ರಾಮನಗರದಲ್ಲಿ ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ರಾಮನಗರ, ಏಪ್ರಿಲ್ 12: ಸಾಲ ಬಾಧೆ ತಾಳಲಾರದೆ ರೈತ ರಾಮಚಂದ್ರಯ್ಯ(59) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ತಾಲ್ಲೂಕಿನ ಲಕ್ಕಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
15 ವರ್ಷದಿಂದ ಮಾವಿನ ಹಣ್ಣು ಬೆಳೆ ಬೆಳೆಯಲು ರೈತ ರಾಮಚಂದ್ರಯ್ಯ ಸಾಲ ಮಾಡಿಕೊಂಡಿದ್ದ. ಕೊರೊನಾ ವೈರಸ್ ತಡೆಗಟ್ಟಲು ರಾಜ್ಯ ಮತ್ತು ದೇಶದಲ್ಲಿ ಲಾಕ್ ಡೌನ್ ಆದೇಶವಿರುವುದರಿಂದ, ರೈತರ ಬೆಳೆ ಸಾಗಾಟ ನಿಲ್ಲಿಸಲಾಗಿತ್ತು.
ಲಾಕ್ ಡೌನ್ ಎಫೆಕ್ಟ್ ನಿಂದ ಮಾವಿನ ಹಣ್ಣಿನ ಧಾರಣೆ ಪಾತಳಕ್ಕೆ ಇಳಿದಿದೆ. ಜ್ಯೂಸ್ ಅಂಗಡಿಗಳು ಬಾಗಿಲು ಮುಚ್ಚಿರುವುದರಿಂದ ಮಾವಿನ ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ಅದೇ ರೀತಿ ಜ್ಯೂಸ್ ಕಂಪನಿಗಳು ಖರೀದಿಸುತ್ತಲ್ಲ. ಇದರಿಂದ ರೈತರಿಗೆ ದೊಡ್ಡ ಮಟ್ಟದಲ್ಲಿ ಅನಾನುಕೂಲವಾಗಿದೆ.

ಮಾವಿನ ಹಣ್ಣಿಗೆ ಮಾಡಿರುವ ಸಾಲ ತೀರಿಸಲಾಗದೇ ಜಮೀನಿನಲ್ಲೇ ವಿಷ ಸೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications