• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈರುಳ್ಳಿ ಸಂಗ್ರಹಿಸಿಟ್ಟರೆ ಭಾರಿ ದಂಡ: ವ್ಯಾಪಾರಿಗಳೇ ಎಚ್ಚರ ಎಚ್ಚರ!

|
   ವ್ಯಾಪಾರಿಗಳೇ ಎಚ್ಚರ,ಈರುಳ್ಳಿ ಸಂಗ್ರಹಿಸಿಟ್ಟರೆ ಸಂಕಷ್ಟ ಗ್ಯಾರೆಂಟಿ | Oneindia kannada

   ದೆಹಲಿ, ಡಿಸೆಂಬರ್.03: ಭಾರತದಲ್ಲಿ ಉಳ್ಳವರಿಗೆ ಮಾತ್ರ ಈರುಳ್ಳಿ ಎನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಸು ಇದ್ದೋನೇ ಬಾಸ್ ಅಲ್ಲ, ದೇಶದಲ್ಲೀಗ ಈರುಳ್ಳಿ ಖರೀದಿಸುವವರೇ ಬಾಸ್ ಆಗುತ್ತಿದ್ದಾರೆ. ಏಕಂದರೆ ಈರುಳ್ಳಿ ಬೆಲೆ ಅಷ್ಟೊಂದು ದುಬಾರಿ ಆಗಿ ಬಿಟ್ಟಿದೆ.

   ಈಗ ಈರುಳ್ಳಿಗೆ ಉತ್ತಮ ಬೆಲೆಯಿದೆ. ಇನ್ನು ಸ್ವಲ್ಪದಿನ ಸಂಗ್ರಹಿಸಿಟ್ಟು ಮಾರಾಟ ಮಾಡಿದರೆ ಇನ್ನೂ ಒಳ್ಳೆ ಬೆಲೆ ಸಿಗುತ್ತದೆ. ಹೀಗೆ ಏನಾದರೂ ಯೋಚನೆ ಮಾಡುತ್ತಿದ್ದರೆ, ವ್ಯಾಪಾರಿಗಳೇ ಎಚ್ಚರ ಎಚ್ಚರ, ನೀವು ಸಂಗ್ರಹಿಸಿಟ್ಟ ಈರುಳ್ಳಿಯಿಂದಲೇ ನಿಮಗೆ ಸಂಕಷ್ಟ ಶುರುವಾಗಿ ಬಿಡುತ್ತದೆ.

   ಇವರೇನೂ ಶ್ರೀಮಂತರಲ್ಲ, ಆದರೂ ಕೊರಳಿಗೆ ಈರುಳ್ಳಿ ಮಾಲೆ! ಇವರೇನೂ ಶ್ರೀಮಂತರಲ್ಲ, ಆದರೂ ಕೊರಳಿಗೆ ಈರುಳ್ಳಿ ಮಾಲೆ!

   ಈರುಳ್ಳಿಯಂದ ಅದೆಂಥಾ ಸಂಕಷ್ಟ ಎಂದುಕೊಂಡಿರಾ. ಅಚ್ಚರಿ ಅನಿಸಿದರೂ ಇದು ಸತ್ಯ. ಟನ್ ಗಟ್ಟಲೇ ಈರುಳ್ಳಿಯನ್ನು ಸ್ಟಾಕ್ ಇಟ್ಟುಕೊಳ್ಳುವ ಮುನ್ನ ಸಗಟು ವ್ಯಾಪಾರಿಗಳಷ್ಟೇ ಅಲ್ಲ, ಚಿಲ್ಲರೇ ವ್ಯಾಪಾರಿಗಳೂ ಕೂಡಾ ಒಮ್ಮೆ ಯೋಚನೆ ಮಾಡಲೇಬೇಕು.

   ಶತಕ ಬಾರಿಸಿದ ಈರುಳ್ಳಿ ಬೆಲೆ

   ಶತಕ ಬಾರಿಸಿದ ಈರುಳ್ಳಿ ಬೆಲೆ

   ದೇಶದ ಮಾರುಕಟ್ಟೆಯಲ್ಲಿ ಈಗ ಈರುಳ್ಳಿಗೆ ಡಿಮ್ಯಾಡಪ್ಪೋ ಡಿಮ್ಯಾಂಡು. ಇಲ್ಲಿ ಈರುಳ್ಳಿ ಖರೀದಿಸಬೇಕು ಎಂದರೆ ಜೇಬುಗಟ್ಟಿಯಿರಬೇಕು. ಏಕೆಂದರೆ ಈಗಾಗಲೇ ಅದರ ಬೆಲೆ ಶತಕದ ಗಡಿ ದಾಟಿ ಹೋಗಿದೆ. ಒಂದು ಕೆಜಿಗೆ ಬರೋಬ್ಬರಿ 110 ರೂಪಾಯಿಗೂ ಹೆಚ್ಚು ಬೆಲೆಯಿದೆ.

   ಕಣ್ಣೀರು ತರಿಸಲ್ಲ, ಜೇಬಿಗೆ ಕತ್ತರಿ ಹಾಕುತ್ತೆ ಈರುಳ್ಳಿ

   ಕಣ್ಣೀರು ತರಿಸಲ್ಲ, ಜೇಬಿಗೆ ಕತ್ತರಿ ಹಾಕುತ್ತೆ ಈರುಳ್ಳಿ

   ಈರುಳ್ಳಿ ಸಂಗ್ರಹಿಸಿಟ್ಟು ಹಣ ಗಳಿಸಬೇಕು ಎಂದುಕೊಂಡಿದ್ದ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ. ಸಂಗ್ರಹಿಸಿಡುವ ಈರುಳ್ಳಿಗೆ ಒಂದು ಲಿಮಿಟ್ ಫಿಕ್ಸ್ ಮಾಡಲಾಗಿದೆ. ಅದಕ್ಕಿಂತ ಹೆಚ್ಚು ಈರುಳ್ಳಿ ಸಂಗ್ರಹಿಸಿಟ್ಟರೆ ಅದಕ್ಕೆ ದುಬಾರಿ ದಂಡ ವಿಧಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತೀರ್ಮಾನಿಸಿದೆ.

   25 ಟನ್ ಸಂಗ್ರಹಿಸಿಡಲು ಮಾತ್ರ ಅವಕಾಶ

   25 ಟನ್ ಸಂಗ್ರಹಿಸಿಡಲು ಮಾತ್ರ ಅವಕಾಶ

   ಹೌದು, ಒಳ್ಳೆ ಬೆಲೆ ಸಿಗುತ್ತದೆ ಎಂಬ ಆಸೆಗೆ ಬಿದ್ದು ಈರುಳ್ಳಿಯನ್ನು ಸಂಗ್ರಹಿಸುವಂತಿಲ್ಲ. ಏಕೆಂದರೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಸಗಟು ವ್ಯಾಪಾರಿಗಳು 25 ಟನ್ ಗಿಂತಲೂ ಹೆಚ್ಚು ಈರುಳ್ಳಿಯನ್ನು ಸಂಗ್ರಹಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಇನ್ನು, ಚಿಲ್ಲರೇ ವ್ಯಾಪಾರಿಗಳು 5 ಟನ್ ಗಿಂತಲೂ ಹೆಚ್ಚು ಈರುಳ್ಳಿಯನ್ನು ಸಂಗ್ರಹಿಸುವಂತಿಲ್ಲ ಎಂದು ಹೇಳಿದೆ.

   ಈರುಳ್ಳಿ ಸರಬರಾಜಿನ ಮೇಲೆ ಸರ್ಕಾರದ ಕಣ್ಣು

   ಈರುಳ್ಳಿ ಸರಬರಾಜಿನ ಮೇಲೆ ಸರ್ಕಾರದ ಕಣ್ಣು

   ದೇಶದ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಸರಬರಾಜು ಆಗುತ್ತಿಲ್ಲ. ಎಲ್ಲ ಈರುಳ್ಳಿಯನ್ನು ಮಾರಾಟಗಾರರು ಸಂಗ್ರಹಿಸಿಡುತ್ತಿದ್ದಾರೆ. ಇದರಿಂದ ದಿನೇ ದಿನೆ ಬೆಲೆ ಗಗನಮಖಿಯಾಗಿ ಏರಿಕೆಯಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಪ್ರಮಾಣದ ಈರುಳ್ಳಿ ಬೆಲೆ ಹಾನಿಯಾಗಿದೆ. ಉಳಿದಿರುವ ಈರುಳ್ಳಿಯನ್ನು ಮಾರುಕಟ್ಟೆಗೆ ಸರಬರಾಜು ಮಾಡದೇ ವ್ಯಾಪಾರಿಗಳು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಇದರಿಂದಾಗಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ವ್ಯಾಪಾರಿಗಳು ಸಂಗ್ರಹಿಸಿಡುವ ಈರುಳ್ಳಿಗೆ ಒಂದು ಮಿತಿಯನ್ನು ನಿಗದಿಗೊಳಿಸಲಾಗಿದೆ.

   English summary
   Consumers Affairs Ministry Has Revised Onions Stock Limit With Immediate Effect.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X