ಮಳೆಗೆ ಬೆಳೆ ಹಾನಿ: ಹೈನುಗಾರಿಕೆ ಮೇಲೆ ಮೇವಿನ ಬೆಲೆ ಏರಿಕೆ ಪರಿಣಾಮ
ಬೆಂಗಳೂರು, ಆಕ್ಟೋಬರ್ 03: ಮುಂಗಾರಿನ ಆರಂಭದಲ್ಲಿ ತಡವಾಗಿ ಬಿದ್ದ ಮಳೆ ಹಾಗೂ ನಂತರದ ಅತೀವೃಷ್ಠಿಯಿಂದಾಗಿ ಉಂಟಾದ ಬೆಳೆ ಹಾನಿಯು ಹೈನುಗಾರಿಕೆ ಮೇಲೆ ತನ್ನದೇ ಆದ ಪ್ರಭಾವ ಬೀರಿದೆ. ಹೈನುಗಾರಿಕೆಯ ಮೂಲವಾದ ಜಾನುವಾರುಗಳಿಗಾಗಿ ಖರೀದಿಸುವ ಮೇವಿನ ಬೆಲೆ ಗರಿಷ್ಠ ಮಟ್ಟದಲ್ಲಿ ಏರಿಕೆ ಆಗಿದೆ.
ಮಳೆ ಬಾರದ್ದರಿಂದ ಹಾಗೂ ಅತೀ ಮಳೆಯಿಂದ ಬೆಳೆ ಹಾನಿಯ ಕಾರಣಕ್ಕೆ ಹೈನುಗಾರಿಕೆಗೆ ಅಗತ್ಯವಾದ ಮೇವಿನ ಬೆಲೆ ಏರಿಕೆಯು ಕೃಷಿ ಕುಟುಂಬಗಳ ಮೇಲೆ ಭಾರಿ ಆರ್ಥಿಕ ಹೊರೆ ಉಂಟು ಮಾಡಿದೆ. ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಮೇವಿನ ಬೆಲೆ ಹೆಚ್ಚಳವು ಇದೇ ವರ್ಷ ಆಗಸ್ಟ್‌ನಲ್ಲಿ ಶೇ.25.54 ರಷ್ಟು ಇತ್ತು. ಈ ಪ್ರಮಾಣವನ್ನು ಕಳೆದ 9 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿರುವುದು ಖಚಿತವಾಗಿದೆ. ಸಗಟು ಬೆಲೆಯು ಸಾಮಾನ್ಯವಾಗಿದ್ದರು, ಚಿಲ್ಲರೆ ಗ್ರಾಹಕನ ಲೆಕ್ಕದಲ್ಲಿ ಕೆಲವು ತಿಂಗಳುಗಳಿಂದ ಹಂತ ಹಂತವಾಗಿ ಬೆಲೆ ಏರಿಕೆ ಕಂಡಿದೆ.

ಈ ರೀತಿ ಮೇವಿನ ಬೆಲೆಯಲ್ಲಿ ಹೆಚ್ಚಳವಾದಾಗ ಅದರ ನೇರ ಪರಿಣಾಮ ಹಾಲಿನ ದರದ ಮೇಲೆ ಉಂಟಾಗುತ್ತದೆ. ಕಳೆದ ಆಗಸ್ಟ್‌ನಲ್ಲಿ ಅಮುಲ್ ಚಿಲ್ಲರೆ ಹಾಲಿನ ಬೆಲೆಯನ್ನು ಹೆಚ್ಚಿಸಿದ ನಂತರ, ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಜಾನುವಾರುಗಳ ಆಹಾರದ ವೆಚ್ಚವನ್ನು ಹಾಲಿನ ಬೆಲೆ ಹೆಚ್ಚಳಕ್ಕೆ ಕಾರಣವೆಂದು ಉಲ್ಲೇಖಿಸಿತ್ತು.
15ರಾಜ್ಯಗಳಲ್ಲಿ ಮುದ್ದೆ ಚರ್ಮ ರೋಗ:ಸಾವು
ಹಂತ ಹಂತವಾಗಿ ಹೆಚ್ಚುತ್ತಿರುವ ಮೇವಿನ ಬೆಲೆಯು ಹೈನುಗಾರಿಕೆ ನಂಬಿಕೊಂಡ ಕೃಷಿಕರಿಗೆ ಆರ್ಥಿಕವಾಗಿ ತೊಂದರೆ ನೀಡುತ್ತಿದೆ. ನಿರಂತರವಾಗಿ ಸುರಿದ ಭಾರಿ ಮುಂಗಾರು ಮಳೆಯಿಂದ ಬೆಳೆ ಹಾನಿಯಾಗಿದೆ. ಸಾಲದೆಂಬಂತೆ ಸುಮಾರು 15 ರಾಜ್ಯಗಳಲ್ಲಿ ಜಾನುವಾರುಗಳಿಗೆ ಹರಡಿರುವ ಮುದ್ದೆ ಚರ್ಮ ರೋಗವು ಸುಮಾರು ಒಂದು ಲಕ್ಷ ಜಾನುವಾರುಗಳ ಸಾವಿಗೆ ಕಾರಣವಾಗಿದೆ.

ಇನ್ನು ಲಭ್ಯವಿರುದ ಭತ್ತ ಹಾಗೂ ಗೋಧಿ ಹುಲ್ಲನ್ನು ಸಂಪೂರ್ಣವಾಗಿ ಉತ್ತಮ ಗುಣಮಟ್ಟದ ಮೇವಾಗಿ ಪರಿವರ್ತಿಸುವುದು ಅಸಾಧ್ಯವಾಗಿದೆ. ದೇಶದ ವಿವಿಧ ಕಡೆಗಳಲ್ಲಿ ರೈತರು ಹುಲ್ಲುಗಾವಲುಗಳನ್ನು ಸುಡುತ್ತಾರೆ. ಇದು ಮೇವಿನ ಕೊರತೆಗೆ ಕಾರಣ ಎನ್ನಲಾಗಿದೆ ಎಂದು ಭಾರತೀಯ ಹುಲ್ಲುಗಾವಲು ಹಾಗೂ ಮೇವು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಅಮರೇಶ್ ಚಂದ್ರ ಅವರು ತಿಳಿಸಿದರು.
ದೇಶದಲ್ಲಿ ಮೇವು ಹೆಚ್ಚಿಸಬೇಕಿದೆ
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕಳೆದ ತಿಂಗಳು ಜಾನುವಾರುಗಳಿಗೆ ಮೇವು ಎಷ್ಟು ಲಭ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಅಧಿಕಾರಿಗಳಿಗೆ ಸೂಚಿಸಿದ್ದರು. ನಂತರ ದೇಶದಲ್ಲಿರುವ ವಿವಿಧ ಬೆಲೆ ಏರಿಕೆ, ಬಿಕ್ಕಟ್ಟುಗಳ ನಡುವೆ ಮೇವಿನ ಕೊರತೆ ಮೊದಲ ಹಂತದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ಬಳಿಕ ಗ್ರೇಟರ್ ನೋಯ್ಡಾದಲ್ಲಿ ವಿಶ್ವ ಡೈರಿ ಶೃಂಗಸಭೆ ಪಾಲ್ಗೊಂಡಿದ್ದ ಅವರು, ಮುಂದಿನ ದಿನಗಳಲ್ಲಿ ಅಗತ್ಯದಷ್ಟು ಮೇವು ಹೇಗೆ ಹೊಂದಲು ಮಾಡಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸಬೇಕು. ಆ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಅವರು ವಿವರಿಸಿದರು.












Click it and Unblock the Notifications