ರೈತರಿಗೆ ಸಾಲ ಋಣಮುಕ್ತ ಪತ್ರ ವಿತರಿಸಿದ ಕುಮಾರಸ್ವಾಮಿ

ದೊಡ್ಡಬಳ್ಳಾಪುರ, ಡಿಸೆಂಬರ್ 08: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರ ಸಾಲಮನ್ನಾ ಮಾಡಲಾಗಿದ್ದು, ಇಂದು ಸಿಎಂ ಕುಮಾರಸ್ವಾಮಿ ಅವರು ರೈತರಿಗೆ ಋಣಮುಕ್ತ ಪತ್ರಗಳನ್ನ ವಿತರಿಸಿದರು.

ದೊಡ್ಡಬಳ್ಳಾಪುರ ಮತ್ತು ಸೇಡಂ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಸಾಲಮನ್ನಾ ಜಾರಿಮಾಡಲಾಗಿತ್ತು. ಅದರಂತೆ ಸಿಎಂ ಅವರು ಸಾಲಮನ್ನಾ ಆದ ರೈತರಿಗೆ ಋಣಮುಕ್ತ ಪತ್ರ ವಿತರಿಸಿದರು.

CM Kumaraswamy distribute debt free letter to farmers

ದೊಡ್ಡಬಳ್ಳಾಪುರದ ಭಗತ್‌ಸಿಂಗ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಮಯ ಕೇಳಿದ್ದು ಸಾಲಮನ್ನಾ ಆಗದೇ ಅಲ್ಲ, ವೈಜ್ಞಾನಿಕ ಮಾದರಿಯಲ್ಲಿ ಸಾಲಮನ್ನಾ ಮಾಡಲು ಎಂದು ಹೇಳಿದರು.

ಸಾಲಮನ್ನಾ ಮಾಡಿದ ಪ್ರತಿ ಪೈಸಾ ನೇರವಾಗಿ ರೈತರಿಗೆ ತಲುಪುವಂತೆ ವೈಜ್ಞಾನಿಕವಾಗಿ ಯೋಜನೆ ತಯಾರಿಸಲು ಕಾಲಾವಕಾಶ ಕೇಳಿದ್ದೆ, ಈಗ ಒಬ್ಬ ದಲ್ಲಾಳಿಯ ಕೈಗೂ ಹಣ ನಿಲುಕದಂತೆ ನೇರವಾಗಿ ರೈತರಿಗೆ ಅದರ ಪ್ರತಿಫಲ ದೊರೆಯುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಹಿರಿಯ ರಾಜಕಾರಣಿ ವೀರಪ್ಪ ಮೊಯಿಲಿ, ಸಚಿವರುಗಳಾದ ಡಿ ಕೆ ಶಿವಕುಮಾರ್, ಕೃಷ್ಣ ಭೈರೇಗೌಡ ಮತ್ತು ಶಿವಶಂಕರ ರೆಡ್ಡಿ, ದೊಡ್ಡಬಳ್ಳಾಪುರ ಶಾಸಕರು, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+