ಪ್ರವಾಹದಲ್ಲಿ ಬೆಳೆ ಕಳೆದುಕೊಂಡಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ

ಬೆಳಗಾವಿ, ಆಗಸ್ಟ್ 14: ಪ್ರವಾಹದಲ್ಲಿ ತನ್ನ ಮನೆ ಹಾಗೂ ತಾನು ಬೆಳೆದಿದ್ದ ಬೆಳೆಯನ್ನು ಕಳೆದುಕೊಂಡಿದ್ದರಿಂದ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮಾಗನೂರು ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಣ ಲಕ್ಕಪ್ಪ ತ್ಯಾಪಿ (34) ಆತ್ಮಹತ್ಯೆ ಮಾಡಿಕೊಂಡ ರೈತ. ರಾಮದುರ್ಗ ತಾಲೂಕಿನ ಮಾಗನೂರು ಗ್ರಾಮದಲ್ಲಿ, ಬೇರೆಯವರ ಸುಮಾರು 4 ಎಕರೆ ಜಮೀನನ್ನು ಉಳುಮೆ ಮಾಡಿ ಬೆಳೆ ಬೆಳೆದಿದ್ದರು. ಆದರೆ ಮಲಪ್ರಭಾ ನದಿಯ ಪ್ರವಾಹದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಯೆಲ್ಲಾ ಕೊಚ್ಚಿಕೊಂಡು ಹೋಯಿತು. ಮನೆಯೂ ಜಲಾವೃತವಾಗಿ ನೆಲಸಮಯವಾಯಿತು. ಮನೆ, ಬೆಳೆ ಎರಡನ್ನೂ ಕಳೆದುಕೊಂಡಿದ್ದರಿಂದ ಮನನೊಂದ ಲಕ್ಷ್ಮಣ ಆತ್ಮಹತ್ಯೆಗೆ ಶರಣಾಗಿದ್ದಾರೆ.

Farmer Commits Suicide After Loss Of Crop By Flood In Ramadurga

ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+