ಮೊದಲ ಬಾರಿಗೆ ಮತ ಎಣಿಕೆಗೆ ಸಿದ್ಧಗೊಂಡ ಬಾಗಲಕೋಟೆ ತೋಟಗಾರಿಕೆ ವಿವಿ

Recommended Video

      ಮೊದಲ ಬಾರಿಗೆ ಮತ ಎಣಿಕೆಗೆ ಸಿದ್ಧಗೊಂಡ ಬಾಗಲಕೋಟೆ ತೋಟಗಾರಿಕೆ ವಿವಿ

      ಬಾಗಲಕೋಟೆ, ಮೇ 14 : ವಿಧಾನಸಭೆ ಚುನಾವಣೆಯ ಮತ ಎಣಿಕೆ ಇದೇ ಮೊದಲ ಬಾರಿಗೆ ಇಲ್ಲಿಯ ನವನಗರದ ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ದಿನಾಂಕ 15 ರಂದು ನಡೆಯಲಿದೆ.

      ಸುಮಾರು 25 ವರ್ಷಗಳ ಕಾಲ ಪ್ರತಿ ವಿಧಾನಸಭೆ, ಲೋಕಸಭೆ ಚುನಾವಣೆಯ ಫಲಿತಾಂಶದ‌ ಮತ ಎಣಿಕೆ ಕಾರ್ಯ ಇಲ್ಲಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ‌ ನಡೆಯುತ್ತಿತ್ತು. ಇದಕ್ಕೂ ಮುಂಚೆ ಮತ ಎಣಿಕೆ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ‌ ನಡೆಯುತ್ತಿತ್ತು.

      ಫಲಿತಾಂಶದ ದಿನದಂದು ಜನಸಂಖ್ಯೆ ಸೇರುವುದು ಪ್ರಮಾಣ ಹೆಚ್ಚಾದಂತೆ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿಗೆ ಸ್ಥಳಾಂತರ ಮಾಡಲಾಯಿತು.

      Counting of votes will be held on December 15 at Bagalkot Horticulture University

      ಈ‌ ಮೊದಲು ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಮತ ಎಣಿಕೆ ದಿನದಂದು ಜಿಲ್ಲೆಯ ಎಲ್ಲ ಕ್ಷೇತ್ರದ ಅಭ್ಯರ್ಥಿಗಳ ಬೆಂಬಲಿಗರು ಇಲ್ಲಿ ಬಂದು ಸೇರುತ್ತಿದ್ದರಿಂದ ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗಿತ್ತು. ಅಲ್ಲದೇ ಇಲ್ಲಿ ಟ್ರಾಫಿಕ್ ದಟ್ಟಣೆ ಜಾಸ್ತಿಯಾಗಿತ್ತು.

      ತೋಟಗಾರಿಕೆ ವಿವಿ ಆವರಣ ದೊಡ್ಡದಾಗಿದೆ‌. ಇಲ್ಲಿ ವಾಹನಗಳನ್ನು ನಿಲ್ಲಿಸಲು ಜನರು ನಿಂತುಕೊಳ್ಳಲು ವಿಶಾಲವಾದ‌ ಜಾಗವಿದೆ. ಪಾರ್ಕಿಂಗ್ ಮತ್ತು ಭದ್ರತೆ ದೃಷ್ಟಿಯಿಂದ ತೋಟಗಾರಿಕೆ ವಿವಿ ಕಟ್ಟಡವನ್ನು ಮತ ಎಣಿಕೆಗೆ ಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಮ್ ಆಯ್ಕೆ ಮಾಡಿಕೊಂಡಿದ್ದಾರೆ.

      Counting of votes will be held on December 15 at Bagalkot Horticulture University

      15 ರಂದು ನಡೆಯುವ ಮತ ಎಣಿಕೆಗೆ ಎಲ್ಲ ಸಿದ್ದತೆಯನ್ನು ಮಾಡಲಾಗಿದ್ದು, ಏಳು ಮತಕ್ಷೇತ್ರದ ಮತಪೆಟ್ಟಿಗೆಯನ್ನು ಮಿಲಿಟರಿ ಪಡೆಯವರಿಂದ ಭದ್ರತೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಮ್ ತಿಳಿಸಿದ್ದಾರೆ.

      ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ನಡೆಯಲಿದ್ದು ಅಭ್ಯರ್ಥಿಗಳು, ಏಜೆಂಟರು, ಸಿಬ್ಬಂದಿ, ಮಾಧ್ಯಮದವರಿಗೆ ಈಗಾಗಲೇ ಪಾಸುಗಳನ್ನು ಮತ ಎಣಿಕೆ‌ ಕೇಂದ್ರಕ್ಕೆ ಬರಲು ನೀಡಲಾಗಿದೆ‌. ಪಾಸ್ ಇದ್ದವರಿಗೆ ಮಾತ್ರ ತೋಟಗಾರಿಕೆ ವಿವಿ ಆವರಣದಲ್ಲಿ ಪ್ರವೇಶ ಸಿಗಲಿದೆ ಎಂದರು.

      ಜಿಲ್ಲೆಯಲ್ಲಿ 14,98,515 ಮತದಾರ ಪೈಕಿ 11,23,141ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

      ಜಿಲ್ಲೆಯಲ್ಲಿ ಒಟ್ಟು ಮತದಾನ ಶೇ.74.95 ಆಗಿದೆ.

      ಶೇಕಡವಾರು ಮತದಾನ

      ಮುಧೋಳ ಶೇ.75.16
      ತೇರದಾಳ ಶೇ.78.46
      ಜಮಖಂಡಿ 74.99
      ಬೀಳಗಿ ಶೇ 79.45
      ಬಾದಾಮಿ ಶೇ.74.65
      ಬಾಗಲಕೋಟೆ ಶೇ.69.36
      ಹುನಗುಂದ ಶೇ.72.87ರಷ್ಟು ಮತದಾನ ನಡೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+