಮಾರಿ
ನವದೆಹಲಿ, ಏ. 22: ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆ ವಿರೋಧಿಸಿ ಬುಧವಾರ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆಯೇ ರೈತ ಗಜೇಂದ್ರ ಸಿಂಗ್ ಮರಕ್ಕೆ ನೇಣು ಹಾಕಿಕೊಂಡು ಆತ್ಮತ್ಯೆ ಮಾಡಿಕೊಂಡಿದ್ದಾರೆ.
ದೆಹಲಿಯ ಜಂತರ್-ಮಂತರ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದ ವೇಳೆ ಗಜೇಂದ್ರ ಸಿಂಗ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಎಚ್ಚೆತ್ತುಕೊಂಡ ಆಪ್ ಕಾರ್ಯಕರ್ತರು ಆ ರೈತನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.[ಭೂ ಸ್ವಾಧೀನ ಕಾಯ್ದೆ : ತಿರುಗೇಟು ಕೊಡಲು ಬಿಜೆಪಿ ಸಿದ್ಧ]

ಅತ್ತ ರೈತ ಆತ್ಮಹತ್ಯೆಗೆ ಶರಣಾಗಿದ್ದರೂ ಇತ್ತ ಆಮ್ ಆದ್ಮಿ ನಾಯಕರ ಭಾಷಣ ಜೋರಾಗೆ ನಡೆದಿತ್ತು. ಇದರಿಂದ ಕೆರಳಿದ ನಾಗರೀಕರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಅತ್ತ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಸಹ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಾರ್ಟಿಯನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿವೆ. ದೆಹಲಿ ಪೊಲೀಸರ ಮೇಲೂ ಆರೋಪಗಳ ಸುರಿಮಳೆ ಶುರುವಾಗಿದ್ದು ಪ್ರಕರಣ ಯಾವ ಹಂತಕ್ಕೆ ತಲುಪಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.
#KillerKejriwal blames police when Gajendra's body is hanging 30 meters away! Cheapest neta:(
https://t.co/mFn9N6skuE pic.twitter.com/TpKWIRXItH
— Kiran Kumar S (@KiranKS) April 22, 2015 This is poleboy @ArvindKejriwal He can agitate like a rowdy but not climb a tree? @ndtv @Timesnow #KillerKejriwal pic.twitter.com/tW6Ck4gubT
— MediaCrooks (@mediacrooks) April 22, 2015 Not a single week passes by without #KillerKejriwal reminding us what @Swamy39 told long ago..
#AAPKilledFarmer pic.twitter.com/CTEYfH50vw
— Kiran Kumar S (@KiranKS) April 22, 2015 When Gajendra Singh was trying to commit Suicide @ArvindKejriwal and Presstitude Media were Watching #KillerKejriwal pic.twitter.com/LP5xSGLBhm
— NaMoChaiParty (@NamoChaiParty) April 22, 2015 











Click it and Unblock the Notifications