ಸಕ್ಕರೆ ಕಾರ್ಖಾನೆಗಳ ಮಾಲೀಕರು ಬಾಕಿ ಕೊಡೋಕೆ ಒಪ್ತಾರಾ? ಸಭೆ ಇಂದು

Recommended Video

      ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ ನೀಡುವವರೆಗೆ ಬಿ ಎಸ್ ವೈ ಹೋರಾಟ ನಿಲ್ಲುವುದಿಲ್ಲವಂತೆ! | Oneindia Kannada

      ಬೆಂಗಳೂರು, ನವೆಂಬರ್ 22: ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಂದು(ನವೆಂಬರ್ 22)ರಂದು ಸಭೆ ನಡೆಸಲಿದ್ದಾರೆ.

      ರಾಜ್ಯ ಸರ್ಕಾರದ ಪಾಲಿಗೆ ಅಗ್ನಿ ಪರೀಕ್ಷೆಯಾಗಿರುವ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಸಂಬಂಧ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಲಿದ್ದು, ಈ ಸಭೆಗೆ ಕಾರ್ಖಾನೆ ಮಾಲೀಕರು ಗೈರಾದರೆ ಅಥವಾ ರೈತರ ಬೇಡಿಕೆಗಳಿಗೆ ಅಲಕ್ಷ್ಯ ತೋರಿದರೆ ರೈತರು ಮತ್ತೆ ಹೋರಾಟ ಮಾಡುವ ಸಾಧ್ಯತೆ ಇದೆ.

      Crucial meeting between CM and sugar factory owners today

      ಗುರುವಾರ ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಕಾರ್ಖಾನೆ ಮಾಲೀಕರೊಂದಿಗಿನ ಸಭೆಯಲ್ಲಿ ಕಾರ್ಖಾನೆ ಮಾಲೀಕರು ಖುದ್ದು ಆಗಮಿಸುವ ಬಗ್ಗೆ ಸ್ಪಷ್ಟತೆ ಇಲ್ಲ, ಹೀಗಾಗಿ ಸಭೆ ಕುತೂಹಲ ಮೂಡಿಸಿದೆ.

      ಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಡೆಸಿದ ಮ್ಯಾರಥಾನ್ ಸಭೆಯಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು. ಸೂಚನೆ ಇದ್ದರೂ ಮಾಲೀಕರು ಗೈರಾಗುವ ಮೂಲಕ ನಿರ್ಲಕ್ಷ್ಯ ತೋರಿದ್ದರು.

      ಹಣ ಪಾವತಿ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗದೆ ಸಭೆ ಅಪೂರ್ಣವಾಗಿತ್ತು. ಕಾರ್ಖಾನೆಗಳ ಪ್ರತಿನಿಧಿಗಳು ಕಳೆದ ಅವಧಿಯಲ್ಲಿ ನ್ಯಾಯೋಚಿತ, ಪ್ರತಿಫಲಯುಕ್ತ ದರದಂತೆ ಖರೀದಿಸಿ ಬಾಕಿ ಉಳಿಸಿಕೊಂಡಿರುವ 36.68 ಕೋಟಿ ರೂ. ಬಾಕಿ ಹಣವನ್ನು 15 ದಿನಗಳ ಒಳಗಾಗಿ ಪಾವತಿಸಲು ಒಪ್ಪಿಕೊಂಡಿದ್ದಾರೆ.

      ಆದರೆ ಎಫ್‌ಆರ್‌ಪಿಗಿಂತ ಹೆಚ್ಚು ಮೊತ್ತಕ್ಕೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಖರೀದಿ ಮಾಡಿರುವ ಸಂಬಂಧ ಬಾಕಿ ಇರುವ 450 ಕೋಟಿ ರೂ ಬಾಕಿ ಹಣ ಪಾವತಿಸಲು ಸಮ್ಮತಿ ಸೂಚಿಸಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+