ಕೃಷಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಭಾರತೀಯ ಕಿಸಾನ್ ಒಕ್ಕೂಟ

ನವದೆಹಲಿ, ಡಿಸೆಂಬರ್ 11: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆಯನ್ನು ಮುಂದುವರೆಸಿವೆ. ಇದೀಗ ಭಾರತೀಯ ಕಿಸಾನ್ ಒಕ್ಕೂಟವು ಈ ಕಾಯ್ದೆಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
'
ಈ ಕಾಯ್ದೆಗಳು ರೈತರನ್ನು ದುರ್ಬಲಗೊಳಿಸಿವೆ ಎಂದು ಆರೋಪಿಸಿ ಒಕ್ಕೂಟವು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಕನಿಷ್ಠ ಬೆಂಬಲ ಬೆಲೆಯ ಭರವಸೆ ಹಾಗೂ ಕೃಷಿ ಕಾಯ್ದೆಗಳ ಇತರೆ ನಿಯಮಗಳಿಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಲಿಖಿತ ಪ್ರಸ್ತಾವವನ್ನು ರೈತ ಒಕ್ಕೂಟಗಳು ತಿರಸ್ಕರಿಸಿ, ತಮ್ಮ ಬೇಡಿಕೆಗಳು ಈಡೇರದೇ ಹೋದರೆ ರೈಲು ಹಳಿಗಳಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸುವುದಾಗಿ ಗುರುವಾರ ಎಚ್ಚರಿಕೆ ನೀಡಿವೆ.

 Bharatiya Kisan Union Moved To Supreme Court Opposing New Farm Laws

ಹೊಸ ಕೃಷಿ ಕಾಯ್ದೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಬುಧವಾರ ಡಿ.9ರಂದು ಸರ್ಕಾರದ ಲಿಖಿತ ಪ್ರಸ್ತಾವವನ್ನು ರೈತ ಒಕ್ಕೂಟವು ತಿರಸ್ಕರಿಸಿತ್ತು. ಸರ್ಕಾರ ಹಾಗೂ ರೈತರ ನಡುವೆ ಆರನೇ ಬಾರಿಯ ಮಾತುಕತೆ ನಡೆಯಬೇಕಿದ್ದು, ಪ್ರಸ್ತಾವ ನಿರಾಕರಣೆ ಹಿನ್ನೆಲೆಯಲ್ಲಿ ಮಾತುಕತೆ ರದ್ದಾಗಿತ್ತು. ತಮ್ಮ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದು, ಈ ಕಾಯ್ದೆಗಳನ್ನು ರದ್ದುಗೊಳಿಸಬೇಕೇ ವಿನಃ ತಿದ್ದುಪಡಿಗೆ ಒಪ್ಪುವುದಿಲ್ಲ ಎಂದು ಖಡಾಖಂಡಿತವಾಗಿ ರೈತರು ತಿಳಿಸಿದ್ದಾರೆ. ಡಿಸೆಂಬರ್ 14ರಂದು ರಾಷ್ಟ್ರಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ತಿಳಿಸಿವೆ. ಈ ನಡುವೆ ಸುಪ್ರೀಂ ಕೋರ್ಟ್ ನಲ್ಲಿಯೂ ರೈತ ಸಂಘವು ಅರ್ಜಿ ಸಲ್ಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+