ಹೊಸ ವರ್ಷಕ್ಕೆ ಶುಭ ಸುದ್ದಿ: ತರಕಾರಿ ಬೆಲೆ ಇಳಿಕೆ

Vegetable prices fall in 2012
ಬೆಂಗಳೂರು, ಡಿ.27: ವರ್ಷಾಂತ್ಯದ ಸಮಯದಲ್ಲಿ ಬೆಂಗಳೂರಿಗರಿಗೆ ಶುಭ ಸುದ್ದಿ ಸಿಕ್ಕಿದೆ. ಜನವರಿ 2012ರಲ್ಲಿ ತರಕಾರಿ, ಕಾಯಿಪಲ್ಲೆಗಳ ಬೆಲೆ ಇಳಿಕೆಯಾಗಲಿದ್ದು, ಗ್ರಾಹಕರ ಹೊರೆ ಕಡಿಮೆಯಾಗಲಿದೆ ಎಂದು ಹಾಪ್ ಕಾಮ್ಸ್ ಪ್ರಕಟಿಸಿದೆ.

ಕಳೆದ ವಾರ ಕೆಜಿ ಟೊಮ್ಯಾಟೋಗೆ 30 ರೂ ಕೊಟ್ಟಿದ್ದವರು ಮುಂದಿನ ವಾರದ ನಂತರ 10 ರೂ ಪ್ರತಿ ಕೆಜಿಯಂತೆ ಟೊಮ್ಯಾಟೋ ಖರೀದಿಸಬಹುದು ಎಂದು ಹ್ಯಾಪ್ ಕಾಮ್ ನಿರ್ದೇಶಕ ಷಣ್ಮುಖಪ್ಪ ಹೇಳಿದ್ದಾರೆ.

ತರಕಾರಿ ಬೆಲೆ, ಆಹಾರ ದುಬ್ಬರ ಏರಿಳಿತದಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ತರಕಾರಿ ಮಾರುಕಟ್ಟೆಗೆ ಪ್ರಧಾನ ಕೇಂದ್ರವಾಗಿ ಬೆಂಗಳೂರು ಗುರುತಿಸಿಕೊಂಡಿದ್ದು, ಕರ್ನಾಟಕ ಅಲ್ಲದೆ ತಮಿಳುನಾಡು, ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದ ತರಕಾರಿ ಹರಿದು ಬರುತ್ತಿದೆ.

ಬೇಡಿಕೆಗಿಂತ ಲಭ್ಯವಿರುವ ತರಕಾರಿ ದಾಸ್ತಾನು ಹೆಚ್ಚಳ ಕಾಣುತ್ತಿರುವುದರಿಂದ ಬೆಲೆ ಇಳಿಕೆ ನಿರೀಕ್ಷಿಸಬಹುದು.

ಋತುಮಾನಕ್ಕೆ ತಕ್ಕಂತೆ ತರಕಾರಿ ಹಾಗೂ ಹಣ್ಣುಗಳು ಮಾರುಕಟ್ಟೆಯಲ್ಲಿ ಸಿಗುವಂತಾಗಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ತರಕಾರಿ ಬೆಲೆ ಗಗನಕ್ಕೇರಿತ್ತು. ಆದರೆ, ಈ ಬಾರಿ ಈರುಳ್ಳಿ ಹಾಗೂ ಟೊಮ್ಯಾಟೋ ಬೆಲೆ ಮೊದಲಿಗೆ ಇಳಿಕೆಯಾಗಲಿದೆ. ನಂತರ ಉಳಿದ ತರಕಾರಿಗಳ ಬೆಲೆ ಕೂಡಾ ಗ್ರಾಹಕಸ್ನೇಹಿಯಾಗಲಿದೆ ಎಂದು ಹಾಪ್ ಕಾಮ್ ನಿರ್ದೇಶಕ ಷಣ್ಮುಗಪ್ಪ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+