ಗೋಡಂಬಿ ರಫ್ತಿನಲ್ಲಿ ಭಾರೀ ಇಳಿಕೆ, ರೈತರೇ ಆತಂಕ ಬೇಡ

ಬೆಂಗಳೂರು, ಜುಲೈ 31; ಗೋಡಂಬಿ ಬಳಕೆ ಹೆಚ್ಚಾಗುತ್ತಿದೆ, ಮತ್ತೊಂದು ಕಡೆ ದರಗಳು ಸಹ ಏರಿತ್ತಿವೆ. ಆದರೆ ಸಂಸ್ಕರಿಸಿದ ಗೋಡಂಬಿಯ ರಫ್ತು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಕುರಿತು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ರೈತರಿಗೆ ಅಭಯ ನೀಡಲಾಗಿದೆ.

ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ)ದ ಮಾಹಿತಿ ಪ್ರಕಾರ ಕಳೆದ ವರ್ಷದ 75,450 ಟನ್ ಗೋಡಂಬಿಯ ರಫ್ತಿಗೆ ಹೋಲಿಕೆ ಮಾಡಿದರೆ ಈ ವರ್ಷ ಶೇ 21ರಷ್ಟು ರಫ್ತು ಕಡಿಮೆಯಾಗಿದೆ.

cashewnut-exports-dip-21-per-cent

ಕಳೆದ ಕೆಲವು ವರ್ಷಗಳಿಂದ ಗೋಡಂಬಿ ಸಂಸ್ಕರಣೆಗೆ ಭಾರತ ಹಬ್ ಆಗಿ ಬದಲಾಗಿದೆ. ಕಚ್ಚಾ ಗೋಡಂಬಿಯನ್ನು ತರಿಸಿಕೊಂಡು ಸಂಸ್ಕರಿಸಿ, ರಫ್ತು ಮಾಡುತ್ತದೆ. ಈಗ ಮಾರುಕಟ್ಟೆಯಲ್ಲಿ ಉತ್ತಮ ದರವೂ ಇದೆ. ಆದರೆ ಇದೇ ಸಮಯದಲ್ಲಿ ರಫ್ತಿನ ಪ್ರಮಾಣ ಕಡಿಮೆಯಾಗಿದೆ.

ಮಾರುಕಟ್ಟೆ ಅಂಕಿ, ಅಂಶಗಳು; ಭಾರತ 2022-23ರಲ್ಲಿ 1.3 ಮಿಲಿಯನ್ ಟನ್ ಕಚ್ಚಾ ಗೋಡಂಬಿಯನ್ನು ಆಮದು ಮಾಡಿಕೊಂಡಿದೆ. 2016ಕ್ಕೆ ಹೋಲಿಕೆ ಮಾಡಿದರೆ ಹೋಲ್‌ಸೆಲ್ ದರದಲ್ಲಿ ಭಾರೀ ಇಳಿಕೆಯಾಗಿದೆ. ರಫ್ತಿನ ಪ್ರಮಾಣ ಕಡಿಮೆಯಾದರೂ ಸಹ ದೇಶಿಯವಾಗಿ ಬೇಡಿಕೆ ಹೆಚ್ಚಾಗುತ್ತಿದೆ ಎಂಬುದು ರೈತರಿಗೆ ಸಮಾಧಾನದ ಸಂಗತಿಯಾಗಿದೆ.

ಭಾರತದಲ್ಲಿ ಅಡುಗೆಯಿಂದ ಸಿಹಿ ತಿನಿಸು ತಯಾರಿ ತನಕ ಗೋಡಂಬಿಗೆ ಬೇಡಿಕೆ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ದೇಶಿಯವಾಗಿಯೇ ಶೇ 15ರಷ್ಟು ದರ ಹೆಚ್ಚು ಸಿಗುತ್ತಿದೆ ಎಂದು ಮಾರಾಟಗಾರರು ಹೇಳಿದ್ದಾರೆ. ಭಾರತದಲ್ಲಿಯೇ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ದೇಶದ ಅತಿ ದೊಡ್ಡ ಗೋಡಂಬಿ ಸಂಸ್ಕರಣೆ ಹಬ್ ಆಗಿದೆ. ಉಳಿದಂತೆ ಗೋವಾ, ಕೇರಳ, ಆಂಧ್ರ ಪ್ರದೇಶದಲ್ಲಿಯೂ ಉದ್ಯಮ ಬೆಳೆಯುತ್ತಿದೆ.

ದೇಶಿಯವಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಗೇರು ಬೆಳೆಯುವ ಪ್ರದೇಶಗಳನ್ನು ಸಹ ವಿಸ್ತರಣೆ ಮಾಡಲು ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯಕ್ಕೆ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ 1.2 ಲಕ್ಷ ಹೆಕ್ಟೇರ್‌ಗಳಿಗೆ ಬೆಳೆ ವಿಸ್ತರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಸುಮಾರು 25,629 ಹೆಕ್ಟೇರ್ ಪ್ರದೇಶದಲ್ಲಿ ಸದ್ಯ ಗೇರು ಬೆಳೆಯಲಾಗುತ್ತಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರೈತರು ರಬ್ಬರ್, ಅಡಿಕೆಗೆ ಪರ್ಯಾಯವಾಗಿ ಗೇರು ಬೆಳೆಯ ಬೇಸಾಯ ಆರಂಭಿಸುತ್ತಿದ್ದಾರೆ. ಗೋಡಂಬಿ ಕೆಜಿಗೆ 80 ರಿಂದ 100 ರೂ. ಆಗಿರುವುದು ರೈತರ ಉತ್ಸಾಹವನ್ನು ಸಹ ಹೆಚ್ಚಿಸಿದೆ. ಆದರೆ ಕಚ್ಚಾ ಗೋಡಂಬಿಯನ್ನು ಮಾರಾಟ ಮಾಡಿದರೆ ಅಷ್ಟು ಲಾಭ ಸಿಗುವುದಿಲ್ಲ ಎಂಬುದು ರೈತರ ವಾದ.

ಗೇರು ಸಂಸ್ಕರಣೆಯಲ್ಲಿ ವಿದೇಶಕ್ಕೆ ಭಾರತ ಪ್ರತಿಸ್ಪರ್ಧೆಯೊಡ್ಡುವುದು ಕಷ್ಟವಾಗಿದೆ. ಅದರಲ್ಲೂ ವಿಯೆಟ್ನಾಂನಲ್ಲಿ ಗೋಡಂಬಿ ಸಂಸ್ಕರಣೆ ಉದ್ಯಮ ಬೃಹದಾಕಾರವಾಗಿ ಬೆಳೆದಿದೆ. ಅಲ್ಲಿಗೆ ಹೋಲಿಕೆ ಮಾಡಿದರೆ ಭಾರತದ ಸಂಸ್ಕರಣೆ ವೆಚ್ಚ 4 ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ 80 ಕೆಜಿ ಬ್ಯಾಗ್‌ಗೆ 3,600 ರೂ. ಆದರೆ ವಿಯೆಟ್ನಾನಲ್ಲಿ ಇದೇ ಬ್ಯಾಗ್‌ ವೆಚ್ಚ 800 ರೂ. ಆಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಗೋಡಂಬಿಯ ಬೆಲೆ ಕೆಜಿಗೆ 630 ಆದರೆ, ರಫ್ತು ಮಾಡಿದರೆ ಕೆಜಿಗೆ 560 ರೂ. ಆಗುತ್ತದೆ. ಗೋಡಂಬಿ ಸಂಸ್ಕರಣೆ ಉದ್ಯಮದಿಂದ ದೇಶದಲ್ಲಿ ಸುಮಾರು 1.5 ಮಿಲಿಯನ್ ಜನರು ಪ್ರತ್ಯಕ್ಷ, ಪರೋಕ್ಷವಾಗಿ ಜೀವನ ಕಂಡುಕೊಂಡಿದ್ದಾರೆ. ರಫ್ತು ಕಡಿಮೆಯಾದರೂ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದು ಸಮಾಧಾನದ ಸಂಗತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+