Arecanut Price: ಅಡಿಕೆ ಮತ್ತು ಕೊಬ್ಬರಿ ಬೆಲೆ ಭರ್ಜರಿ ಏರಿಕೆ!
ಅಡಿಕೆ ಮತ್ತು ಕೊಬ್ಬರಿ ಬೆಳೆಗಾರರಿಗೆ 2025ರ ವರ್ಷ ಲಾಭ ತಂದುಕೊಡುವ ಮುನ್ಸೂಚನೆ ಕೊಟ್ಟಿದೆ. ವರ್ಷದ ಆರಂಭದಲ್ಲೇ ಅಡಿಕೆ ಮತ್ತು ಕೊಬ್ಬರಿ ಬೆಲೆಯಲ್ಲಿ ಸತತವಾಗಿ ಏರಿಕೆ ಕಾಣುತ್ತಿದ್ದು ಬೆಳೆಗಾರರು ಖುಷಿಯಾಗಿದ್ದಾರೆ. ಸತತವಾಗಿ ಬೆಲೆ ಕುಸಿತ, ಬೆಳೆ ನಷ್ಟ, ವಿವಿಧ ರೋಗಗಳಿಂದ ಅಡಿಕೆ ಮತ್ತು ತೆಂಗು ಬೆಳೆಗಾರರು ನಷ್ಟದ ಭೀತಿಯಲ್ಲಿದ್ದರು.
ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಂಪರ್ ಬೆಲೆ ಸಿಗುವ ನಿರೀಕ್ಷೆ ಇದೆ. ಶುಕ್ರವಾರ ಕೂಡ ಅಡಿಕೆ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಕ್ವಿಂಟಲ್ಗೆ ಕನಿಷ್ಠ 40,689 ರೂಪಾಯಿ ಇದ್ದರೆ ಗರಿಷ್ಠ 54,900 ರೂಪಾಯಿಗೆ ಮಾರಾಟವಾಗಿದೆ.

ಶಿವಮೊಗ್ಗದಲ್ಲಿ ಗೊರಬಲು ಅಡಿಕೆ ಬೆಲೆ ಕ್ವಿಂಟಾಲ್ಗೆ 22,309 ರೂಪಾಯಿಯಂತೆ ಮಾರಾಟವಾಗಿದೆ. ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 40,689 ರೂಪಾಯಿ ಇದ್ದರೆ ಗರಿಷ್ಠ 54,900 ರೂಪಾಯಿ ಆಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಸಿಪ್ಪೆಗೋಟು | ₹12,000 | ₹12,000 | ₹12,000 |
| 2 | ಕಾರ್ಕಳ | ಹೊಸ ವೆರೈಟಿ | ₹25,000 | ₹43,000 | ₹30,000 |
| 3 | ಕಾರ್ಕಳ | ಹಳೆ ವೆರೈಟಿ | ₹30,000 | ₹49,500 | ₹40,000 |
| 4 | ಬಂಟ್ವಾಳ | ಕೋಕ | ₹25,000 | ₹25,000 | ₹25,000 |
| 5 | ಬಂಟ್ವಾಳ | ಹೊಸ ವೆರೈಟಿ | ₹30,000 | ₹30,000 | ₹30,000 |
| 6 | ಯಲ್ಲಾಪುರ | ಕೆಂಪುಗೋಟು | ₹14,969 | ₹26,919 | ₹23,299 |
| 7 | ಯಲ್ಲಾಪುರ | ಕೋಕ | ₹4,609 | ₹16,899 | ₹14,299 |
| 8 | ಯಲ್ಲಾಪುರ | ಚಾಲಿ | ₹31,809 | ₹40,849 | ₹39,009 |
| 9 | ಯಲ್ಲಾಪುರ | ತಟ್ಟಿಬೆಟ್ಟೆ | ₹28,506 | ₹38,690 | ₹33,699 |
| 11 | ಯಲ್ಲಾಪುರ | ಬಿಳೆ ಗೋಟು | ₹16,899 | ₹30,899 | ₹24,000 |
| 12 | ಯಲ್ಲಾಪುರ | ರಾಶಿ | ₹40,689 | ₹54,900 | ₹46,869 |
| 13 | ಶಿವಮೊಗ್ಗ | ಗೊರಬಲು | ₹22,309 | ₹22,309 | ₹22,309 |
| 14 | ಶಿವಮೊಗ್ಗ | ರಾಶಿ | ₹50,009 | ₹52,809 | ₹52,509 |
| 15 | ಸಿದ್ಧಾಪುರ | ಚಾಲಿ | ₹33,709 | ₹39,339 | ₹36,899 |
| 16 | ಸಿದ್ಧಾಪುರ | ತಟ್ಟಿಬೆಟ್ಟೆ | ₹28,909 | ₹36,119 | ₹32,099 |
| 17 | ಸಿದ್ಧಾಪುರ | ರಾಶಿ | ₹41,099 | ₹47,299 | ₹42,499 |
| 18 | ಸಿರಸಿ | ಚಾಲಿ | ₹32,809 | ₹40,909 | ₹38,101 |
| 19 | ಸಿರಸಿ | ರಾಶಿ | ₹40,099 | ₹46,699 | ₹44,438 |
| 20 | ಸಿರಸಿ | ಕೆಂಪುಗೋಟು | ₹10,869 | ₹25,299 | ₹17,478 |
ಕೊಬ್ಬರಿ ಧಾರಣೆ ಹೇಗಿದೆ?
2024ರಲ್ಲಿ 18,000 ರೂಪಾಯಿಗೆ ಏರಿಕೆಯಾಗಿ ಬೆಳೆಗಾರರಲ್ಲಿ ಭರವಸೆ ಮೂಡಿಸಿದ್ದ ಕೊಬ್ಬರಿ ಬೆಲೆ ಬಳಿಕ ಕುಸಿತ ಕಂಡಿತ್ತು. ಇದೀಗ ಕೊಬ್ಬರಿ ಬೆಲೆ ಸತತವಾಗಿ ಏರಿಕೆ ಕಾಣುತ್ತಿದ್ದು ಸಾರ್ವಕಾಲಿಕ ಗರಿಷ್ಠ ಬೆಲೆ ತಲುಪುವ ನಿರೀಕ್ಷೆ ಮೂಡಿಸಿದೆ.
ಶುಕ್ರವಾರ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್ಗೆ ಕನಿಷ್ಠ 17,000 ರೂಪಾಯಿ ಇದ್ದರೆ ಗರಿಷ್ಠ 19,000 ರೂಪಾಯಿ ಆಗಿತ್ತು. ಅರಸೀಕೆರೆ ಮಾರುಕಟ್ಟೆಯಲ್ಲಿ 16,000 ರೂಪಾಯಿಗೆ ಮಾರಾಟವಾಗಿದೆ. ಕೊಬ್ಬರಿ ಮಾತ್ರವಲ್ಲ ಎಳನೀರು ಮತ್ತು ತೆಂಗಿನಕಾಯಿ ಬೆಲೆ ಕೂಡ ಗಗನಕ್ಕೇರಿದ್ದು, ಕೊಬ್ಬರಿ ಬೆಲೆ ಕ್ವಿಂಟಾಲ್ಗೆ 20,000 ರೂಪಾಯಿ ತಲುಪಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ದಾವಣಗೆರೆ | ಕೊಬ್ಬರಿ | ₹12,027 | ₹12,027 | ₹12,027 |
| 2 | ಅರಸೀಕೆರೆ | ಇತರೆ | ₹9,000 | ₹12,500 | ₹12,500 |
| 3 | ಅರಸೀಕೆರೆ | ಕೊಬ್ಬರಿ | ₹16,000 | ₹16,000 | ₹16,000 |
| 4 | ಅರಸೀಕೆರೆ | ಮಿಲ್ಲಿಂಗ್ | ₹12,000 | ₹12,000 | ₹12,000 |
| 5 | ತಿಪಟೂರು | ಕೊಬ್ಬರಿ | ₹17,100 | ₹19,000 | ₹18,350 |
-
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
Arecanut Price: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ?: ಇಲ್ಲಿದೆ ಮಾರ್ಚ್ 17ರ ದರಪಟ್ಟಿ -
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು










Click it and Unblock the Notifications