ವಿಜಯಪುರದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ
ಬೆಳೆ ಹಾನಿ, ಸಾಲಬಾಧೆಯಿಂದಾಗಿ ವಿಜಯಪುರದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಡೆತ್ ನೋಟಿನಲ್ಲಿ ಬರೆದಿಟ್ಟಿದ್ದಾರೆ.
ವಿಜಯಪುರ, ಏಪ್ರಿಲ್ 11: 'ನನ್ನ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ' ಎಂದು ದೆತ್ ನೋಟ್ ಬರೆದಿಟ್ಟು ಸಂತೋಷ್ ಕುಲಕರ್ಣಿ(43) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಚಟ್ಟರಕಿ ಗ್ರಾಮದಲ್ಲಿ ಇಂದು (ಏಪ್ರಿಲ್ 11) ನಡೆದಿದೆ.
ಕಬ್ಬು ಮತ್ತು ದಾಳಿಂಬೆ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 7 ಲಕ್ಷಕ್ಕಿಂತ ಹೆಚ್ಚು ಸಾಲವನ್ನು ಹೊಂದಿದ್ದರು ಎನ್ನಲಾಗಿದೆ.[ಬೆತ್ತಲೆಯಾಗಿ ಪ್ರತಿಭಟಿಸಿ ತಮಿಳುನಾಡು ರೈತರ ಆಕ್ರೋಶ]

ಇಷ್ಟೇ ಅಲ್ಲದೆ, 5 ಲಕ್ಷ ರೂ. ಕೈಸಾಲವನ್ನೂ ಹೊಂದಿದ್ದ ಇವರು, ಸಾಲ ತೀರಿಸಲಾಗದೆ ಪರಿತಪಿಸುತ್ತಿದ್ದರು. ಇದೇ ಸಮಯಕ್ಕೆ ಬೆಳೆಯೂ ಕೈಕೊಟ್ಟಿದ್ದರಿಂದ ಸಂತೋಷ್ ಮತ್ತಷ್ಟು ಖಿನ್ನರಾಗಿದ್ದರು. ಸರ್ಕಾರವೂ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ ಇವರು, ಡೆತ್ ನೋಟಿನಲ್ಲಿ ಸಹ 'ತಮ್ಮ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ, ಬೇರೆ ಯಾರೂ ಅಲ್ಲ' ಎಂದು ಬರೆದಿಟ್ಟಿದ್ದಾರೆ.[ಸಾಲ ಬಾಧೆಗೆ ಬೇಸತ್ತು ಕೆ.ಆರ್.ಪೇಟೆಯಲ್ಲಿ ನೇಣಿಗೆ ಕೊರಳೊಡ್ಡಿದ ರೈತ]
ಕಗ್ಗಂಟೆನ್ನಿಸಿರುವ ರೈತರ ಆತ್ಮಹತ್ಯೆ ನಿಯಂತ್ರಣದ ಕುರಿತು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕೆಂಬುದನ್ನು ಈ ಪ್ರಕರಣ ಮತ್ತೊಮ್ಮೆ ನೆನಪಿಸಿದೆ.












Click it and Unblock the Notifications