ಅಧಿಕಾರವಿಲ್ಲದೆ ಕುಮಾರಸ್ವಾಮಿ ಮನೋರೋಗಿ:ರೈತಸಂಘ

ಅವರೊಬ್ಬ ರೆಸಾರ್ಟ್ ಮುಖ್ಯಮಂತ್ರಿ: ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುಟ್ಟಣ್ಣಯ್ಯ, ಅಧಿಕಾರದ ಲಾಲಸೆಗೊಳಗಾಗಿದ್ದ ಕುಮಾರಸ್ವಾಮಿಯು ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಗದ್ದುಗೆಗೆ ಏರಿದರು. ಆದರೆ, ರೈತಸಂಘ ಆಕಸ್ಮಿಕವಾಗಿ ಹುಟ್ಟಿದ್ದಲ್ಲ. ರೈತಸಂಘಕ್ಕಾಗಿ ನೂರಾರು ರೈತರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಟ ನಡೆಸಿದ್ದಾರೆ. ಜನತಾಪಕ್ಷ ಅಧಿಕಾರಕ್ಕೆ ಬರಲು ರೈತಸಂಘ ಕಾರಣ ಎಂಬುದನ್ನು ಕುಮಾರಸ್ವಾಮಿ ಮರೆಯಬಾರದು ಎಂದರು
ರೈತಸಂಘದವರು ರೈತರಿಂದ ಟನ್ ಕಬ್ಬಿಗೆ 5-10 ರೂ. ಪಡೆಯುತ್ತಾರೆಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ರೈತಸಂಘದ ಚಳವಳಿಗಾಗಿ ನಾವು ಹಣ ಸಂಗ್ರಹಿಸಿದ್ದು, ಅದರಿಂದ ಬರ್ತಿರೋ ಬಡ್ಡಿ ಹಣದಲ್ಲಿ ಚಳವಳಿ ನಡೆಸುತ್ತಿದ್ದೇವೆ. ದೇವೇಗೌಡ ಮತ್ತು ಕುಮಾರಸ್ವಾಮಿಗೆ ರಾಜಕಾರಣ ಮಾಡಲು ದುಡ್ಡೆಲ್ಲಿಂದ ಬರುತ್ತೆ ಅನ್ನೋದನ್ನು ಅವರು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.
ಕಪ್ಪು ಹಣದ ವಿಚಾರವಾಗಿ ಕುಮಾರಸ್ವಾಮಿ ರೈತಸಂಘದ ನಾಯಕರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಸ್ಥಳವನ್ನ ಅವರೇ ನಿಗದಿಮಾಡಲಿ. ಚರ್ಚೆಗೆ ನಾವು ಬರಲು ಸಿದ್ಧರಿದ್ದೇವೆ ಎಂದ ಪುಟ್ಟಣ್ಣಯ್ಯ, ಕುಮಾರಸ್ವಾಮಿ ಲೋಕಸಭಾ ಸದಸ್ಯರಾಗಿದ್ದು ರಾಜ್ಯದ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಮಾತನಾಡುವುದನ್ನು ಬಿಟ್ಟು ಮಂಡ್ಯಕ್ಕೆ ಬಂದು ರೈತಸಂಘದ ಬಗ್ಗೆ ಟೀಕೆ ಮಾಡ್ತಾರೆ. ಅವರ ಪಕ್ಷದವರೇ ಮೂಡಾ ಅಕ್ರಮ ನಿವೇಶನ ಹಂಚಿಕೆ ಹಗರಣದಲ್ಲಿ ಸಿಕ್ಕಿಬಿದ್ದಿದ್ದರೂ ಅವರಿಗೆ ಬುದ್ಧಿ ಹೇಳದೆ ರೈತನಾಯಕರಿಗೆ ಬುದ್ಧಿ ಹೇಳುತ್ತಿದ್ದಾರೆ. ಇವರಿಂದ ಬುದ್ಧಿ ಕಲಿಯುವ ಅಗತ್ಯ ನಮಗಿಲ್ಲ ಎಂದರು.












Click it and Unblock the Notifications