ನೈಸ್ ಎಲ್ಲ ಪಕ್ಷಗಳ ಪಾಪದ ಕೂಸು, ದೊರೈಸ್ವಾಮಿ
ಬೆಂಗಳೂರು,
ಜ. 19 : ಬಿಎಂಐಸಿ ಯೋಜನೆಯು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಪಾಪದ ಕೂಸು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೈಸ್ವಾಮಿ ಆರೋಪಿಸಿದರು. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಈ ಯೋಜನೆಯಲ್ಲಿ ರಾಜಕೀಯ ಪಕ್ಷಗಳ ಮೋಸದಾಟವಲ್ಲದೇ ಬೇರೇನೂ ಇಲ್ಲ. ಮೂರು ಪಕ್ಷಗಳ ನಿಲುವಿನಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ. ಇದರ ಹಿಂದೆ ರಾಜ್ಯವನ್ನಾಳಿದ ಎಚ್ ಡಿ ದೇವೇಗೌಡ, ಜೆ ಎಚ್ ಪಟೇಲ್, ಎಸ್ ಎಂ ಕೃಷ್ಣ, ಧರ್ಮಸಿಂಗ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅರ ಸರಕಾರಗಳು ಕೈವಾಡ ಇದೆ. ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ, ಡಿ ಕೆ ಶಿವಕುಮಾರ್ ಕೂಡ ಪಾಲುದಾರರಾಗಿದ್ದಾರೆ. ಈ ಎಲ್ಲದರ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. id='are-slot-1' class='oiad oi-axt oiadv'> id='top-searched-articles'>ರೈತಪರ
ಕಾಳಜಿ ಇಲ್ಲ. ಮಾಜಿ ಪ್ರಧಾನಿ ದೇವೇಗೌಡರ ನಿಲುವು ರೈತ ಪರವಾಗಿಲ್ಲ. ಹೆಚ್ಚುವರಿ ಭೂಮಿಯ ಬಗ್ಗೆ ಮಾತ್ರ ಅವರ ತಕರಾರಿದೆ. ಇಡೀ ಯೋಜನೆ ರೈತ ವಿರೋಧಿಯಾಗಿದ್ದು, ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ರೈತರ ಜಮೀನಿನನ್ನು ವಾಪಸ್ ನೀಡಬೇಕು ಎಂದು ದೊರೈಸ್ವಾಮಿ ಒತ್ತಾಯಿಸಿದರು.











Click it and Unblock the Notifications