ಬೀದರ್ ದಕ್ಷಿಣದಿಂದ ವಿಧಾನಸಭಾ ಕಣಕ್ಕೆ ನೈಸ್ ಖೇಣಿ

nice-ashok-kheny-to-contest-from-bidar-south
ಬೀದರ್, ಜುಲೈ 26: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ನಂದಿ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಮೂಲಕ ಗುರುತಿಸಿಕೊಂಡಿರುವ ಸಂಸ್ಥೆಯ ಸಂಸ್ಥಾಪಕ ಅಶೋಕ್ ಖೇಣಿ ಅವರು ಪ್ರಕಟಿಸಿದ್ದಾರೆ.

ತಮ್ಮ ಹುಟ್ಟೂರಾದ ರಂಜೋಳಾ ಗ್ರಾಮದಲ್ಲಿ ಹೈದರಾಬಾದ್- ಕರ್ನಾಟಕ ರಕ್ಷಣಾ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಖೇಣಿ ಈ ಘೋಷಣೆ ಮಾಡಿದ್ದಾರೆ.

ಈ ಹಿಂದೆ 2008ರಲ್ಲಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಸಂಬಂಧಿ ಸಂಜಯ್ ಖೇಣಿಯನ್ನು ನಿಲ್ಲಿಸಿದ್ದರು. ಆದರೆ ತೀವ್ರ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಖಾಶೆಂಪೂರ ಅಲ್ಪ ಅಂತರದಿಂದ ಗೆದ್ದಿದ್ದರು.

ಆದರೆ ಅವರು ಪ್ರತಿನಿಧಿಸಲಿರುವ ಪಕ್ಷ ಈ ಹಿಂದಿನಂತೆ ಬಿಜೆಪಿ ಅಲ್ಲ; ಬದಲಿಗೆ ತಮ್ಮದೇ ಪಕ್ಷವಾದ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಅವರು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಒಟ್ಟು 100 ಕ್ಷೇತ್ರಗಳಲ್ಲಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಅವರು ಹೇಳಿದ್ದಾರೆ.

ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ನೈಸ್ ಖೇಣಿ ಹಿಂದುಳಿದ ಪ್ರದೇಶಗಳಿಂದ ಮಾತ್ರ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿಯೂ ಅವರು ತಿಳಿಸಿದರು.

ನನ್ನದು ದೇನಾ ಬ್ಯಾಂಕ್; ಲೇನಾ ಬ್ಯಾಂಕ್ ಅಲ್ಲ - ತಾವು ಬಿಜೆಪಿ ಜತೆ ಕೈಜೋಡಿಸುವ ಕುರಿತಾದ ವದಂತಿಗಳನ್ನು ಅಲ್ಲಗಳೆದ ನೈಸ್ ಖೇಣಿ, ಬಿಜೆಪಿ ಜತೆ ತಮಗೆ ಯಾವುದೇ ವಿಶೇಷ ಸಂಬಂಧವಿಲ್ಲ. ಎಲ್ಲ ಪಕ್ಷಗಳನ್ನು ವಿರೋಧಿಸಿದಂತೆ ಅದನ್ನೂ ವಿರೋಧಿಸುವುದಾಗಿ ಅವರು ಸ್ಪಷ್ಟಪಡಿಸಿದರು.

ಬಿಜೆಪಿ ಈ ಹಿಂದೆ ರಾಜ್ಯ ಸಭೆ ಸೀಟ್ ಕೊಡುವುದಾಗಿ ಹೇಳಿತು. ಆದರೆ ನಾನು ಅದನ್ನು ತಿರಸ್ಕರಿಸಿದೆ. ನನಗೆ ಚುನಾವಣೆಯಲ್ಲಿ ನಿಂತು ದುಡ್ಡು ಮಾಡಬೇಕು ಎಂಬುದಿಲ್ಲ. ಬದಲಿಗೆ ಜನರಿಗಾಗಿ ದುಡಿಯಬೇಕು ಎಂಬುದು ತನ್ನ ಇರಾದೆಯಾಗಿದೆ ಎಂದರು.

ಇಸ್ರೇಲಿ ತಂತ್ರಜ್ಞಾನ : ಬೀದರ್- ಹೈದರಾಬಾದ್ ಚತುಷ್ಪಥ ಹೆದ್ದಾರಿ ನಿರ್ಮಿಸುವ ಪ್ರಸ್ತಾವನೆಯನ್ನು ಪುನರುಚ್ಚರಿಸಿದ ಖೇಣಿ, ಬೀದರ್ ಜಿಲ್ಲೆಯ ರೈತರ ಬದುಕನ್ನು ಹಸನು ಮಾಡಲು ತಾನು ಬದ್ಧವಿರುವುದಾಗಿ ಹೇಳಿದರು. ಇಸ್ರೇಲಿ ತಂತ್ರಜ್ಞಾನ ಬಳಸಿ 5,000 ಎಕರೆ ಪ್ರದೇಶದಲ್ಲಿ ಗುತ್ತಿಗೆ ಕೃಷಿ ಕೈಗೊಳ್ಳುವುದಾಗಿಯೂ ಅವರು ಹೇಳಿದರು. ತಮ್ಮ ಜಮೀನನ್ನು ಇಂತಹ ಕೃಷಿಗಾಗಿ ನೀಡುವ ರೈತರಿಗೆ ತಲಾ 5000 ಮಾಸಿಕ ಸಂಬಳ ಮತ್ತು ಕೃಷಿ ಆದಾಯದಲ್ಲಿ ಶೇ. 50ರಷ್ಟು ಲಾಭವನ್ನು ಹಂಚಿಕೊಳ್ಳುವುದಾಗಿ ನೈಸ್ ಖೇಣಿ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+